
ಕಂಡ ಕಂಡಲ್ಲಿ ವಾಹನ ನಿಲ್ಲಿಸುವವರಿಗೆ ಪೊಲೀಸ್ ಬಿಗ್ ಶಾಕ್
ಕರುನಾಡ ಬೆಳಗು ಸುದ್ದಿ
ಸಿರುಗುಪ್ಪ, 26- ನಗರದಲ್ಲಿ ಇನ್ನು ಮುಂದೆ ಎಲ್ಲಂದರಲ್ಲಿ ದ್ವಿಚಕ್ರ ವಾಹನ ನಿಲ್ಲಿಸುವವರಿಗೆ ಶಾಕ್ ಕಾದಿದೆ.
ನಗರದ ರಸ್ತೆಗಳ ಇಕ್ಕೆಲಗಳಲ್ಲಿ ದ್ವಿ ಚಕ್ರ ವಾಹನ ಮತ್ತು ಕಾರುಗಳನ್ನು ರಸ್ತೆಯಲ್ಲಿ ನಿಲ್ಲಿಸುವದನ್ನು ತಪ್ಪಿಸಲು ಎಷ್ಟೇ ದಂಡ ಹಾಕಿದರೂ ಕಡಿಮೆಯಾಗದ ಕಾರಣ ಈಗ ಪೊಲೀಸ್ ಇಲಾಖೆ ಲಾಕರ್ ಗಳನ್ನು ಬಳಸುತ್ತದೆ. ಸಿರುಗುಪ್ಪ ವಲಯ ಡಿವೈಎಸ್ಪಿ ವೆಂಕಟೇಶ ಉಗಿಬಂಡಿ ಅವರು ನಾಳೆ ಬೆಳಿಗ್ಗೆ ಯಿಂದ ಲಾಕ್ ಲಾಕರ್ ತರಸಿ ಕಾರ್ಯಾಚರಣೆ ಮಾಡಿಸಲಿದ್ದಾರೆ.
ಇಂದು ಬೆಳಿಗ್ಗೆ ಖುದ್ದು ತಾವೇ ರಸ್ತೆ ಮೇಲೆ ನಿಲ್ಲಿಸಿದ ವಾಹನಗಳಿಗೆ ಚಕ್ರಕ್ಕೆ ಲಾಕ್ ಹಾಕಿ ದಂಡಿ ಕಟ್ಟಿಸಿ ಮತ್ತು ಅವರಿಗೆ ವಾಹನ ನಿಲ್ಲಿಸದಂತೆ ಜಾಗೃತಿ ಮೂಡಿಸಿದರು
ನಾಳೆಯಿಂದ ನಗರದ ಬಹುತೇಕ ಸ್ಥಳಗಳಲ್ಲಿ ಕಾರ್ಯಚರಣೆ ಮಾಡಲಾಗುತ್ತದೆ ಎಂದರು. ಆದ್ದರಿಂದ ವಾಹನಗಳನ್ನು ಸರಿಯಾದ ಸ್ಥಳಗಳಲ್ಲಿ ನಿಲ್ಲಿಸ ಬೇಕೆಂದರು.