WhatsApp Image 2024-08-17 at 4.25.43 PM

ಸಂಸ್ಕೃತಿ ರಕ್ಷಣೆಗೆ ಪೋಷಕರ ಪಾತ್ರ ಅನನ್ಯ : ಡಾ.ಎಸ್.ಕೆ.ಅರುಣ್

ಕರುನಾಡ ಬೆಳಗು ಸುದ್ದಿ

ಬಳ್ಳಾರಿ, 17- ನಮ್ಮ ಸಂಸ್ಕೃತಿ ರಕ್ಷಣೆಗೆ ಪೋಷಕರ ಪಾತ್ರ ಅನನ್ಯಸೇವೆ ಎಂದು ಕ್ಯಾತ ವೈದ್ಯ ಡಾ. ಅರುಣ್ ನುಡಿದರು. ತುಂಗಾ ಗಂಗಾ ಸಾಂಸ್ಕೃತಿಕ ಕಲಾ ಟ್ರಸ್ಟ್ ವತಿಯಿಂದ ನಗರದ ಹೊಂಗಿರಣ ರಂಗಮಂದಿರ ದಲ್ಲಿ ನಡದ ಶ್ರಾಣಮಾಸದ ಸಾಂಸ್ಕೃತಿಕ ಸಂಭ್ರಮ 2024 ಕಾರ್ಯಕ್ರಮದಲ್ಲಿ ಜ್ಯೋತಿ ಬೆಳಗಿಸಿ ಮಾತನಾಡಿದರು.

ನಮ್ಮ ದೇಶದ ಕಲಾ ಪರಂಪರೆ, ಸಂಸ್ಕೃತಿ ರಕ್ಷಣೆಗೆ ಎಲ್ಲರ ಪ್ರೋತ್ಸಾಹ ಅಗತ್ಯ ಎಂದು ತಿಳಿಸಿದರು.

ಲಲಿತ ಕಲೆಗಳು ಉಳಿಸಿ ಬೇಳುಸುವುದು ನಮ್ಮ ಕರ್ತವ್ಯ ಎಂದರು., ಸಂಗೀತ, ನೃತ್ಯ, ನಾಟಕ ಮುಂತಾದ ಕಲೆಗಳಿಂದ ಮನಸಿಗೆ ಸಂತೋಷ ಸಿಗುವುದೆಂದು ಶಿಕ್ಷಣ ತಜ್ಞರಾದ ನಿವೃತ ಪ್ರಾಂಶುಪಾಲ ಹರಿಕುಮಾರ್ ಹೇಳಿದರು. ತುಂಗಾ ಗಂಗಾ ಸಾಂಸ್ಕೃತಿಕ ಕಲಾ ಟ್ರಸ್ಟ್ ನ ಸೇವೆ ಅಭಿನಂದನೀಯ ಎಂದು ಫ್ಯಾಮಿಲಿ ಪ್ಲಾನಿಂಗ್ ರಾಷ್ಟ್ರೀಯ ಉಪಾಧ್ಯಕ್ಷ ಎಸ್. ವಿಜಯಸಿಂಹ ನುಡಿದರು.

ಈ ಸಂದರ್ಭದಲ್ಲಿ ಹಲವು ರಂಗಗಳಲ್ಲಿ ಸಾಧನೆ ಮಾಡಿದ ಸಾಧಕರು ಶಿಕ್ಷಣದ ಲ್ಲಿ ಹರಿಕುಮಾರ್ ಗೆ ಡಾ.ಸರ್ವೆಪಲ್ಲಿ ರಾಧಾಕೃಷ್ಣ ಸ್ಮಾರಕ ಶಿಕ್ಷಣ ರತ್ನ ಪ್ರಶಸ್ತಿ, ವೈದ್ಯರಂಗದಲ್ಲಿ ಡಾ. ಅರುಣ್ ಗೆ ಬಿದನ್ ಚಂದ್ರ ರಾಯ್ ಸ್ಮಾರಕ ವೈದ್ಯ ರತ್ನ ಪ್ರಶಸ್ತಿ, ವಿಜಯ ಸಿಂಹ, ನೆಮಕಲ್ ರಾವ್, ಗಿರಿಪ್ರಸಾಧ್, ಡಾ. ಶ್ರೀನಾಥ್ , ಎಂ. ಶ್ರೀನಿವಾಸ್ ಅವರಿಗೆ ಸಮಾಜಸೇವಾ ರತ್ನ ಪ್ರಶಸ್ತಿ, ಸಿವಿ ಎಸ್ ಶ್ರೀಧರ್, ಬೋಜರಜು ಗೆ ಧಾರ್ಮಿಕ ಸೇವಾ ರತ್ನ ಪ್ರಶಸ್ತಿ, ಡಾ. ಗಾದಲಿಂಗನ ಗೌಡರಿಗೆ ರಂಗ ಕಲಾರತ್ನ, ಶೇಷಾ ರೆಡ್ಡಿ ಗೆ ವಾಣಿಜ್ಯ ರತ್ನ, ವಲಿ ಅಹಮ್ಮದ್ ಗೆ ಸಂಗೀತ ರತ್ನ, ಡಾ. ಚೆತನಾಗೆ ಸಂಗೀತ ಕಲಾರತ್ನ, ಅರ್ಚನ, ಜ್ಯೋತಿಕಾ, ವೈಷ್ಣವಿ, ರಾಧಾಕೃಷ್ಣ, ಶ್ರಿರಾಘವಿಗೆ ನಾಟ್ಯ ರವಳಿ ಪ್ರಶಸ್ತಿ ನೀಡಿ ಸನ್ಮಾನಿಸಿದರು.

ವೈಷ್ಣವಿ ತಂಡದ ಭರತನಾಟ್ಯ, ಅರ್ಚನ ತಂಡದ ಜನಪದ ಸಮೂಹ ನೃತ್ಯ, ವಿಜಯಲಕ್ಷ್ಮಿ ತಂಡದ ಭಕ್ತಿ ಗೀತೆ ಗಾಯನ, ಶ್ವೇತಾ ತಂಡದ ಕೋಲಾಟ ಪ್ರದರ್ಶನ ರಂಜಿಸಿತು. ಬಾಲಕೃಷ್ಣ ತಿವಾರಿ, ಶಿವರುದ್ರಯ್ಯ, ಚಾಂದ್, ಲಕ್ಷ್ಮಣ್, ಗುರುರಾಜ್, ಜಾಹ್ನವಿ, ಶ್ರೇಯಾ, ಸಿಮೆಂಟ್ ಗಿರಿ, ಮುಂತಾದವರು ಇದ್ದರು.

ನಾಗಭೂಷಣ್ ನಿರೂಪಿಸಿದರು.

ಕನೇಕಲ್ ಶ್ರೀಧರ್ ಸ್ವಾಗತಿಸಿದರು.

ರಾಂಚಂದ್ರ ವಂದಿಸಿದರು.

Leave a Reply

Your email address will not be published. Required fields are marked *

error: Content is protected !!