
SRS ಬಸ್ ಪಲ್ಟಿ ಹಲವರಿಗೆ ಗಾಯ
ಕರುನಾಡ ಬೆಳಗು ಸುದ್ದಿ
ಕೊಪ್ಪಳ ,29-ಜಿಲ್ಲೆಯ ಗಂಗಾವತಿ ತಾಲೂಕಿನ ಹೇಮಗುಡ್ಡ ಟೂಲ್ ಗೇಟ್ ಬಳಿ ಘಟನೆ ಎಸ್ ಆರ್ ಎಸ್ ಬಸ್ ಪಲ್ಟಿ, 20 ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯವಾದ ಘಟನೆ ಜರುಗಿದೆ.
ಗುರುವಾರ ಬೆಳಿಗ್ಗೆ ಈ ಘಟನೆ ಜರುಗಿದ್ದು ಹೈದ್ರಾಬಾದ್ ನಿಂದ ಬೆಳಗಾವಿಗೆ ಹೋಗುತ್ತಿದ್ದ ಖಾಸಗಿ ಬಸ್ ಎದುರಿಗೆ ಬಂದ ಬೋಲೆರೋ ವಾಹನಕ್ಕೆ ಡಿಕ್ಕಿ ತಪ್ಪಿಸಲು ಹೋಗಿ ಚಾಲಕನ ನಿಯಂತ್ರಣ ತಪ್ಪಿ ಬಸ್ ಪಲ್ಟಿಯಾಗಿದೆ ಎಂದು ತಿಳಿದು ಬಂದಿದೆ.
ಬಸ್ನಲ್ಲಿ ಪ್ರಯಾಣಿಸುತ್ತಿದ್ದ ಹೈದ್ರಾಬಾದ್ ಮೂಲದ ಪ್ರಯಾಣಿಕರಿಗೆ ಗಾಯಗಳಾಗಿದ್ದು ಗಾಯಾಳುಗಳು ಗಂಗಾವತಿ, ಕೊಪ್ಪಳ ಸರ್ಕಾರಿ ಆಸ್ರತ್ರೆಗಳಿಗೆ ದಾಖಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಕರಣ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.