WhatsApp Image 2024-04-27 at 4.51.11 PM

ರಾಜ್ಯದಲ್ಲಿ ಕನಿಷ್ಠ 20 ಸ್ಥಾನಗಳು ಕಾಂಗ್ರೆಸ್ ವಶ : ಮಾಜಿ ಸಂಸದ ವಿಎಸ್ ಉಗ್ರಪ್ಪ

ಕರುನಾಡ ಬೆಳಗು ಸುದ್ದಿ

ಬಳ್ಳಾರಿ, 27- ವಿಧಾನಸಭಾ ಚುನಾವಣೆಯಲ್ಲಿ, ಕಾಂಗ್ರೆಸ್ ಪಕ್ಷ ನೀಡಿದ್ದ 5 ಗ್ಯಾರಂಟಿ ಯೋಜನೆಗಳನ್ನು, ರಾಜ್ಯದಲ್ಲಿ ಅನುಷ್ಠಾನಗೊಳಿಸುತ್ತಿರುವುದರಿಂದ, ಜನರ ವಿಶ್ವಾಸವನ್ನು ಗೆದ್ದು, ಈ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಕನಿಷ್ಠ 20 ಸ್ಥಾನಗಳನ್ನು ಕಾಂಗ್ರೆಸ್ ಪಕ್ಷ ಪಡೆಯಲಿದೆ ಎಂದು ಮಾಜಿ ಸಂಸದ ವಿ ಎಸ್ ಉಗ್ರಪ್ಪ ಹೇಳಿದರು.

ಇಂದು ಗಾಂಧಿನಗರದಲ್ಲಿರುವ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಪಾಲ್ಗೊಂಡು ಮಾತನಾಡಿದರು. ಕೇವಲ ಮತದಾರರಿಗೆ ಭರವಸೆಗಳನ್ನು ಕೊಟ್ಟುಕೊಂಡು ಅಧಿಕಾರ ಹಿಡಿದ ಬಿಜೆಪಿಗೆ ಇನ್ನೂ ಮುಂದು ಅವರ ಆಟ ನಡೆಯಲಾರದು ಎಂದು ಜನರಿಗೆ ಕೆಲಸ ಮಾಡುವವರು ಯಾರು ಎಂಬ ವಿಷಯ ಗೊತ್ತಾಗಿದೆ ಎಂದರು.

ಬಿಜೆಪಿ ಹಾಗೂ ಏನ್ಡಿಎ ಕೂಟ ಭ್ರಷ್ಟರಕೂಟವಾಗಿದೆ ಎಂದರು. ರಾಜ್ಯಕ್ಕೆ ಬರ ಪರಿಹಾರವನ್ನು ನೀಡುವುದರಲ್ಲಿ ಮಲತಾಯಿ ಧೋರಣೆಯನ್ನು ತೋರುತ್ತಿದೆ ಎಂದರು. ಇನ್ನು ಮುಂದೆ ಮೋದಿಜಿ ನಿಮ್ಮ ಸುಳ್ಳು ಭರವಸೆಗಳು ಕೇಳುವ ಸ್ಥಿತಿಯಲ್ಲಿ ಜನರು ಇಲ್ಲ ಎಂದು ಸ್ಪಷ್ಟ ಮಾಡಿದರು. ಮಹಿಳೆಯರ ಪವಿತ್ರವಾದ ಮಂಗಳ ಸೂತ್ರದ ಬಗ್ಗೆ ಪ್ರಸ್ತಾಪ ಮಾಡಿ ದೇಶದ ಪರಂಪರೆಯನ್ನು ಹಾಳು ಮಾಡಿದ್ದಾರೆ ಎಂದರು.

ಬಿಜೆಪಿ ಅಧಿಕಾರದಲ್ಲಿ ಇದ್ದಾಗ ಮಾತ್ರ ಯಾಕೆ ಕೋಮುವಾದಿ ಗಲಭೆಗಳು ನಡೆಯುತ್ತಿವೆ ಎಂದು ಪ್ರಶ್ನಿಸಿದ್ದರು. ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ, ಅಲ್ಲಂಪ್ರಶಾಂತ್, ಮುಖಂಡರಾದ ಕಲ್ಲುಕಂಬ ಪಂಪಾಪತಿ, ವೆಂಕಟೇಶ್ ಹೆಗಡೆ, ಪಿ ಗಾದೆಪ್ಪ, ಚಿದಾನಂದ, ಲೋಕೇಶ್, ಬಿ ಎಂ ಪಾಟೀಲ್, ಇದ್ದರು.

Leave a Reply

Your email address will not be published. Required fields are marked *

error: Content is protected !!