IMG_20260902_125616

ಗೆಳತಿ

ಆ ಮುಂಗುರುಳು ಮುಗುಳುನಗೆಯಲಿ
ನಿನ್ನ ಹಾಲುಗೆನ್ನೆಯನು ಚುಂಬಿಸಿದಾಗೊಮ್ಮೆ
ನನ್ನ ಎದೆಗೆ ಚೂರಿ ಚುಚ್ಚಿದ ಅನುಭವ..

ಹುಣ್ಣಿಮೆಯ ಪೂರ್ಣ ಚಂದಿರ
ನಿನ್ನ ಕಂಗಳ ಬೆಳದಿಂಗಳಲಿ ನಾಚಿ ನಕ್ಕಾಗೊಮ್ಮೆ
ನನ್ನ ಮನಕೆ ಕತ್ತಲಾವರಿಸಿದ ಅನುಭವ..

ಜೇನುಹುಳುಗಳು ಮಕರಂದವನು ಕದ್ದೊಯ್ಯಲು
ನಿನ್ನ ಕೆಂದುಟಿಗಳಿಗೆ ಮುತ್ತಿಕ್ಕಿದಾಗೊಮ್ಮೆ
ನನ್ನ ಆಸೆಯ ಕನಸನು ಹತ್ತಿಕ್ಕಿದ ಅನುಭವ..

ಪರಿಮಳ ಸೂಸುವ ಸುಮಗಳು
ನಿನ್ನ ಕೋಮಲ ಪಾದಗಳನು ಸ್ಪರ್ಶಿದಾಗೊಮ್ಮೆ
ನನ್ನ ಹೃದಯ ವೇದನೆಯಲಿ ಕಂಪಿಸಿದ ಅನುಭವ..

ಸಂಜೆಯ ಸೂರ್ಯನು ಮುಳುಗುವ ಮುಂಚೆ
ನಿನ್ನ ಅನುಮತಿ ಪಡೆಯಲು ಕಿಟಕಿಯಲಿ ಇಣುಕಿದಾಗೊಮ್ಮೆ
ನನ್ನ ಪ್ರೇಮವನು ಅಣಕಿ ಕೋಪವನು ಕೆಣಕಿದ ಅನುಭವ..

ಗೆಳತಿ,
ನೀನು ನನಗೆ ಸ್ವಂತ,
ಜೊತೆಗಿದ್ದರೆ ನಿತ್ಯ ವಸಂತ.

ಶ್ರೀಧರ ವಾಣಿ, ಕಲ್ಲತಾವರಗೇರಿ.

Leave a Reply

Your email address will not be published. Required fields are marked *

error: Content is protected !!