WhatsApp Image 2024-12-04 at 6.49.36 PM

ಸಮಾಜದಲ್ಲಿ ವಕೀಲರ ಪಾತ್ರ ಬಹಳ ಮುಖ್ಯ

 ಹಿರಿಯ ಸಿವಿಲ್ ನ್ಯಾಯಾಧೀಶರು. ರಂಗಸ್ವಾಮಿ ಜೆ 

ಕರುನಾಡ ಬೆಳಗು ಸುದ್ದಿ

ಯಲಬುರ್ಗಾ 4 ಸಮಾಜದಲ್ಲಿ ವಕೀಲರ ಪಾತ್ರ ಬಹಳ ಮುಖ್ಯ ಮತ್ತು ವಕೀಲರು ತಮ್ಮ ವೃತ್ತಿ ಯಲ್ಲಿ ಶ್ರದ್ಧೆ ಪ್ರಮಾಣಿಕತೆಯಿಂದ ಕರ್ತವ್ಯ ನಿರ್ವಹಿಸಬೇಕು. ಹಿರಿಯ ಸಿವಿಲ್ ನ್ಯಾಯಾಧೀಶರಾದ ರಂಗಸ್ವಾಮಿ ಜೆ. ಅವರು
ಹೇಳಿದರು.
ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ತಾಲೂಕು ವಕೀಲರ ಸಂಘದಿಂದ ಹಮ್ಮಿಕೊಂಡಿದ್ದ ವಕೀಲರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ವಕೀಲರ ವೃತ್ತಿ ಶ್ರೇಷ್ಠವಾದ್ದದು
ಈ ದೇಶಕ್ಕೆ ವಕೀಲರ ಕೂಡುಗೆ ಅಪಾರವಾಗಿದೆ ಈ ದೇಶದ ರಾಷ್ಠ್ರಪತಿಯಾದವರು ವಕೀಲ ವೃತ್ತಿಯನ್ನ ಮಾಡಿದವರೆ ಆಗಿದ್ದಾರೆ.
ವಕೀಲರ ವೃತ್ತಿಯಲ್ಲಿ ತಮ್ಮನ್ನು ಬದಿಗಿರಿಸಿ ಕಕ್ಷಿದಾರರ ನೋವನ್ನು ಸರಿಯಾಗಿ ಅರ್ಥಮಾಡಿಕೊಂಡು ಅವರಿಗೆ ಕಾನೂನಿನ ಚೌಕಟ್ಟಿನಲ್ಲಿ ನ್ಯಾಯ ಕೊಡಿಸಲು ಮುಂದಾಗಬೇಕು ಎಂದು ತಿಳಿಸಿದರು
ವಕೀಲರ ದಿನಾಚರಣೆ ತನ್ನದೇ ಆದ ಮಹತ್ವ ಹೊಂದಿದೆ. ಈ ಹಿನ್ನೆಲೆಯಲ್ಲಿ ನಮ್ಮ ಬಳಗದಿಂದ ಗೌರವ ಸಲ್ಲಿಸುವ ಮೂಲಕ ಆಚರಿಸುತ್ತಿದ್ದೇವೆ. ಜತೆಗೆ ವಕೀಲರು ಸಹ ಸಮಾಜಮುಖಿಯಾಗಿ ಚಿಂತಿಸಿ ಜನರ ಸೇವೆಗೆ ಮುಂದಾಗಬೇಕು. ಆಗ ಮಾತ್ರ ಅವರ ಕೆಲಸಕ್ಕೆ ಗೌರವ ಸಿಗುತ್ತದೆ
ವಕೀಲರು ಹೆಚ್ಚು ಹೆಚ್ಚು ಕಾನೂನು ತಿಳಿದುಕೊಂಡರೆ ಉತ್ತಮ ವಕೀಲರಾಗಲು ಸಾಧ್ಯ. ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹೇಳಿದರು.
ನಂತರ ಗಂಗಾವತಿಯ ಹಿರಿಯ ನ್ಯಾಯವಾದಿ ವಿ.ಎನ್.ಪಾಟೀಲ ಉಪನ್ಯಾಸ ನೀಡಿ ಉನ್ನತ ಪರಂಪರೆಯ ಇರುವ ನಮ್ಮ ನ್ಯಾಯಾಂಗ ವ್ಯವಸ್ಥೆಯನ್ನು ಗಟ್ಟಿಗೊಳಿಸುವ ಕಾರ್ಯ ವಾಗ ಬೇಕು . ಎಂದರು

ತಾಲೂಕು ವಕೀಲರ ಸಂಘದ ಅಧ್ಯಕ್ಷ ಪ್ರಕಾಶ ಬೇಲೇರಿ ಅಧ್ಯಕ್ಷತೆ ವಹಿಸಿ ಮಾತನಾಡಿ ನ್ಯಾಯಾಲಯವು ಯುವ ವಕೀಲರ ಮೇಲೆ ಭರವಸೆ ಇಟ್ಟುಕೊಂಡಿರುತ್ತದೆ
ವಕೀಲರು ನ್ಯಾಯಾಲಯದ ಕಾರ್ಯಕಲಾಪಗಳಲ್ಲಿ ಹೆಚ್ಚಿನ ಆಸಕ್ತಿಯಿಂದ ಭಾಗವಹಿಸಿದ್ದಲ್ಲಿ ಮಾತ್ರ ವೃತ್ತಿಪರತೆ ಹೆಚ್ಚುತ್ತದೆ. ಜತೆಗೆ ತಮ್ಮ ವೃತ್ತಿಯಲ್ಲಿ ಶ್ರದ್ಧೆ ಮತ್ತು ಪ್ರಾಮಾಣಿಕತೆಯಿಂದ ಕೆಲಸ ಮಾಡಿದರೆ ಹೆಚ್ಚು ಜ್ಞಾನವೃದ್ಧಿಯಾಗುತ್ತದೆ ವಕೀಲರು ಮತ್ತು ನ್ಯಾಯಾಧೀಶರ ಬಾಂಧವ್ಯ ಸ್ನೇಹಪೂರ್ವಕವಾಗಿ ಇದ್ದಲ್ಲಿ ವಾತಾವರಣ ಉತ್ತಮರೀತಿಯಲ್ಲಿ ಕೂಡಿರುತ್ತದೆ. ಕಕ್ಷಿದಾರರಿಗೆ ತ್ವರಿತ ನ್ಯಾಯ ಒದಗಿಸಬಹುದಾಗಿದೆ ಎಂದು ಹೇಳಿದರು
ನಂತರ ಕರ್ನಾಟಕ ಜನಪದ ಅಕಾಡೆಮಿ ಸದಸ್ಯ ಕಲಾವಿದ ಡಾ! ಜೀವನಸಾಬ ಬಿನ್ನಾಳ. ಅವರು ಮಾತನಾಡಿ ಇತ್ತೀಚಿನ ದಿನಗಳಲ್ಲಿ ಜನಪದ ಕಲೆಗಳು ಸ್ವಲ್ಪ ಮಟ್ಟಿಗೆ ಕಡಿಮೆಯಾಗುತ್ತಿವೆ ಹೀಗಾಗಿ ಪ್ರತಿಯೊಬ್ಬರು ಜನಪದ ಕಲೆಯನ್ನು ಉಳಿಸಿ ಬೆಳೆಸಿ ಪ್ರೋತ್ಸಾಹಿಸಬೇಕು ಎಂದು ಹೇಳಿದರು

ವಿವಿಧ ಕ್ರೀಡೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ವಕೀಲರ ಸಂಘದ ಮಾಜಿ ಅಧ್ಯಕ್ಷ ದೂಡ್ಡಬಸಪ್ಪ ಕಂಪ್ಲಿ.
ವಕೀಲರ ಸಂಘದ ತಾಲೂಕ ಅಧ್ಯಕ್ಷ ಪ್ರಕಾಶ ಬೆಲೇರಿ, ಸಹಾಯಕ,ಸರಕಾರಿ ಅಭಿಯೋಜಕ ರವಿ ಹುಣಿಸಿಮರದ ಅಪರ ಸರಕಾರಿ ವಕೀಲ ಮಲ್ಲನಗೌಡ ಪಾಟೀಲ
ಸಿ,ಹೆಚ್,ಪೋಲೀಸ್,ಪಾಟೀಲ್ಎಸ್,ಎನ್,ಶ್ಯಾಗೋಟಿ,ಎಚ್ ಎಚ್ ಹಿರೇಮನಿ ಕಳಕಪ್ಪ ಬೆಟಗೇರಿ. ಶಶಿಧರ ಶ್ಯಾಗೋಟಿ. ಇಂದಿರಾ ಉಳ್ಳಾಗಡ್ಡಿ. ಮಾಂಹತೇಶ ಬೂದಗುಂಪಿ ಸ್ವಾಗತಿಸಿದರು
ಈರಣ್ಣ ಕೋಳೂರು ನಿರೂಪಿಸಿ ವಂದಿಸಿದರು.ಎ.ಎಂ.ಪಾಟೀಲ್. ವಕೀಲರು ಸೇರಿದಂತೆ ವಿನಾಯಕ ಪಾಪ್ಪಳೆ ನ್ಯಾಯಾಂಗ ಸಿಬ್ಬಂದಿಗಳು ಮತ್ತು ಇತರರು ಭಾಗವಹಿಸಿದ್ದರು

Leave a Reply

Your email address will not be published. Required fields are marked *

error: Content is protected !!