ಕಾಸಿಯಾ ವಿಶೇಷ ಆಹ್ವಾನಿತರಾಗಿ ಯಶವಂತರಾಜ್ ನಾಗಿರೆಡ್ಡಿ
ಕರುನಾಡ ಬೆಳಗು ಸುದ್ದಿ
ಬಳ್ಳಾರಿ,21- ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ (ಕೆಎಎಸ್ಎಸ್ಐಎ)ದ ಕೌನ್ಸಿಲ್ ಆಫ್ ಮೇನೇಜ್ಮೆಂಟ್ನ
ವಿಶೇಷ ಆಹ್ವಾನಿತ ಸದಸ್ಯರಾಗಿ ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಹಿರಿಯ
ಉಪಾಧ್ಯಕ್ಷ ಯಶವಂತರಾಜ್ ನಾಗಿರೆಡ್ಡಿ ಅವರು ನೇಮಕಗೊಂಡಿದ್ದಾರೆ.
ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ (ಕೆಎಎಸ್ಎಸ್ಐಎ)ದ ಅಧ್ಯಕ್ಷರಾದ ಸಿಎ ಶಶಿಧರಶೆಟ್ಟಿ ಅವರಿಂದ ನೇಮಕಾತಿ ಆದೇಶವನ್ನು ಬೆಂಗಳೂರಿನ ಕಚೇರಿಯಲ್ಲಿ ಸ್ವೀಕರಿಸಿದ ಯಶವಂತರಾಜ್ ನಾಗಿರೆಡ್ಡಿ ಅವರು, ಬಳ್ಳಾರಿ ಜಿಲ್ಲೆಯ ಸಣ್ಣ ಕೈಗಾರಿಕೆಗಳ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸುವುದಾಗಿ ಹೇಳಿದರು.
ಯಶವಂತರಾಜ್ ನಾಗಿರೆಡ್ಡಿ ಅವರ ಅಧಿಕಾರವಧಿಯು 2023 ರಿಂದ 2024ರವರೆಗೆ ಇರಲಿದೆ
