ಅದ್ದೂರಿಯಾಗಿ ಜರುಗಿದ ಶ್ರೀ ಮಾರುತೇಶ್ವರ ಮಹಾ ರಥೋತ್ಸವ
ಕರುನಾಡ ಬೆಳಗು ಸುದ್ದಿ
ಯಲಬುರ್ಗಾ,2- ತಾಲೂಕಿನ ಚಿಕ್ಕವಂಕಲಕುಂಟಾ ಸುಕ್ಷೇತ್ರ ಶ್ರೀ ಮಾರುತೇಶ್ವರ ಜಾತ್ರಾ ಮಹೋತ್ಸವ ಮತ್ತು ಸಂಜೆ ಹಾಲಿನ ವಕೂಳಿ ಮಹಾ ರಥೋತ್ಸವ ವಿಜ್ರಂಭಣೆಯಿಂದ ಜರುಗಿತು.
ಈ ದೇವಸ್ಥಾನವು ಹಲವಾರು ವರ್ಷಗಳ ಇತಿಹಾಸ ವಿದೆ, ದೇವಸ್ಥಾನದಲ್ಲಿ ಬೆಳ್ಳಿಗೆ ದೇವರ ಮೂತಿ೯ಗೆ ವಿವಿಧ ರೀತಿಯ ವಿಧಿ ವಿಧಾನಗಳಿಂದ ಪೂಜೆ ಅಭಿಷೇಕ ಮತ್ತು ವಿವಿಧ ರೀತಿಯ ಹೂವಿನ ಅಲಂಕಾರ ದೇವಸ್ಥಾನದ ಗೋಪುರ ಮತ್ತು ಆವರಣದ ತುಂಬಾ ಸುತ್ತ ಮುತ್ತ ಸುಂದರ ದ್ವೀಪದ ಅಲಂಕಾರದಿಂದ ಕೊಡಿತ್ತು.
ಬೆಳಗಿನ ಜಾವ ಪಲ್ಲಕ್ಕಿ ಉತ್ಸವ ದೇವರ ಕಾಣಿಕೆ ನಡಯಿತು, ನಂತರ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು ನಂತರ ಅನ್ನಸಂತರ್ಪಣೆ ನೆಡಯಿತು.
ಸಂಜೆ 5 ಘಂಟೆಗೆ ಮಹಾ ರಥೋತ್ಸವ ವಿಜ್ರಂಭಣೆಯಿಂದ ಜರುಗಿತ್ತು ಈ ರಥೋತ್ಸವದಲ್ಲಿ ತಾಲೂಕಿನ ಸುತ್ತ ಮುತ್ತಲಿನ ಗ್ರಾಮಗಳಾದ ಉಪ್ಪಲದಿನ್ನಿ, ಉಚ್ಚಲಕುಂಟಾ,ಕಟ್ಟಗಿಹಳ್ಳಿ, ಗೌರಿಪುರ, ಹಿರೇವಡ್ರಕಲ್, ಗುನ್ನಾಳ, ಹುಣಸಿಹಾಳ, ನಿಲೋಗಲ್, ತರಲಕಟ್ಟಿ, ಮಂಡಲಮರಿ, ಹಿರೇಅರಳ್ಳಿಹಳ್ಳಿ, ಮಾಟಲದಿನ್ನಿ, ಯಾಪಲದಿನ್ನಿ, ಕಲ್ಲಭಾವಿ, ಗಾಣಧಾಳ, ಮನ್ನಾಪೂರ, ತಾಳಕೇರಿ, ಬೂದೂರು ಮತ್ತು ಹೊರ ಜಿಲ್ಲೆಯಿಂದ ತಾಲೂಕಿನ ಸುತ್ತಮುತ್ತಲಿನ ಗ್ರಾಮದ ಸಾವಿರಾರು ಭಕ್ತರು ಆಗಮಿಸಿ ಮಹಾ ರಥೋತ್ಸವದಲ್ಲಿ ಪಾಲ್ಗೊಂಡು ನಂತರ ಶ್ರೀ ಮಾರುತೇಶ್ವರ ಸ್ವಾಮಿ ದೇವರ ದಶ೯ನ ಪಡೆದುಕೊಂಡರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಬಸವರಾಜ ತೆನ್ನಳ್ಳಿ, ಸಿಪಿಐ ಮೌನೇಶ್ವರ ಮಾಲಿಪಾಟೀಲ, ಪಿಎಸ್ಐ ವಿಜಯ ಪ್ರತಾಪ್, ಎಎಸ್ಐ ಮತ್ತು ಪೋಲಿಸ್ ಇಲಾಖೆಯ ಸಿಬ್ಬಂದಿಗಳು, ರಾಜಕೀಯ ಪ್ರತಿನಿಧಿಗಳು, ಮುಖಂಡರು, ಸಮುದಾಯ ಆರೋಗ್ಯ ಇಲಾಯ ಸಿಬ್ಬಂದಿಗಳು, ಗ್ರಾಮ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ ಮತ್ತು ಸವ೯ ಸದಸ್ಯರು, ಗ್ರಾಮದ ಹಿರಿಯರು, ಯುವಕರು ಮತ್ತು ಇತರರು ಭಾಗವಹಿಸಿದ್ದರು.
