ಎಸ್‌ಡಿಎಂಸಿ ನೂತನ ಅಧ್ಯಕ್ಷರಾಗಿ ಹೆಚ್.ಗಣೇಶ ಅವಿರೋಧ ಆಯ್ಕೆ
ಕರುನಾಡ ಬೆಳಗು ಸುದ್ದಿ
ಸಿರುಗುಪ್ಪ, 8- ತಾಲೂಕಿನ ಬಿಎಂ ಸೂಗೂರು ಗ್ರಾಮ ಪಂಚಾಯತಿಯ ನಾಗರಹಾಳು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಸ್ ಡಿಎಂಸಿ ಸಭೆ ಸೇರಿಸಲಾಯಿತು.
ಈ ಸಭೆಯ ಮುಖ್ಯ ಅತಿ ಥಿಗಳಾಗಿ ಹಾಗೂ ಅಧ್ಯಕ್ಷ ಸ್ಥಾನ ವನ್ನು ನಿರ್ವಹಿಸಿಕೊಂಡಿರುವ ಬಸವರಾಜ ಶಾಸ್ತ್ರಿಗಳು ಹಾಗೂ ಶಾಲೆಯ ಮುಖ್ಯ ಗುರುಗಳಾದ ದಿವಾಕರ್ ರಾವ್ ಅಧ್ಯಕ್ಷತೆ ಯಲ್ಲಿ ನಾಗರಹಾಳು ಗ್ರಾಮದ ಶಾಲೆಯ ಸರ್ವ ಸದಸ್ಯರ ಸಮ್ಮುಖದಲ್ಲಿ ಎಸ್‌ಡಿಎಂಸಿ ಯ ನೂತನ ಅಧ್ಯಕ್ಷರನ್ನಾಗಿ ಹೆಚ್ ಗಣೇಶ್ ಇವರನ್ನು ಆಯ್ಕೆ ಮಾಡಲಾಯಿತು.
ಉಪಾಧ್ಯಕ್ಷರನ್ನಾಗಿ ಬಿ. ರಾಮಾಂಜನಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಈ ಕಾರ್ಯಕ್ರಮದಲ್ಲಿ ಗ್ರಾಮದ ಗುರೂ ಹಿರಿಯರನ್ನು ಹಾಗೂ ಗ್ರಾಮ ಪಂಚಾಯಿ ತಿಯ ಸರ್ವ ಹಾಲಿ ಮಾಜಿ ಸದಸ್ಯರನ್ನು ಸನ್ಮಾನಿಸಿ ಗೌರವಿ ಸಲಾಯಿತು.
ಇದೇ ಸಂದರ್ಭದಲ್ಲಿ ಎಸ್ ಡಿಎಂಸಿ ಮಾಜಿ ಅಧ್ಯಕ್ಷ ಎ.ಮಲ್ಲಿಕಾರ್ಜುನರನ್ನು ಗೌರವಿಸಿ ಸನ್ಮಾನಿಸಿ ಬಿಡ್ಕೊಡಲಾಯಿತು.
ನಂತರ ನಾಗರಹಾಳು ಗ್ರಾಮದ ಸರ್ವ ಜನರು ಸೇರಿ ಎಸ್‌ಡಿಎಂಸಿ ನೂತನ ಅಧ್ಯಕ್ಷ ಹೆಚ್.ಗಣೇಶರನ್ನು ಸನ್ಮಾನಿಸ ಲಾಯಿತು.
ಈ ಕಾರ್ಯಕ್ರಮವನ್ನು ಉದ್ದೇಶಿಸಿ ಎಸ್‌ಡಿಎಂಸಿ ನೂತನ ಅಧ್ಯಕ್ಷ ಹೆಚ್ ಗಣೇಶ್ ಮಾತ ನಾಡಿ, ಶಾಲೆಯ ಏಳಿಗೆಯ ಪರವಾಗಿ ಸರ್ವಾಂಗೀಣ ಅಭಿ ವೃದ್ಧಿಯ ಸಲುವಾಗಿ ನಾನು ಸತತವಾಗಿ ಮಕ್ಕಳ ವಿದ್ಯಾಭ್ಯಾ ಸದ ಕುರಿತು ಹೆಚ್ಚಿನ ಶ್ರಮವಹಿ ಸುತ್ತೇನೆಂದು ಸಾರ್ವಜನಿಕರ ಸಮ್ಮುಖದಲ್ಲಿ ಮಾಧ್ಯಮದವ ರೊಂದಿಗೆ ಮಾತನಾಡಿದರು.
ಈ ಕಾರ್ಯಕ್ರಮದಲ್ಲಿ ಪಿ. ಹುಸೇನಪ್ಪ ನಾಯಕ್, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಸಿ.ಗಿರೀಶ್‌ಗೌಡ ಎಪಿಎಂಸಿ ಮಾಜಿ ಅಧ್ಯಕ್ಷ ಪೀರಾನ್ಬಿ ಮತ್ತು ಹೊನ್ನೂರ್ ಸಾಬ್, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಎಸ್. ಜಿ.ಸಿದ್ದರಾಮಪ್ಪ ಸಾಹುಕಾರ್, ವಿಎಸ್‌ಎಸ್‌ಎನ್ ಅಧ್ಯಕ್ಷ ಪಿ. ನಾಗರಾಜ್, ಸಿ.ಚನ್ನಬಸವನ ಗೌಡ ಪಿಡ್ಯನವರ, ವೀರೇಶ್, ಹೆಚ್.ಪೂರ್ಣೇಶ, ನಾಗಪ್ಪ ಕಡಿತೋಟ, ಭಾಷಾ ಸಾಬ್, ದಸ್ತಗಿರ್ ಸಾಬ್, ಸಿ.ಎಚ್.ಕೆಶಪ್ಪ ನಾಯಕ್ ಕಟ್ಟಡ ಕಾರ್ಮಿಕರ ತಾಲೂಕ ಅಧ್ಯಕ್ಷ ಎಂ.ಡಿ.ಶೇಕ್ಷಾ ವಲಿ, ಎ.ಚೆನ್ನಬಸವ, ಗ್ರಾಮ ಪಂಚಾಯತಿ ಮಾಜಿ ಸದಸ್ಯ ಬೋಲೇ ಹೊನ್ನೂರ್ ಸಾಬ್ ಹಾಗೂ ಗ್ರಾಮದ ಗುರುಹಿರಿ ಯರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಸಿಇಟಿ ಪರೀಕ್ಷೆಯಲ್ಲಿ ಅಧಿಕ ಅಂಕ ಪಡೆದ ಗ್ರಾಮದ ವಿದ್ಯಾರ್ಥಿನಿ ಪಿ.ಕಾವ್ಯ ಬಸವರಾಜ ಶಾಸ್ತ್ರಿ ಗೌರವಿಸಿ ಸನ್ಮಾನಿಸಿದರು.
