ಕೆ.ರಾಮ ಕಿರಣಗೆ ಯುಗಾದಿ-2024 ಪುರಸ್ಕಾರ
ಕರುನಾಡ ಬೆಳಗು ಸುದ್ದಿ
ಬಳ್ಳಾರಿ,16- ನಗರದಲ್ಲಿ ಪ್ರತಿಷ್ಠಾತ್ಮಕವಾದಂತ ಬಳ್ಳಾರಿ ಆಕ್ಟಿವಿಟೀಸ್ ಅಸೋಸಿಯೇಷನ್ ಸಂಸ್ಥೆಯ ೫೨ನೇ ವಾರ್ಷಿಕೋತ್ಸವ ಅಂಗವಾಗಿ, ಸಮಾಜಕ್ಕೆ ವಿವಿಧ ರಂಗಗಳಲ್ಲಿ ಸೇವೆ ಸಲ್ಲಿಸಿದ ಸೇವಕರಿಗೆ, ನೀಡುವ ಯುಗಾದಿ 2024ನೇ ಪುರಸ್ಕಾರಕ್ಕೆ, ಬಳ್ಳಾರಿ ನಗರದಲ್ಲಿ ಪ್ರತಿಷ್ಠಾತ್ಮಕವಾದಂತಹ ವಿದ್ಯಾ ಸಂಸ್ಥೆಗಳಲ್ಲಿ ಒಂದಾದ ಮೇಧಾ ಕಾಲೇಜಿನ, ವ್ಯವಸ್ಥಾಪಕರು ಹಾಗೂ ಕಾಲೇಜಿನ ಪ್ರಿನ್ಸಿಪಾಲ್ ಕೆ ರಾಮಕಿರಣ್ ಅವರನ್ನು ಆಯ್ಕೆ ಮಾಡಲಾಗಿದೆ.
ಹಲವಾರು ವರ್ಷಗಳಿಂದ ಬಳ್ಳಾರಿ ಕಲ್ಚರಲ್ ಅಂಡ್ ಆಕ್ಟಿವಿಟೀಸ್ ಅಸೋಸಿಯೇಷನ್, ಸಮಾಜಕ್ಕೆ, ವಿದ್ಯೆ, ಆರೋಗ್ಯ, ರಂಗಸ್ಥಳ ಹಾಗೂ ವಿವಿಧ ಕ್ಷೇತ್ರಗಳಲ್ಲಿ ವಿಶೇಷ ಸೇವೆಯನ್ನು ಸಲ್ಲಿಸಿದ ಗಣ್ಯರಿಗೆ ಪುರಸ್ಕಾರ ನೀಡುತ್ತಾ ಸಮಾಜ ಸೇವಕರನ್ನು ಪೋಷಿಸುತ್ತಿರುವುದು ಎಲ್ಲರಿಗೂ ತಿಳಿದ ವಿಷಯ ಈ ವರ್ಷ ಅದೇ ರೀತಿಯಾಗಿ ಸಂಸ್ಥೆ ಆಯ್ಕೆ ಮಾಡಿರುವ ವ್ಯಕ್ತಿಗಳಲ್ಲಿ, ಶ್ರೀರಾಮ್ ಕಿರಣ್ ಅವರು ಒಬ್ಬರಾಗಿದ್ದರೆ.
ಈ ಸಂದರ್ಭವಾಗಿ ಅವರನ್ನು ಬಳ್ಳಾರಿ ಕಲ್ಚರಲ್ ಆಕ್ಟಿವಿಟೀಸ್ ಅಸೋಸಿಯೇಷನ್ ಪದಾಧಿಕಾರಿಗಳು, ನಗರ ಪ್ರಮುಖರು ಕೆ.ರಾಮಕಿರಣ್ ಅವರನ್ನು ಅಭಿನಂದಿಸಿದ್ದಾರೆ.
