ಅಂಗನವಾಡಿ ಕಾರ್ಯಕರ್ತರಿಗಾಗಿ ಶಾಲಾ ಪೂರ್ವ ಶಿಕ್ಷಣದ ತರಬೇತಿ ಕಾರ್ಯಗಾರ
ಕರುನಡ ಬೆಳಗು ಸುದ್ದಿ
ಸಿರುಗುಪ್ಪ, 15- ನಗರದ ಒಂದನೇ ಅಂಗನವಾಡಿ ಕೇಂದ್ರದಲ್ಲಿ ನಡೆದ ಅಂಗನವಾಡಿ ಕಾರ್ಯಕರ್ತೆಯರ ಐದನೇ ಹಂತದ ತರಬೇತಿ ಕಾರ್ಯಗಾರ ಮೂರು ದಿನ ನಡೆದ ಕಾರ್ಯಕ್ರಮದಲ್ಲಿ ಬಳ್ಳಾರಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರಾದ ವಿಜಯಕುಮಾರ್ ಅವರು ತರಬೇತಿಯ ಕೈಪಿಡಿ ಶಿಕ್ಷಕರಿಗೆ ವಿತರಿಸಿ ಶಾಲಾ ಪೂರ್ವ ಶಿಕ್ಷಣದ ಮಕ್ಕಳ ಬೆಳವಣಿಗೆ ಮುಖ್ಯ ವಾಗಿರ್ತಕಂತ ಭಾಗವಾಗಿದೆ.
ಅಂಗನವಾಡಿ ಕೇಂದ್ರಗಳ ಉಳುವಿಗಾಗಿ ಮತ್ತು ಹಾಜರಾತಿಯ ಪ್ರಮಾಣ ಪತ್ರವನ್ನು ಹೆಚ್ಚಿಸಲು ವಿಷಯಗಳು ತುಂಬಾ ಸಹಕಾರಿ ಯಾಗಿದೆ ಮಕ್ಕಳ ಪೋಷಕರಿಗೆ ಅಂಗನವಾಡಿ ಕೇಂದ್ರದಲ್ಲಿ ಶಾಲಾ ಪೂರ್ವ ಶಿಕ್ಷಣ ಆಯೋಜಿಸುತ್ತಿರುವ ಕುರಿತಂತೆ ಮಕ್ಕಳಿಗೆ ಕಲಿಕೆಯ ಕುರಿತು ಮಹತ್ವ ನೀಡಲು ಕರೆ ನೀಡಿದರು ಮತ್ತು ಶುಭ ಹಾರೈಸಿದರು.
ಜಿಲ್ಲಾ ನಿರೂಪಣ ಅಧಿಕಾರಿ ರಾಮಕೃಷ್ಣ ನಾಯಕ್ ಜಿಲ್ಲೆಯಲ್ಲಿ ಗುಣಮಟ್ಟದ ಶಾಲಾ ಪೂರ್ವ ಶಿಕ್ಷಣಕ್ಕೆ ಇಂತಹ ಕಾರ್ಯಕ್ರಮದ ತರಗತಿಗಳು ತುಂಬಾ ಮಹತ್ವದ್ದಾಗಿದೆ ಎಂದರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಯೋಜನೆ ಅಧಿಕಾರಿ ಜಿ ಪ್ರದೀಪ್ ಮೇಲ್ವಿಚಾರಕಿ ಎ ಎಂ ಮಹಾದೇವಿ ಅಂಗನವಾಡಿ ಕಾರ್ಯಕರ್ತೆಯರು ಇದ್ದರು
