ಮಕ್ಕಳು ಇಪ್ಪತ್ತೈದು ವರ್ಷ ಓದಿರಿ ಎಪ್ಪತ್ತೈದು ವರ್ಷ ಸುಖವಾದ ಜೀವನ ನಡೆಸಿರಿ – ಶ್ರೀ ರಾಹುಲ್ ಶರಣಪ್ಪ
ಕರುನಾಡ ಬೆಳಗು ಸುದ್ದಿ
ಸಂಕನೂರು,21- ಸರ್ಕಾರಿ ಪ್ರೌಢಶಾಲೆ ಶ್ರೀಧರಗಡ್ಡೆ ಶಾಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಬಳ್ಳಾರಿ ಗ್ರಾಮೀಣ ವಿಧಾನಸಭಾ ಕ್ಷೇತ್ರ ಘಟಕದ ದತ್ತಿ ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಸಂಸ್ಕೃತಿಯ ಸೆಲೆಯಾಗಿದೆ, ಬದುಕು ಸುಂದರವಾಗಿರಲು ಮಕ್ಕಳು ಇಪ್ಪತ್ತೈದು ವರ್ಷ ಓದಿರಿ ಎಪ್ಪತ್ತೈದು ವರ್ಷ ಸುಖವಾದ ಜೀವನ ನಡೆಸಿರಿ ಎಂದು ಹೇಳುತ್ತಾ ಕಲಾವಿದರಾದ ಡಾ.ದೊಡ್ಡಯ್ಯ ಗವಾಯಿ ಕೊಲ್ಲೂರು ಹಾಗೂ ಶ್ರೀಮತಿ ಡಿ ಎನ್ ರೇಣುಕಾ ರಂಗ ಕಲಾವಿದೆ ಮಾತನಾಡಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಹೆಚ್ ಎಂ ಮಲ್ಲಿಕಾರ್ಜುನಸ್ವಾಮಿ ವಿಶ್ರಾಂತ ಉಪನಿರ್ದೇಶಕರು ರವರು
ಹಡೆದ ತಾಯಿಯ ಹೃದಯದ ಭಾವವೇ ಕನ್ನಡ ಭಾಷೆ ಕನ್ನಡ ಭಾಷೆಗೆ ಮೇರುಸೀಮೆಗಳಿಲ್ಲ ಆಲಿಸು ಆನಿಂದಿಸು ಅನುಭವಿಸು ಅಭಿವ್ಯಕ್ತಿಗೊಳಿಸು ಅನವರತ ಬದುಕು ಬಂಗಾರವಾಗುತ್ತದೆ.
ಸಜ್ಜನರ ಸಂಗ ಹೆಜ್ಜೇನು ಸವಿದಂತೆ, ದುರ್ಜನರ ಸಂಗ ಬಚ್ಚಲಿನ ರೊಚ್ಚಿನಂತಿಹುದು ಸರ್ವಜ್ಞ, ಎಂಬ ವಚನದಂತೆ ಸಕಾರಾತ್ಮಕ ಮನೋಭಾವದಿಂದ ಜೀವಿಸಲು ಕನ್ನಡ ಸಾಹಿತ್ಯ ಸತ್ಯ ಸವಿಚಾರಗಳನ್ನು ತಿಳಿಸುವುದು ಅದಕ್ಕಾಗಿ ಪ್ರತಿಯೊಬ್ಬರೂ ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.
ಚಾಂದ್ ಪಾಷಾ ಉಪನ್ಯಾಸಕರು ತಮ್ಮ ಉಪನ್ಯಾಸದಲ್ಲಿ ಕನ್ನಡ ಸಾಹಿತ್ಯ ಕಥೆ ಕವನ ನಾಟ್ಯ ಹಾಡು ನಾಟಕ ಪ್ರಬಂಧ ಜನಪದ ಒಗಟು ವಚನಗಳು ಸಾಮಾಜಕ್ಕೆ ಸತ್ಯ ಸಂಬೃದ್ದಿ ಸವಿಚಾರಗಳನ್ನು ತಿಳಿಸುತ್ತದೆ
ಮಕ್ಕಳು ತಮ್ಮ ಮನೋಭಾವನೆಯಲ್ಲಿ ನಮ್ಮಿಂದೇನಾದೀತು ನಮ್ಮ ಶಕ್ತಿ ಎನಿಲ್ಲ ಎಂಬ ನಕಾರಾತ್ಮಕ ಭಾವನೆ ಬಿಟ್ಟು ನಿಮ್ಮೆಲ್ಲರ ಒಳಗೆ ಆಗಾಧವಾದ ಶಕ್ತಿ ಇದೆ ಅಂದಿನ ಪಂಪ ಮಹಾಕವಿ ಯಿಂದ ಇಂದಿನ ಆಧುನಿಕ ಕವಿಗಳ ಸಾಹಿತ್ಯ ನೋಡಿ ಓದಿರಿ ಬದುಕಿನ ಸರಳತೆ ತಿಳಿಸಿದ್ದಾರೆ.
ಹಳೆಗನ್ನಡ ಹೊಸಗನ್ನಡ ನಡುಕನ್ನಡ ದಲ್ಲಿ ಯಾವುದೇ ವಿಷಯ ಈ ನೆಲದ ಸಂಪತ್ತು ಸಂಸ್ಕೃತಿ ಸಹಬಾಳ್ವೆಗೆ ಸಾಹಿತ್ಯ ಪೂರಕವಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷ ಸ್ಥಾನ ಅಲಂಕರಿಸಿ ಮಾತನಾಡಿದ ರಂಗ ಭೂಮಿ ಕಲಾವಿದರಾದ ಪುರುಷೋತ್ತಮಹಂದ್ಯಾಳು ರವರು ಮಾತನಾಡುತ್ತಾ ಕಲೆ ಸಾಹಿತ್ಯ ನಾಟಕ ನೃತ್ಯ ಇವು ಬರೀ ಸಂಬ್ರಮ ಸಡಗರಕ್ಕಲ್ಲ ಇವು ಸಮಾಜಕ್ಕೆ ಉತ್ತಮ ಸಂದೇಶಗಳಿಗಿವೆ ಎಂದು ತಿಳಿಸಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಎ ಎರ್ರಿಸ್ವಾಮಿ ರವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಶಂಕರೇಗೌಡ ಮುಖ್ಯ ಗುರುಗಳು ಶ್ರೀಧರಗಡ್ಡೆ,ಡಾ.ಕೆ.ಶಿವಲಿಂಗಪ್ಪ ಹಂದಿಹಾಳು ಕಾರ್ಯದರ್ಶಿಗಳು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಬಳ್ಳಾರಿ, ಯು ಶ್ರೀನಿವಾಸಮೂರ್ತಿ ಉಪನ್ಯಾಸಕರು ಬಳ್ಳಾರಿ ಯಾಟಿ ದೊಡ್ಡ ಬಸಪ್ಪ ಅಧ್ಯಕ್ಷರು ಬಸವೇಶ್ವರ ಕಲಾಸಂಗ ಶ್ರೀಧರಗಡ್ಡೆ, ಬಿ ಮಲ್ಲಿಕಾರ್ಜುನ ಮುಖ್ಯ ಗುರುಗಳು ಬಳ್ಳಾರಿ, ಮೆಹತಾಬ್ ಮುಖ್ಯ ಗುರುಗಳು ಬಳ್ಳಾರಿ, ರವಿಚಂದ್ರ ಬಿ ಪಿ.ಸಿ ಆರ್ ಪಿ ಕೊರ್ಲಗುಂದಿ, ಕಾರ್ಯದರ್ಶಿಗಳಾದ ಕಪ್ಪಗಲ್ಲು ಬಿ ಚಂದ್ರಶೇಖರ್ ಆಚಾರ್ ನಿರೂಪಿಸಿದರು.
