1

ದೈವಿಕ ಭಾವನೆ, ಜನರರಿಂದ ಹಣ ವಂಚನೆ ಮೂರು ಆರೋಪಿಗಳ ಬಂಧನ

ಕರುನಾಡ ಬೆಳಗು ಸುದ್ದಿ

ವಿಜಯನಗರ, 8- ಪಟ್ಟಣದ ಕಲ್ಲಳ್ಳಿ ಗ್ರಾಮದ ಕುಮಾರ ನಾಯ್ಕ್ ಎನ್ನುವ ವ್ಯಕ್ತಿಗೆ ರಾಜಸ್ಥಾನ ಮೂಲದ ಚಿತ್ರದುರ್ಗ ನಿವಾಸಿಯಾದ ಜಿತೇಂದ್ರ ಸಿಂಗ್ ಎನ್ನುವ ವ್ಯಕ್ತಿ ಮತ್ತು ಆತನೊಂದಿಗೆ ಸ್ಥಳೀಯರಾದ ತುಕ್ಯಾನಾಯ್ಕ್ ಮತ್ತು ಶಂಕು ನಾಯ್ಕ್ ಸೇರಿಕೊಂಡು ದೈವಿಕ ಭಾವನೆಯಿಂದ ಭಾರಿ ಮೊತ್ತದ ಹಣ ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.

ಈ ಕುರಿತು ಹೊಸಪೇಟೆಯ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಎಸ್‌ಪಿ ಮತ್ತು ಹೆಚ್ಚುವರಿ ಎಸ್ಪಿ ಮಾರ್ಗದರ್ಶನದಲ್ಲಿ ಗ್ರಾಮೀಣ ಠಾಣೆ ಪಿಐ ರವರ ನೇತೃತ್ವದಲ್ಲಿ ತಂಡವನ್ನು ರಚಿಸಲಾಗಿತ್ತು. ನಿನ್ನೆ ದಿನ ದಿನಾಂಕ: 07-09-2024 ರಂದು ಹೊಸಪೇಟೆ ಗ್ರಾಮೀಣ ಪೊಲೀಸ್ ಠಾಣೆಯ ಪಿ.ಐ ಮತ್ತು ಸಿಬ್ಬಂದಿಯವರು ಪತ್ತೆ ಕಾರ್ಯ ಕೈಗೊಂಡು, ಆರೋಪಿ- ಜೀತೆಂದ್ರ ಸಿಂಗ್, ನನ್ನು ಹೊಸಪೇಟೆಯಲ್ಲಿ, ಆರೋಪಿ- ತುಕ್ಯಾನಾಯ್ಕ ಮತ್ತು ಶಂಕು ನಾಯ್ಕ್ ರವರನ್ನು ಕಲ್ಲಹಳ್ಳಿಯಲ್ಲಿ ವಶಕ್ಕೆ ಪಡೆದುಕೊಂಡು ಆರೋಪಿತರ ಕಡೆಯಿಂದ ಮತ್ತು ಜಿತೇಂದ್ರ ವಾಸವಿದ್ದ ಹೊಸಪೇಟೆಯ ಎಸ್.ಎಲ್.ವಿ ಯಾತ್ರಿ ನಿವಾಸ ರೂಂನಲ್ಲಿ ಹಾಗೂ ಚಿತ್ರದುರ್ಗದ ಮನೆಯಲ್ಲಿ ಎಲ್ಲಾ ಸೇರಿ ಒಟ್ಟು ರೂ 55,14,740/- ನಗದು ಹಣವನ್ನು ಮತ್ತು ನೋಟು ಎಣಿಕೆ ಯಂತ್ರ ಜಪ್ತಿ ಪಡಿಸಿಕೊಂಡು ಆರೋಪಿತರನ್ನು ದಸ್ತಗಿರಿ ಮಾಡಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಆರೋಪಿಗಳು ಸಂಡೂರಿನಲ್ಲಿ ಮತ್ತು ಇತರೆ ಜಿಲ್ಲೆಗಳಲ್ಲೂ ಜನರನ್ನು ನಂಬಿಸಿ ಮೋಸಮಾಡಿದ್ದು ತಿಳಿದುಬಂದಿದೆ. ಈ ಕುರಿತು ಇನ್ನೂ ಪ್ರಕರಣಗಳು ಧಾಖಲಾಗುವ ಸೂಚನೆ ಗಳಿದ್ದು ಪ್ರಕರಣದಲ್ಲಿ ಹೆಚ್ಚಿನ ವಿಚಾರಣೆ ಮಾಡಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಘಟನೆ : ಪಿರ್ಯಾಧಿದಾರರಾದ ಶ್ರೀ ಕುಮಾರ ನಾಯ್ಕ ರವರಿಗೆ ತಮ್ಮೂರಿನ ತುಕ್ಯಾನಾಯ್ಡ್ ಮತ್ತು ಶಂಕು ನಾಯ್ ಎನ್ನುವವರು ತಮಗೆ ಗೊತ್ತಿರುವ ರಾಜಸ್ಥಾನದ ಜೀತೆಂದ್ರ ಸಿಂಗ್ ಎನ್ನುವವರು ಪೂಜೆ ಮಾಡಿ ಹೆಚ್ಚಿನ ಹಣ ಮಾಡಿಕೊಡುತ್ತಾರೆಂದು ಹೇಳಿ ನಂಬಿಸಿ ದಿನಾಂಕ: ೦೪/೦೯/೨೦೨೪ ರಂದು ಜಿಕೇಂದ್ರ ಎನ್ನುವವರನ್ನು ಕರೆದುಕೊಂಡು ಬಂದು ಪರಿಚಯಿಸಿ ನಂಬಿಸಿ ರೂ ೭,೫೦,೦೦೦/- ಹಣವನ್ನು ಇಟ್ಟು ಪೂಜೆ ಮಾಡಿದರೆ ರೂ ೮೦,೦೦,೦೦೦/- ಹಣ ಮಾಡಿಕೊಡುವುದಾಗಿ ಹೇಳಿ ಅಷ್ಟು ಹಣವನ್ನು ಇಟ್ಟು ಪೂಜೆ ಮಾಡಿ ೧೬೮+೨ ದಿನಗಳ ನಂತರ ಬಾಕ್ಸ್ ಬಿಚ್ಚುವಂತೆ ಹೇಳಿ ಹೋಗಿ, ನಂತರ ದಿನಾಂಕ: ೦೭/೦೯/೨೦೨೪ ರಂದು ತಮ್ಮದೇ ಊರಿನ ರಾಜನಾಯ್ಕ್ ರವರ ಮನೆಗೆ ಜಿತೇಂದ್ರ ಸಿಂಗ್ ರವರನ್ನು ಪೂಜೆ ಮಾಡಿಸಲು ಕರೆದುಕೊಂಡು ಬಂದಾಗ ಜೀತೆಂದ್ರ ಸಿಂಗ್ ರವರ ಪೂಜೆ ಸುಳ್ಳು ಎಂದು ಫಿರ್ಯಾಧಿಗೆ ಮಾಹಿತಿ ಬಂದ ನಂತರ ಮನೆಗೆ ಹೋಗಿ ಜೀತೆಂದ್ರ ಸಿಂಗ್ ರವರು ಪೂಜೆ ಮಾಡಿಕೊಟ್ಟಿದ್ದ ಬಾಕ್ಸ್ ನ್ನು ಬಿಚ್ಚಿ ನೋಡಿದಾಗ ಬಾಕ್ಸ್ ನಲ್ಲಿ ಊದುಬತ್ತಿ ಪ್ಯಾಕೇಟ್ ಗಳು, ಉಸುಕಿನ ಚೀಲ, ೩ ಟವೆಲ್ ಗಳು ಇದ್ದಿದ್ದನ್ನು ಕಂಡು. ಕಾರಣ ದೈವಿಕ ಭಾವನೆಯನ್ನು ತೋರಿಸಿ, ನಂಬಿಕೆ ದ್ರೋಹ ಮಾಡಿದ್ದಾರೆಂದು ಗಮನಕ್ಕೆ ಬಂದಾಗ ಠಾಣೆಗೆ ಹೋಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿರುತ್ತದೆ.

ಈ ಕಾರ್ಯಚರಣೆಯನ್ನು ಹರಿಬಾಬು ಬಿ.ಎಲ್. ಐಪಿಎಸ್ ಪೊಲೀಸ್ ಅಧೀಕ್ಷಕರು ವಿಜಯನಗರ ಜಿಲ್ಲೆ, ಸಲೀಂಪಾಷಾ, ಹೆಚ್ಚುವರಿ ಎಸ್.ಪಿ ವಿಜಯನಗರ ಜಿಲ್ಲೆ, ಟಿ.ಮಂಜುನಾಥ, ಡಿಎಸ್‌ಪಿ ಹೊಸಪೇಟೆ ಉಪ-ವಿಭಾಗ ಇವರ ಮಾರ್ಗದರ್ಶನದಲ್ಲಿ ಗುರುರಾಜ್ ಆರ್.ಕಟ್ಟಿಮನಿ ಪೊಲೀಸ್ ಇನ್ಸ್ಪೆಕ್ಟರ್ ಗ್ರಾಮೀಣ ಪೊಲೀಸ್ ಠಾಣೆ ರವರ ನೇತೃತ್ವದಲ್ಲಿ ಗ್ರಾಮೀಣ ಠಾಣೆಯ ಕು. ಹೆಚ್.ನಾಗರತ್ನ ಪಿಎಸ್‌ಐ (ಕಾ&ಸು), ಜಯಲಕ್ಷ್ಮೀ ಪಿಎಸ್‌ಐ (ತನಿಖೆ) ಸಿಬ್ಬಂದಿಯವರಾದ ಕೀಮ್ಯಾನಾಯ್ ಮೋತೀನಾಯ್ಕ, ಆರ್.ವೆಂಕಟೇಶ, ಪರಮೇಶ್ವರಪ್ಪ, ಪಿ.ಮಂಜುನಾಥ ಮೇಟಿ, ಚಂದ್ರಶೇಖರ್, ವಿ.ರಾಘವೇಂದ್ರ, ಹೊನ್ನೂರಪ್ಪ, ಸಣ್ಣ ಗಾಳೆಪ್ಪ, ಅಡಿವೆಪ್ಪ ಕಬ್ಬಳ್ಳಿ ಚಂದ್ರಪ್ಪ, ಎಂ.ಸAತೋಷ ಕುಮಾರ, ನಾಗರಾಜ್ ಬಂಡಿಮೇಗಳ, ಜಗದೀಶ, ಗೋಪಿನಾಯ್, ವಿರೇಶ ಜೆ, ಜೀವ್ ಚಾಲಕ ಜೆ.ನಾಗರಾಜ್ ಇವರುಗಳು ಆರೋಪಿಯನ್ನು ಪತ್ತೆಮಾಡಿದ್ದು, ಸದರಿ ತಂಡದ ಕಾರ್ಯವನ್ನು ಐಪಿಎಸ್ ಪೊಲೀಸ್ ವರಿಷ್ಠಾಧಿಕಾರಿಗಳು ಬಿ.ಎಲ್.ಹರಿಬಾಬು ವಿಜಯನಗರ ಜಿಲ್ಲೆ ಹೊಸಪೇಟೆ ರವರು ಪ್ರಶಂಶಿಸಿರುತ್ತಾರೆ.

Leave a Reply

Your email address will not be published. Required fields are marked *

error: Content is protected !!