WhatsApp Image 2024-02-24 at 7.07.57 PM

ಶ್ರೀ ಏಳು ಕೋಟಿ ಮಲ್ಲಯ್ಯ ಉತ್ಸವ ಮೂರ್ತಿ ಪ್ರತಿಷ್ಠಾಪನೆ

ಕರುನಾಡ ಬೆಳಗು ಸುದ್ದಿ

ಯಲಬುರ್ಗಾ, 24- ನಗರದ 2ನೇ ವಾಡ೯ನಲ್ಲಿ ಇರುವ ಶ್ರೀ ಏಳು ಕೋಟಿ ಮಲ್ಲಯ್ಯ ಸ್ವಾಮಿಯ ಉತ್ಸವ ಮೂರ್ತಿ ಪ್ರತಿಷ್ಟಾಪನೆ ಜರುಗಿತು.

ಬೆಳಗಿನ ಜಾವ ಏಳು ಕೋಟಿ ಮಲ್ಲಯ್ಯ ದೇವರಿಗೆ ವಿವಿಧ ರೀತಿಯ ಪೂಜೆ. ಅಭಿಷೇಕ ವಿಧಿ ವಿಧಾನಗಳಿಂದ ನೇರವೇರಿತ್ತು ನಂತರ ಉತ್ಸವ ಮೂರ್ತಿಯನ್ನು ಕುಂಭ ಕಳಸ ಕನ್ನಡಿ ಮತ್ತು ಸಕಲ ವಾದ್ಯಗಳ ಮೇಳಗಳೊಂದಿಗೆ ಮೆರವಣಿಗೆ ಸಾಗಿ ಪಟ್ಟಣದ ಪ್ರಮುಖ ರಾಜ ಬೀದಿಗಳ ಮುಖಾಂತರ ಭಕ್ತ ಕನಕದಾಸ, ಡಾ. ಬಿ .ಆರ್ ಅಂಬೇಡ್ಕರ, ಕಿತ್ತೂರು ರಾಣಿ ಚೆನ್ನಮ್ಮ ಹಾಗು ವಿವಿಧ ವೃತ್ತಗಳ ಮಾರ್ಗವಾಗಿ ಧರಮುರುಡಿ ಹಿರೇಮಠದ ಶ್ರೀ ಷ. ಬ್ರ. ಬಸವಲಿಂಗೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಮತ್ತು ಸಂಸ್ಥಾನ ಹಿರೇಮಠದ ಶ್ರೀ ಷ. ಬ್ರ. ಸಿದ್ದರಾಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ನೇರವೇರಿತು.

ಗೊಗ್ಗಯ್ಯನವರ ಕುಣಿತ ದೊಂದಿಗೆ ದೇವಸ್ಥಾನ ತಲುಪಿದ ನಂತರ, ಫೆ.22ರಿಂದ ಪ್ರಾರಂಭವಾದ ಪೂಜಾ ವಿಧಾನಗಳು ಪ್ರತಿನಿತ್ಯ ವಿಶೇಷ ಪೂಜೆ ಕಾರ್ಯಕ್ರಮದೊಂದಿಗೆ ಉತ್ಸವ ಮೂರ್ತಿಗೆ ಜಲವಾಸ, ಕುಂಕುಮ ವಾಸ, ಭಂಡಾರವಾಸ, ಪುಷ್ಪವಾಸ, ನವಧಾನ್ಯಗಳ ವಾಸ ಈ ಕಾರ್ಯಕ್ರಮಗಳು ಸಾಗಿ ಬಂದ ನಂತರ ಶ್ರೀ ಧರಮುರಡಿ ಬಸವಲಿಂಗೇಶ್ವರ ಸ್ವಾಮೀಜಿ, ಅವರು ಉತ್ಸವ ಮೂರ್ತಿಗೆ ಜೀವ ಕಳೆಯನ್ನು ತುಂಬಿ ಚಾಲನೆ ನೀಡಿ ಮಾತನಾಡಿದ ಅವರು ಯಲಬುರ್ಗಾ ತಾಲೂಕಿನ ಭಕ್ತರು ಕಾಯಕ ನಿಷ್ಠೆ ಅವರ ಪ್ರಮಾಣಿಕ ಸೇವೆ ಶ್ಲಾಘನೀಯ ಎಲ್ಲರೂ ಸಿರಿ ಬಂದಾಗ ಕರೆದು ದಾನವ ಮಾಡು ಪ್ರತಿಯೊಬ್ಬರು ಧಾನ, ಧಮ೯, ಪರೋಪಕಾರ, ಧಾರ್ಮಿಕ ಸಾಂಸ್ಕೃತಿಕ ಸಾಮಾಜಿಕ ಕಾರ್ಯಕ್ರಮದಲ್ಲಿ ಹೆಚ್ಚು ಹೆಚ್ಚು ಭಾಗವಹಿಸಬೇಕು ಎಂದರು.

ಏಳು ಕೋಟಿ ಮಲ್ಲಯ್ಯ ದೇವರ ಉತ್ಸವ ಮೂರ್ತಿ ಕೊಡಿಸಿದ ಭಕ್ತ ಈಶ್ವರಪ್ಪ.ಕೆ ಭೂತೆ ಅವರ ಕಾರ್ಯ ಶ್ಲಾಘನೀಯವಾಗಿದೆ ಅವರ ಬಗ್ಗೆ ಮೆಚ್ಚುಗೆ ವ್ತಕ್ತಪಡಿಸಿದರು ಮತ್ತು ಎಲ್ಲರೂ, ಈ ಕಾರ್ಯಕ್ರಮ ಯಶಸ್ವಿಗೆ ಸಹಕಾರ ನೀಡುವ ಅನೇಕ ಭಕ್ತರ ಕೊಡುಗೆ ಅಪಾರವಾದದು ಎಂದರು.

ಈ ವೇಳೆ ಕೊಡಗಾನೂರಿನ ಚಂದ್ರಶೇಖರಯ್ಯ ಹಿರೇಮಠ, ಅರ್ಚಕ ಯಾದಗಿರಿಯ ಮಂಜುನಾಥಗೌಡ ಮೈಲಾಪೂರ, ರಾಚೋಟೀಶ್ವರ, ಯಲಬುರ್ಗಾದ ಮಲ್ಲಯ್ಯ ಸ್ವಾಮಿ ಹಿರೇಮಠ, ವಿಶ್ರಾಂತ ನ್ಯಾಯಧೀಶ ಬಿ.ಕೆ.ಭೂತೆ, ಭಕ್ತರಾದ ಬಸವಲಿಂಗಪ್ಪ ಭೂತೆ, ಶಿವಕುಮಾರ ಭೂತೆ, ಶರಣಬಸಪ್ಪ ದಾನಕೈ, ಫಕೀರಪ್ಪ ಗಾಣಿಗೇರ, ರಾಮಣ್ಣ ನರೇಗಲ್ಲ, ತಿಪ್ಪಣ್ಣ ಉಪ್ಪಾರ, ಮಲ್ಲಿಕಾರ್ಜುನ ಸಾದರಖಾನ, ಶಿವಪುತ್ರಪ್ಪ ಕೊಪ್ಪಳ ,ನಾಗಪ್ಪ ಇಟಿಗಿ, ಶಂಕರ ಬಡಿಗೇರ, ಮಹಾದೇವಪ್ಪ ಹಡಪದ, ಬಸಪ್ಪ ಮೂಧೋಳ, ಶರಣಬಸಪ್ಪ ಹೂಗಾರ, ಈಶಪ್ಪ ಬನ್ನಿಕೊಪ್ಪ ಸೇರಿದಂತೆ ಇತರರು ಭಾಗವಹಿಸಿದ್ದರು.

 

Leave a Reply

Your email address will not be published. Required fields are marked *

error: Content is protected !!