
ಕೊಪ್ಪಳ ಪಿಕಾರ್ಡ ಬ್ಯಾಂಕು ಸಾಲ ವಸೂಲಾತಿಯಲ್ಲಿ ಜಿಲ್ಲೆಗೆ ಪ್ರಥಮ
ಬ್ಯಾಂಕಿನ ಅಧ್ಯಕ್ಷರಾದ ಗವಿಸಿದ್ದಪ್ಪ ಹುಳ್ಳಿ
ಕರುನಾಡ ಬೆಳಗು ಸುದ್ದಿ
ಕೊಪ್ಪಳ,೩೧- ನಗರದ ಪಿಕಾರ್ಡ ಬ್ಯಾಂಕ ೨೦೨೩-೨೦೨೪ ನೇ ಸಾಲಿನಲ್ಲಿ ಅತ್ಯುತ್ತಮ ವಸೂಲಿ ಮಾಡುವ ಮೂಲಕ ಜಿಲ್ಲೆಯಲ್ಲಿ ಪ್ರಥಮ ಸ್ಥಾನ ಪಡೆದಿದೆ.
ಪ್ರಸಕ್ತ ೨೦೨೩-೨೦೨೪ ನೇ ಸಾಲಿನಲ್ಲಿ ೭೩ ಸದಸ್ಯರಿಗೆ ರೂ: ೧೭೪.೨೦ ಲಕ್ಷ ಸಾಲ ನೀಡಲಾಗಿದೆ. ರೈತರಿಗೆ ಬಡ್ಡಿಮನ್ನಾ ಸೌಲಬ್ಯ ಯೋಜನೆಯನ್ನ ಜಾರಿಗೆ ನೀಡಿದ್ದ ಪ್ರಯುಕ್ತ ನಮ್ಮ ಬ್ಯಾಂಕಿನ ೧೦೧ ಸುಸ್ತಿಸಾಲಗಾರರಿಂದ ರೂ: ೭೧.೯೧ ಸುಸ್ತಿ ಅಸಲು ವಸೂಲಾಗಿದ್ದು ಇದರ ಪೈಕಿ ೭೧.೯೧ ಲಕ್ಷ ರೂ ಬಡ್ಡಿ ಮನ್ನಾದಲ್ಲಿ ೧೦೧ ಸದಸ್ಯರು ಸೌಲಭ್ಯ ಪಡೆಯುವುದರೊಂದಿಗೆ ಸಾಲದಿಂದ ಋಣಮುಕ್ತರಾಗಿದ್ದಾರೆ ಎಂದು ತಿಳಿಸಿದ್ದಾರೆ
ಬ್ಯಾಂಕು ೫೦೮ ಸದಸ್ಯರಿಗೆ ರೂ: ೧೩೫೫.೫೮ ಲಕ್ಷ ಸಾಲ ನೀಡಿದೆ. ಈ ಸಾಲಗಾರರಿಂದ ಪ್ರಸಕ್ತ ಸಾಲಿಗೆ ದಿ: ೩೧.೩೦.೨೦೨೪ ಕ್ಕೆ ರೂ: ತಗಾದೆ ೬೭೫.೭೪ ಲಕ್ಷ ಇದ್ದು ಇದರ ಪೈಕಿ ವಸೂಲಾತಿ ರೂ: ೫೨೫.೭೭ ಲಕ್ಷ ಬಾಕಿ ರೂ: ೧೪೯.೯೭ ಲಕ್ಷ (೧೩೨ ಸಾಲಗಾರ ಸದಸ್ಯರಿಂದ) ಬಾಕಿ ಉಳಿದಿರುತ್ತದೆ. ೪೦೯ ಸಾಲಗಾರ ಸದಸ್ಯರಿಂದ ಸಾಲ ಹೊರಬಾಕಿ ರೂ: ೮೭೩.೫೭ ಲಕ್ಷ ಇರುತ್ತದೆ. ದಿ: ೩೧.೩.೨೦೨೪ ಕ್ಕೆ ಶೇಕಡಾ ೭೭.೮೧% ವಸೂಲಾತಿ ಮಾಡಿ ಕೊಪ್ಪಳ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದೆ.
ಈ ಬ್ಯಾಂಕಿನ ಸಾಧನೆಯಲ್ಲಿ ಆಡಳಿತ ಮಂಡಳಿಯವರು ಅಧ್ಯಕ್ಷರು, ಉಪಾದ್ಯಕ್ಷರು, ನಿದೇರ್ಶಶಕರು ಉತ್ತಮವಾಗಿ ವಸೂಲಾತಿಗೆ ಸಹಕಾರ ನೀಡಿದರು ಮತ್ತು ಸದಸ್ಯರು ಸಕಾಲಕ್ಕೆ ಸಾಲ ಮರುಪಾವತಿ ಬ್ಯಾಂಕಿನ ಪ್ರಗತಿಗೆ ಅಭಿವೃದ್ದಿಗೆ ಸಹಕರಿದ್ದಾರೆ. ಜೊತೆಗೆ ಬ್ಯಾಂಕಿನ ಎಲ್ಲ ಸಿಬ್ಬಂದಿಯವರು ಕಠಿಣ ಪರಿಶ್ರಮ ವಹಿಸಿದ್ದಾರೆ ಎಂದು ಬ್ಯಾಂಕಿನ ಅಧ್ಯಕ್ಷರಾದ ಗವಿಸಿದ್ದಪ್ಪ ಹುಳ್ಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.