ಹಾಲು ಒಕ್ಕೂಟದಿಂದ ತರಬೇತಿ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 5- ರಾಯಚೂರು ಬಳ್ಳಾರಿ ಕೊಪ್ಪಳ ಮತ್ತು ವಿಜಯನಗರ ಜಿಲ್ಲೆಯ ಹಾಲು ಒಕ್ಕೂಟ ಬಳ್ಳಾರಿ ಮತ್ತು ಕ್ಷೀರ ಸಂಜೀವಿನಿ ಅಂತ ೪ ಅಡಿಯಲ್ಲಿ ಅಳವಡಿಸಲಾಗಿರುವ ಕೊಪ್ಪಳ ಜಿಲ್ಲೆಯ ಬೆಟಿಗೇರಿ ಬೂದಗುಪ್ಪ ದೇವಲಾಪುರ ಕೆ.ಹೊಸೂರ್ ಕೊರಟಕೇರಿ ಕಲ್ಲೂರ್ ಸಹಕಾರ ಸಂಘದ ಆದ್ಯತ ಸದಸ್ಯರಿಗೆ ಒಂದು ದಿನದ ತರಬೇತಿ ಕಾರ್ಯಕ್ರಮ ನೆರವೆರಿತು.
ಅಧ್ಯಕ್ಷತೆಯನ್ನು ವಹಿಸಿದ ವೆಂಕನಗೌಡ ಹಿರೇಗೌಡ್ರ ನಿರ್ದೇಶಕರು ರಾಯಚೂರು ಬಳ್ಳಾರಿ ಕೊಪ್ಪಳ ವಿಜಯನಗರ ಜಿಲ್ಲಾ ಹಾಲು ಒಕ್ಕೂಟ ಬಳ್ಳಾರಿ ಮತ್ತು ಉದ್ಘಾಟಕರಾಗಿ ರಾಹುಲ್ ರತ್ನಂ ಪಾಂಡೆ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿಲ್ಲಾ ಪಂಚಾಯತ್ ಕೊಪ್ಪಳ ಹಾಗೂ ಮುಖ್ಯ ಅತಿಥಿಗಳಾಗಿ ಎಮ್ಮ ಸತ್ಯನಾರಾಯಣ ನಿರ್ದೇಶಕರು ಶಿವಪ್ಪ ವಾದಿ ನಿರ್ದೇಶಕರು ಕವಿತಾ ಗುಳಗಣ್ಣನವರ್ ನಿರ್ದೇಶಕರು ಪೀರಿಯನಾಯಕ್ ವ್ಯವಸ್ಥಾಪಕ ನಿರ್ದೇಶಕರು ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಹೇಶ್ ಲಕ್ಕಣ್ಣವರ್ ವ್ಯವಸ್ಥಾಪಕರು, ಮಲ್ಲಯ್ಯ, ಡಾ.ಶರಣಬಸವ ರೋಣ, ಗಂಗಾಧರ್ ಉಪವ್ಯವಸ್ಥಾಪಕರು ಕೊಪ್ಪಳ, ವೆಂಕಟೇಶ್ ಜವಳಿ ಉಪವ್ಯವಸ್ಥಾಪಕರು ಹಾಗೂ ಕೊಪ್ಪಳ ಜಿಲ್ಲೆಯ ಎಲ್ಲಾ ಅಧಿಕಾರಿಗಳು ಉಪಸ್ಥಿತರಿದ್ದರು.
