ಕ್ರಿಡೇಯಿಂದ-ಸದೃಢ ಆರೋಗ್ಯ-ಮಾನಸಿಕ ಸ್ಥೈರ್ಯ ಸಾಧ್ಯ
ಕರುನಾಡ ಬೆಳಗು ಸುದ್ದಿ
ಗಂಗಾವತಿ, 7- ಕ್ರಿಡೇಯಿಂದ-ಸದೃಢ ಆರೋಗ್ಯ-ಮಾನಸಿಕ ಸ್ಥೈರ್ಯ ಸಾಧ್ಯ ಎಂದು ಅಂತರ ರಾಷ್ಟಿಯ ಹಾಸ್ಯ ಕಲಾವಿದ ಗಂಗಾವತಿ ಪ್ರಾಣೇಶ(ಬಿಚೀ) ಹೇಳಿದರು.
ನಗರದ ಪಬ್ಲಿಕ್ ಕ್ಲಬ್ನಲ್ಲಿ ಪಬ್ಲಿಕ್ ಸ್ಪೋರ್ಟ್ಸ ಅಕಾಡೆಮಿವತಿಯಿಂದ ಪ್ಲೈಯಿಂಗ್ ಫೇರ್ಸ ಬ್ಯಾಡ್ಮಿಂಟ್ನ್ ಅಕಾಡೆಮಿಯ ಒಳಾಂಗಣ ಕ್ರಿಡಾಂಗಣದ ಸಮಾರಂಭ ಉದ್ಘಾಟಸಿ ಮಾತನಾಡಿ ಮನುಷ್ಯನ ಆರೋಗ್ಯಕ್ಕೆ ಕ್ರಿಡೆ ಎಷ್ಠೋ ಮುಖ್ಯವೂ ಅದರಂತೆ ಹಾಸ್ಯವು ಒಂದು ಅಂಗವಾಗಿದೆ ಮನುಷ್ಯ ನಗುವದರಿಂದ ಆರೋಗ್ಯ ಉಲ್ಲಾಸ ಸಾಧ್ಯವಾಗುತ್ತದೆ.
ಇತ್ತಿಚಿನ ದಿನಗಳಲ್ಲಿ ದೇಶಿಯ ಕ್ರಿಡೆಗಳು ಮಾಯವಾಗುತ್ತಿವೆ. ಮಕ್ಕಳನ್ನು ಮೋಬೈಲ ಗೀಳಿನಿಂದ ಹೋರ ತನ್ನಿ, ಮೋಬೈಲನಿಂದ ಅಂಗೈಯಲ್ಲಿ ಜಗತ್ತು ಕಾಣಬಹುದು ಅದರಿಂದ ವ್ಯತಿರಿಕ್ತ ಪರಿಣಾಮವಾಗಿ ಮಕ್ಕಳ ಬುದ್ದಿಮಟ್ಟ(ಐಕ್ಯೂ) ಕಡಿಮೆಯಾಗುತ್ತದೆ ಎಂಬ ವಿಷಯ ಈಗಾಗಲೇ ರಿಸರ್ಚ ಮೂಲಕ ತಿಳಿದಿದೆ. ಒಳಾಂಗಣ ಕ್ರಿಡಾಂಗಣದಲ್ಲಿ ನಡಯುವ ಆಟಗಳಿಗೆ ಎಲ್ಲರೂ ಅವಕಾಶ ನಿಯಮ ಅನುಸಾರ ನೀಡಿ ಎಂದರು.
ಶಿಕ್ಷಣ ಸಮೂಹ ಸಂಸ್ಥೇಗಳ ಅಧ್ಯಕ್ಷ ಯುವ ಧೂರಿಣ ನೆಕ್ಕಂಟಿ ಸೂರಿಬಾಬು ಹಾಗೂ ಪಬ್ಲಿಕ್ ಸ್ಪೋರ್ಟ್ಸ ಅಕಾಡೆಮಿ ಆಡಳಿತ ಮಂಡಳಿ ನಿರ್ದೇಶಕ ಡಾ.ಶಿವಕುಮಾರ ಮಾಲಿಪಾಟೀಲ ಮಾತನಾಡಿ ಗಂಗಾವತಿ ನಗರದಲ್ಲಿ ಪಬ್ಲಿಕ್ ಸ್ಪೋರ್ಟ್ಸ ಅಕಾಡೆಮಿವತಿಯಿಂದ ಪ್ಲೈಯಿಂಗ್ ಫೇರ್ಸ ಬ್ಯಾಡ್ಮಿಂಟ್ನ್ ಅಕಾಡೆಮಿಯ ವತಿಯಿಂದ ಡಬಲ್ ಸಿಂಥೇಟಿಕ್ ಬ್ಯಾಡ್ಮಿಂಟನ್ ಕೋರ್ಟ್,ಟೇಬಲ ಟೇನಿಸ್,ಕೆರಂ ಷೆಸ್,ಗ್ರಂಥಾಲಯ ವ್ಯವಸ್ಥೇ ಮುಂತಾದವುಗಳ ಕಾರ್ಯ ಕೈಗೊಂಡಿದ್ದು ಔಚಿತ್ಯಪೂರ್ಣವಾಗಿದೆ ಎಂದರು.
ಪಬ್ಲಿಕ್ ಸ್ಪೋರ್ಟ್ಸ ಅಕಾಡೆಮಿ ಅಧ್ಯಕ್ಷ ವೈದ್ಯರಾದ ಡಾ.ಸತೀಶ ರಾಯಕರ್ ಅಧ್ಯಕ್ಷೆವಹಿಸಿ ಮಾತನಾಡಿದರು.
ಜಿಪಂ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ರತ್ನಂ ಪಾಂಡೆ ಟೇಬಲ ಟೇನಿಸ್, ಬ್ಯಾಡ್ಮಿಂಟನ್ ಆಟಗಳಿಗೆ ಚಾಲನೆ ನೀಡಿದರು.
ಸುಳೇಕಲ್ ಬೃಹನ್ಮಠದ ಶ್ರೀ ಭುವನೇಶ್ವರಯ್ಯ ತಾತನವರು ಸಾನಿಧ್ಯವಹಿಸಿದ್ದರು.
ಈಸಂಧರ್ಭದಲ್ಲಿ ಹಿರಿಯ ಡಾ.ಚಂದ್ರಪ್ಪ, ಡಾ.ಸೋಮರಾಜ, ನಗರಸಭೆ ಪೌರಾಯುಕ್ತ ವಿರುಪಾಕ್ಷಮೂರ್ತಿ, ಪಬ್ಲಿಕ್ ಕ್ಲಬ್ ಅಧ್ಯಕ್ಷ ಮಹಾಬಳೇಶ ಹಾಸಿನಾಳ ವಕೀಲ, ಪಿ.ನಾರಾಯಣ, ಗನ್ನಮನಿ ಶ್ರೀಮನ ನಾರಾಯಣ, ಹರಿಕೃಷ್ಣ ನೆಕ್ಕಂಟಿ, ಡಾ.ಪ್ರಶಾಂತ ದೇಸಾಯಿ, ಸುರೇಶ ಸಿಂಗನಾಳ, ಹಾಸ್ಯಕಲಾವಿ ನರಸಿಂಹ ಜೊಶೀ, ನಾಗೇಶ ಗುನ್ನಾಳ ಉಪಸ್ಥೀತರಿದ್ದರು.
ಸಾಹಿತಿ ಲಿಂಗಾರೆಡ್ಡಿ ಆಲೂರ ನಿರೂಪಿಸಿ,ಸ್ವಾಗತಿಸಿ,ವಂದಿಸಿದರು.
