ಮಾನವೀಯ ಮೌಲ್ಯಗಳಿಗೆ ಆಧ್ಯತೆ ನೀಡಿ : ಸಂತೋಷ ಪಾಟೀಲ
ಕರುನಾಡ ಬೆಳಗು ಸುದ್ದಿ
ಯಲಬುರ್ಗಾ, 18- ಜವಬ್ದಾರಿಯ ಅರಿವನ್ನು ಇಟ್ಟು ಕೊಂಡು ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕಾಗಿಧೆ ಎಂದು ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿಗಳಾದ ಸಂತೋಷ ಪಾಟೀಲ ಬಿರಾದಾರ ಹೇಳಿದರು.
ಪಟ್ಟಣದ ಎಸ್.ಎ.ನಿಂಗೋಜಿ ಬಿಇಡಿ ಕಾಲೇಜಿನಲ್ಲಿ ಏರ್ಪಡಿಸಿದ ಪೌರತ್ವ ತರಬೇತಿಯನ್ನು ಉದ್ಘಾಟಿಸಿ ಮಾತನಾಡಿ, ದೇಶಭಕ್ತಿಗಿಂತ ಮಾನವಿಯತೆ ದೊಡ್ಡದು ಅದನನ್ನು ಅಳವಡಿಸಿಕೊಂಡಾಗ ನಾವು ನಿಜವಾದ ಮಾನವರಾಗುತ್ತೇವೆ. ಸತ್ಯ ಶುದ್ಧ ಕಾಯಕಕ್ಕೆ ಮಹತ್ವವನ್ನು ನೀಡಬೇಕಾಗಿದೆ. ಶ್ರಮ ಸಂಸ್ಕೃತಿ ಮಾಯವಾಗುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದರು.
ಗ್ರಾಮೀಣ ಭಾಗದಲ್ಲಿ ಸ್ವಚ್ಛತೆಗೆ ಆಧ್ಯತೆ ನೀಡಿದಾಗ ಆರೋಗ್ಯದ ಪರಿಕಲ್ಪನೆ ಬರುತ್ತದೆ ಆ ದಿಶೆಯಲ್ಲಿ ಎಲ್ಲರೂ ಗಮನಹರಿಸಬೇಕಾದ ಅಗತ್ಯತೆ ಇದೆ ಎಂದರು.
ಮAಜುನಾಥ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಬಸವರಾಜ ಉಳ್ಳಾಗಡ್ಡಿ ಧ್ವಜಾರೋಹಣಗೈದರು.
ಅಪರ ಸರಕಾರಿ ವಕೀಲ ಎಂ.ಏಸ್.ಪಾಟೀಲ, ಶರಪ್ಪ ರಾಂಪೂರ, ರಾಜಶೇಖರ ನಿಂಗೋಜಿ ಇನ್ನೀತರರು ಮಾತನಾಡಿದರು.
ಟ್ರಸ್ಟ ಅಧ್ಯಕ್ಷ ಶಶಿಕಾಂತ ನಿಂಗೋಜಿ, ರತ್ನಮ್ಮ ನಿಂಗೋಜಿ, ರವಿ ನಿಂಗೋಜಿ ಇನ್ನೀತರರು ಉಪಸ್ಥಿತರಿದ್ದರು.
ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಹಾಗೂ ಟ್ರಸ್ಟಿ ವೀರಣ್ಣ ನಿಂಗೋಜಿ ಅಧ್ಯಕ್ಷತೆ ವಹಿಸಿದ್ದರು.
ಪ್ರಾ.ಬಸನಗೌಡ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು.
