
ರಸ್ತೆ ಕಾಮಗಾರಿ ವಿಳಂಬ ವಕೀಲರಿಂದ ರಸ್ತೆ ತಡೆದು ಪ್ರತಿಭಟನೆ
ಕರುನಾಡ ಬೆಳಗು ಸುದ್ದಿ
ಸಿರುಗುಪ್ಪ, 22- ನಗರದ ಹಿರಿಯ ಸಿವಿಲ್ ನ್ಯಾಯಾಲಯದ ಮುಂದೆ ಸಿರುಗುಪ್ಪ ವಕೀಲರ ಸಂಘದ ವತಿಯಿಂದ ಒಂದು ತಾಸು ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಲಾಯಿತು.
ರಾಷ್ಟಿçÃಯ ಹೆದ್ದಾರಿ ೧೫೦ಎ (ಚಾಮರಾಜನಗರದಿಂದ ಜೇವರ್ಗಿವರೆಗೆ) ರಸ್ತೆ ಕಾಮಗಾರಿಯು ತೆಕ್ಕಲಕೋಟೆಯಿಂದ ದಢೇಸೂಗೂರು ಸೇತುವೆಯವರೆಗೆ ಸುಮಾರು ೧೫ಕಿಮೀ ರಸ್ತೆ ಕಾಮಗಾರಿಯ ಕಳೆದ ಮೂರು ವರ್ಷದಿಂದ ನಿಧಾನ ಗತಿಯಿಂದ ನಡೆಯುತ್ತಿದ್ದು ಇಲ್ಲಿಯವರೆಗೂ ಯಾವುದೇ ರೀತಿಯ ಸಂಪೂರ್ಣ ಕಾಮಗಾರಿ ಮುಗಿದಿಲ್ಲ ಇದರಿಂದ ತೆಕ್ಕಲಕೋಟೆ ಸಿರುಗುಪ್ಪದ ವರೆಗೆ ಮತ್ತು ಸಿರುಗುಪ್ಪದಿಂದ ವರೆಗೆ ಪ್ರಯಾಣಿಸಲು ಕನಿಷ್ಠ ಒಂದುವರೆ ತಾಸು ಬೇಕಾಗುತ್ತದೆ.
ಈ ೧೫ಕಿಮೀ ಸಂಪೂರ್ಣ ಧೂಳಿನಿಂದ ಸಾರ್ವಜನಿಕರ ಆರೋಗ್ಯ ಸಂಪೂರ್ಣ ಹದ ಗೆಡುತ್ತಿದ್ದು ಸಾರ್ವಜನಿಕರಿಗೆ ಹಾಗೂ ಮಕ್ಕಳ ಆರೋಗ್ಯದಲ್ಲಿ ತುಂಬಾ ತೊಂದರೆ ಯಾಗಿದೆ ಈ ಧೂಳಿನಿಂದ ಚಿಕ್ಕ ಮಕ್ಕಳಿಗೆ ಕರುಳಿನ ಸಮಸ್ಯೆ ಮತ್ತು ಚರ್ಮದ ತೊಂದರೆ ಮತ್ತು ಗಂಟಲಿನ ಸಮಸ್ಯೆಯಾಗಿದೆ ಅಲ್ಲದೆ ಈ ರಸ್ತೆಯಲ್ಲಿ ಕಂಡು ಬರುವ ಗುಂಡಿಗಳಿAದ ಅನೇಕ ಅಪಘಾತಗಳು ಸಂಭವಿಸಿದ್ದು ಹಲವಾರು ಸಾರ್ವಜನಿಕರ ಪ್ರಾಣಗಳನ್ನು ಕಳೆದುಕೊಂಡಿರುತ್ತಾರೆ.
ಇಷ್ಟೆಲ್ಲಾ ತೊಂದರೆಯಾದರೂ ರಸ್ತೆಯ ಪ್ರಾಧಿಕಾರದವರು ಯಾವುದೇ ಕ್ರಮ ಕೈಗೊಂಡಿರುವುದಿಲ್ಲ ರಾಷ್ಟಿçÃಯ ಹೆದ್ದಾರಿ ೧೫೦ಎ ತೆಕ್ಕಲಕೋಟೆಯಿಂದ ದಡೆಸೂಗೂರು ಸೇತುವೆ ವರೆಗೆ ನಡೆಯುವ ೧೫ ಕಿ ಮೀ ರಸ್ತೆ ಕಾಮಗಾರಿಯ ಬಗ್ಗೆ ವಕೀಲರ ಸಂಘದ ತಾಲೂಕು ಅಧ್ಯಕ್ಷ ಯು ವೆಂಕೋಬ ಆಕ್ರೋಶವನ್ನು ವ್ಯಕ್ತಪಡಿಸಿದರು.
ರಾಷ್ಟಿçÃಯ ಹೆದ್ದಾರಿ ೧೫೦ ಎ ತೆಕ್ಕಲಕೋಟೆಯಿಂದ ದಡೇಸೂಗೂರು ಸೇತುವರೆಗೆ ನಡೆಯುವ ೧೫ ಕಿಮೀ ರಸ್ತೆ ಕಾಮಗಾರಿಯನ್ನು ಬೇಗ ಮುಗಿಸಿ ಕೊಡಬೇಕೆಂದು ವಕೀಲರ ಸಂಘದ ವತಿಯಿಂದ ಗ್ರೇಡ್-೨ ತಹಶೀಲ್ದಾರ್ ಸತ್ಯಮ್ಮ ಇವರ ಮುಖಾಂತರ ಚಿತ್ರದುರ್ಗದ ರಾಷ್ಟಿçÃಯ ಹೆದ್ದಾರಿ ಪ್ರಾಧಿಕಾರ ಕಚೇರಿಗೆ ಮನವಿ ಸಲ್ಲಿಸಲಾಯಿತು.
ವಕೀಲ ಮುನಿಸ್ವಾಮಿ ಮಾತನಾಡಿ, ರಾಷ್ಟಿçÃಯ ಹೆದ್ದಾರಿ ಕಾಮಗಾರಿ ವಿಳಂಬದಿAದಾಗಿ ೨೩ಕ್ಕೂ ಹೆಚ್ಚು ಸಾವುಗಳು ಸಂಭವಿಸಿವೆ ಆದಾ ಗ್ಯೂ ಪ್ರಾಧಿಕಾರ ಯಾವ ಕೆಲಸ ಮಾಡದೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವಕೀಲರ ಸಂಘದ ಅಧ್ಯಕ್ಷ ಯು.ವೆಂಕೋಬ ಮಾತನಾಡಿ, ನಮಕಾ ವಸ್ತೆ ಕಾಮಗಾರಿ ನಡೆಯುತ್ತಿದ್ದು ಹೆದ್ದಾರಿ ಪ್ರಾಧಿಕಾರದ ನೀತಿ ನಿಯಮ ಪಾಲಿಸದ ಗುತ್ತಿಗೆದಾರರನ್ನು ಕೂಡಲೇ ಕಾನೂನಾತ್ಮಕ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ವಿಜಯನಗರ ರಾಷ್ಟಿçÃಯ ಹೆದ್ದಾರಿ ಪ್ರಾದಿಕಾರದ ಎಇ ಪ್ರತಾಪ್ ನಾಯಕ ಅವರಿಗೆ ಮನವಿ ಸಲ್ಲಿಸಿದರು.
ಉಪಾಧ್ಯಕ್ಷ ಎಂ.ಶರೀಫ್ ಸಾಬ್, ಕಾರ್ಯದರ್ಶಿ ಎಂ.ಶಿವಕುಮಾರ ಸ್ವಾಮಿ, ಖಜಾಂಚಿ ಸಣ್ಣ ಹುಸೇನಪ್ಪ, ಹಿರಿಯ ವಕೀಲ ಬಿ.ಜಿ.ಗುಂಡಳ್ಳಿ, ಸಿದ್ದಲಿಂಗಯ್ಯ ಹಿರೇಮಠ, ಎ.ಶಿವರುದ್ರಗೌಡ, ಕೆ.ವೀರೇಶ್‌ಗೌಡ, ಕೆ.ಮಂಜುನಾಥ, ಮಲ್ಲಿಗೌಡ, ಎನ್.ಅಬ್ದುಲ್ ಸಾಬ್ ರಾರಾವಿ, ಎಸ್.ಮಂಜುನಾಥ್‌ಗೌಡ, ಜಿ.ವಸಂತಕುಮಾರ್, ಎನ್.ನಾಗರಾಜ, ರಾಜಭಕ್ಷಿ, ಹೆಚ್.ಮಾರುತಿ, ಎಸ್.ವೆಂಕಟೇಶ್, ಸುರೇಶ್ ರೆಡ್ಡಿ, ಯು.ವೀರೇಶ್, ದೊಡ್ಡನಗೌಡ, ಹೆಚ್.ರುದ್ರಪ್ಪ, ಕೆ.ಹುಸೇನಪ್ಪ ನಾಯಕ, ಪಂಪಾಪತಿ ಓತೂರು ಹಾಗೂ ಇನ್ನಿತರರು ಇದ್ದರು.