ಜೆಸ್ಕಾಂ ಮುನಿರಾಬಾದ್ : ಐಪಿ ಸೆಟ್‌ಗೆ ಆಧಾರ್ ಜೋಡಣೆ ಮಾಡಲು ರೈತರಿಗೆ ಸೂಚನೆ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 23- ಕೃಷಿ ಪಂಪ್‌ಸೆಟ್‌ಗಳಿಗೆ(ಐ.ಪಿ ಸೆಟ್) ಅಧಿಕೃತ ವಿದ್ಯುತ್ ಸಂಪರ್ಕ ಹೊಂದಿರುವ ಎಲ್ಲಾ ವಿದ್ಯುತ್ ಸ್ಥಾವರಗಳ ಆರ್‌ಆರ್ ಸಂಖ್ಯೆಗಳಿಗೆ ಆಧಾರ್ ಸಂಖ್ಯೆಯನ್ನು ಕಡ್ಡಾಯವಾಗಿ ಲಿಂಕ್ ಮಾಡಿಸುವಂತೆ ಹಾಗೂ ಐ.ಪಿ ಸೆಟ್ ಆರ್‌ಆರ್ ಸಂಖ್ಯೆಗಳಿಗೆ ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡಿಸಿದ ಆರ್‌ಆರ್ ಸಂಖ್ಯೆಗಳಿಗೆ ಮಾತ್ರ ಸರ್ಕಾರದ ವಿದ್ಯುತ್‌ಗೆ ಸಂಬಂಧಿಸಿದ ಸಬ್ಸಿಡಿ ಮೊತ್ತವನ್ನು ಬಿಡುಗಡೆ ಮಾಡಲಾಗುವುದು ಎಂದು ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ(ಕೆಇಆರ್.ಸಿ) ಆದೇಶ ಹೊರಡಿಸಿದೆ.
ಅದರಂತೆ ಜೆಸ್ಕಾಂ ಮುನಿರಾಬಾದ್ ವ್ಯಾಪ್ತಿಯ ಎಲ್ಲಾ ಅಧಿಕೃತ ಐ.ಪಿ ಸೆಟ್ ಹೊಂದಿರುವ ವಿದ್ಯುತ್ ಸ್ಥಾವರಗಳ ಆರ್‌ಆರ್ ಸಂಖ್ಯೆಗಳಿಗೆ ಆಧಾರ್ ಸಂಖ್ಯೆಯನ್ನು ಕಡ್ಡಾಯವಾಗಿ ಲಿಂಕ್ ಮಾಡಿಸುವಂತೆ ಎಲ್ಲಾ ರೈತರಿಗೆ ಮೌಖಿಕವಾಗಿ, ಲಿಖಿತ ರೂಪದಲ್ಲಿ ಮತ್ತು ಸಾಮಾಜಿಕ ಜಾಲತಾಣದ ಮೂಲಕ ಅಧಿಕೃತ ಐ.ಪಿ. ಸೆಟ್ ಗ್ರಾಹಕರಿಗೆ ತಿಳಿಸಲಾಗಿರುತ್ತದೆ.
ಆದಾಗ್ಯೂ ಇನ್ನೂ ಬಹಳಷ್ಟು ಅಧಿಕೃತ ಐ.ಪಿ ಸೆಟ್ ಗ್ರಾಹಕರು ಐ.ಪಿ ಸೆಟ್ ವಿದ್ಯುತ್ ಸ್ಥಾವರಗಳ ಆರ್‌ಆರ್ ಸಂಖ್ಯೆಗಳಿಗೆ ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡಿಸಿರುವುದಿಲ್ಲ. ಆದ್ದರಿಂದ ಕೆ.ಇ.ಆರ್.ಸಿ ಆದೇಶದನ್ವಯ ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡಿಸದ ಅಧಿಕೃತ ಐ.ಪಿ. ಸೆಟ್ ಗ್ರಾಹಕರು ಕಡ್ಡಾಯವಾಗಿ ಲಿಂಕ್ ಮಾಡಿಸುವಂತೆ ಕೋರಲಾಗಿದೆ. ತಪ್ಪಿದಲ್ಲಿ ಸರ್ಕಾರದ ಸಬ್ಸಿಡಿ ಮೊತ್ತ ಬಿಡುಗಡೆಯಾಗುವುದಿಲ್ಲ ಎಂದು ಜೆಸ್ಕಾಂ ಮುನಿರಾಬಾದ್‌ನ ಕಾರ್ಯ ಮತ್ತು ಪಾಲನಾ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
