
ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಬೇಕು ಎಂದು ಗ್ರಾಮಸ್ಥರ ಆಗ್ರಹ
ಕರುನಾಡ ಬೆಳಗು ಸುದ್ದಿ
ಯಲಬುರ್ಗಾ, 31- ತಾಲೂಕಿನ ಮುರುಡಿ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದ್ದು ಕಾಡುತ್ತಿದೆ.ಇದಕ್ಕೆ ಗ್ರಾಪಂ ಅಧಿಕಾರಿಗಳು ಹಾಗೂ ವಾರ್ಡ್ ಸದಸ್ಯರು ಸಮಸ್ಯೆಗೆ ಪರಿಹಾರ ಒದಗಿಸುತ್ತಿಲ್ಲ ಎಂದು ಗ್ರಾಮದ ವಿವಿಧ ಬಡಾವಣೆಗಳ ಮಹಿಳೆಯರು ಆರೋಪಿಸಿದ್ದಾರೆ.
ಗ್ರಾಮದ ಓವರ್ ಹೆಡ್ ಟ್ಯಾಂಕ್ ನಲ್ಲಿ ನೀರು ತುಂಬಿ ನೀರು ಕಾಲಿ ಸೋರಿಕೆಯಾಗುತ್ತಿದ್ದರು ನಮ್ಮ ವಾಡ೯ ಓಣಿಗಳಿಗೆ ಮಾತ್ರ ನೀರು ಬರುತ್ತಿಲ್ಲ ಬೆಳಿಗ್ಗೆ ಒಂದು ಬಾರಿ ಸಾಯಂಕಾಲ ಒಂದು ಬಾರಿ ನೀರು ಸರಬುರಾಜು ಮಾಡಿದರೆ ಎಲ್ಲರಿಗೂ ನೀರು ಸಮರ್ಪಕವಾಗಿ ಸಿಗುತ್ತವೆ ವಾಟರ್ ಮ್ಯಾನ ಬೇಜವಾಬ್ದಾರಿ ತನದಿಂದ ಬೆಳಿಗ್ಗೆ ಮಾತ್ರ ನೀರು ಸರಬರಾಜು ಮಾಡಿ ಸಾಯಂಕಾಲ ನೀರು ಬೀಡುವದೆ ಇಲ್ಲ ಟ್ಯಾಂಕಿನಲ್ಲಿರುವ ನೀರು ಅನಾವಶ್ಯಕವಾಗಿ ಪೋಲಾಗುತ್ತದೆ ಎಂದು ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಲಿಗಳ ಮೂಲಕ ವಿವಿಧ ಓಣಿಗಳಿಗೆ ಸರಬರಾಜು ಮಾಡಲಾಗುತ್ತಿರುವ ನೀರು ಯಾತಕ್ಕೂ ಸಾಲದು. ಹತ್ತು ಕೊಡ ಭರ್ತಿಯಾಗುವ ಮೊದಲೇ ನೀರು ಪೂರೈಕೆ ಸ್ಥಗಿತಗೊಳ್ಳುತ್ತದೆ. ನೀರು ಸಿಗದವರು ಗ್ರಾಪಂ ಆಡಳಿತಕ್ಕೆ ಶಾಪ ಹಾಕುತ್ತ ಮನೆಗೆ ಹೋಗಬೇಕಾದ ಕಷ್ಟದ ಪರಿಸ್ಥಿತಿಯಿದೆ ಎಂದು ಗ್ರಾಮದ ಮಹಿಳೆಯರು ದೂರಿದ್ದಾರೆ.
ಮುರಡಿ ಗ್ರಾಮದ 3 ನೇ ವಾರ್ಡಿನ ಕೊಪ್ಪಳ ಕುಷ್ಟಗಿ ರಸ್ತೆಯ ಪೂರ್ವ ಭಾಗದಲ್ಲಿ ಸೂಮಾರು 35 ಕುಟುಂಬಗಳಿದ್ದು ಅಲ್ಲಿ ಯಾವೂದೇ ರೀತಿಯ ಕುಡಿಯುವ ನೀರು ಸರಬರಾಜು ಮಾಡಲು ಪೈಪಲೈನ್ ಅಳವಡಿಸಿಲ್ಲ ಪೈಪಲೈನ್ ಮಾಡಲು ಹಲವಾರು ಬಾರಿ ಗ್ರಾಮ ಪಂಚಾಯತಿಗೆ ತಿಳಿಸಿದರು ಕ್ರಮ ಕೈಗೊಂಡಿಲ್ಲ ಜಲ ಜೀವನ್ ಮಿಷನ್ ಯೋಜನೆಯ ಪೈಪ ಲೇನ್ ಗೆ ನೀರು ಸಹ ಬರುತ್ತಿಲ್ಲ ನಳ ಜೋಡಣೆಯು ಸಹ ಮಾಡಿರುವದಿಲ್ಲ ಜನರು ನೀರಿಗಾಗಿ ಗೋಳಾಡುತ್ತಿದ್ದರೂ ಯಾರೂ ಕೇಳುತ್ತಿಲ್ಲ. ಚುನಾವಣೆ ಬಂದಾಗ ಮತ ಕೇಳಲು ಬರ್ತಾರೆ.
ಈಗ ನೀರಿನ ಸಮಸ್ಯೆ ಬಗೆಹರಿಸಲು ಯಾರೂ ಬರುತ್ತಿಲ್ಲ. ಕೂಡಲೇ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಒದಗಿಸದಿದ್ದರೇ ಜಿಲ್ಲಾಧಿಕಾರಿಗಳಿಗೆ ದೂರು ನೀಡಲಾಗುವುದು ಎಂದು ಗ್ರಾಮಸ್ಥರು ಎಚ್ಚರಿಸಿದ್ದಾರೆ.ಕೂಡಲೆ ಸಂಬಂಧಪಟ್ಟ ಅಧಿಕಾರಿಗಳು ಗ್ರಾಮದ ಕುಡಿಯುವ ನೀರಿನ ಸಮಸ್ಯೆ ಯನ್ನು ಬಗ್ಗೆ ಹರಿಸಬೇಕು ಎಂದು ಗ್ರಾಮಸ್ಥರು ಹೇಳಿದ್ದಾರೆ