2c136fae-be38-4577-97e1-318669006cc9

ಜಿಂದಾಲ್ ನೌಕರರ ಮೃತೀಯ ಮೇಲೆ, ಸಮಗ್ರ ವಿಚಾರಣೆ ನಡೆಯಲಿ

ಕರುನಾಡ ಬೆಳಗು ಸುದ್ದಿ

ಬಳ್ಳಾರಿ, 10- ಜಿಂದಾಲ್ ಸ್ಟೀಲ್ ಕೈಗಾರಿಕೆಯಲ್ಲಿ ಬಿಸಿನೀರು ಹರಿಸುವ ಪೈಪ್ ಲೈನ್ ದುರಸ್ಥಿ ಕಾರ್ಯನಿರತ ಯುವ ಇಂಜಿನಿಯರ್ ಗಳ ಸಾವಿಗೆ ಕಾರಣರಾದ ತೋರಣಗಲ್ಲು ಜಿಂದಾಲ್ ಸಂಸ್ಥೆಯ ಅಧ್ಯಕ್ಷ ಪಿ.ಕೆ. ಮುರಗನ್ ಹಾಗೂ ಮಾನವ ಸಂಪನ್ಮೂಲ ವಿಭಾಗದ ಉಪ ಅಧ್ಯಕ್ಷ ಸಂಜಯ್ ಹಂಡಾ ರವರ ನಿರ್ಲಕ್ಷ ದಿಂದ ಈ ಅಪಘಾತ ಸಂಭವಿಸಿದ್ದು ಆದ ಕಾರಣ ಅವರ ಮೇಲೆ ಮೊಕದ್ದಮೆ ದಾಖಲಿಸಿ ಬಂಧಿಸಲು ಒತ್ತಾಯಿಸುತ್ತೇವೆ. ಎಂದು, ಸಿಐಟಿಯು ಜಿಲ್ಲಾ ಅಧ್ಯಕ್ಷರ ಜೆ ಸತ್ಯ ಬಾಬು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜೆಎಂ ಚನ್ನಬಸಯ್ಯ, ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಬಿಎಸ್ ಶಿವಶಂಕರ್, ಸಿಪಿಐಎಂ ಸಂಡೂರು ತಾಲೂಕ ಕಾರ್ಯದರ್ಶಿ ಎ ಸ್ವಾಮಿ ಸಂಯುಕ್ತ ಪ್ರಕಟಣೆಯಲ್ಲಿ ಸರ್ಕಾರವನ್ನು ಒತ್ತಾಯ ಮಾಡಿದ್ದಾರೆ.

ಕಾರ್ಮಿಕರ ಸುರಕ್ಷತೆ ಬಗ್ಗೆ ನಿರ್ಲಕ್ಷತೆಯಿಂದಾಗಿ ತೋರಣಗಲ್ಲು ಜಿಂದಾಲ್ ಸಮೂಹದ ಕೈಗಾರಿಕೆಗಳಲ್ಲಿ ಕಾರ್ಮಿಕರ ಅಪಘಾತಗಳು ಸಾವುಗಳು ನಿರಂತರವಾಗಿ ನಡೆಯುತ್ತಿವೆ.

ಅಪಘಾತಗಳ ಸರಣಿಯು ಮುಂದುವರಿದಿದ್ದು ಗುರುವಾರ ಸಂಜೆ ಕಂಪನಿಯ ಸಿವಿಲ್‌ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಹೊಸಪೇಟೆ ತಾಲೂಕಿನ ಭುವನಹಳ್ಳಿ ಗ್ರಾಮದ ಗಂಟೆ ಜಡೆಪ್ಪ (31), ಚೆನ್ನೈನ ಶಿವಮುಗನ್ ದೇವ್ (22), ಬೆಂಗಳೂರಿನ ಸುಶಾಂತ್ ಕೃಷ್ಣ ನೈನಾರು (23) ಎಂಬ ಯುವ ನೌಕರರು ಮೃತರಾಗಿದ್ದಾರೆ.

10 ಎಂ ಟಿ ಗೇಟ್ ಹತ್ತಿರದ ಹೊಸ ಪ್ಲಾಂಟ್ ಎಚ್‌ಎಸ್ಎಮ್-3 ಘಟಕದ ಪೈಪ್ ಲೈನ್ ಸುರಂಗದಲ್ಲಿ ಉಂಟಾದ ಸಮಸ್ಯೆಯಿಂದಾಗಿ ನೀರಿನ ಹರಿವು ಸ್ಥಗಿತಗೊಂಡಿತ್ತು. ಈ ವೇಳೆ ಸುರಂಗದ ಪರಿಶೀಲನೆ ನಡೆಸಲು ಮೂವರು ಇಂಜಿನಿಯರ್ ಗಳು ಅದರ ಒಳಗೆ ಪ್ರವೇಶಿಸಿ ದುರಸ್ತಿ ಕಾರ್ಯನಿರತರಾಗಿದ್ದಾಗಲೆ
ಸುರಂಗದಲ್ಲಿ ಭಾರಿ ಬಿಸಿ ನೀರು ಏಕಾಏಕಿ ನೀರು ಹರಿಸಿದರಿಂದ ಪ್ರವಾಹ ಉಂಟಾಗಿ. ಮೂರು ಜನ ಇಂಜಿನಿಯರ್ ಗಳು ಸಂಗ್ರಹ ಟ್ಯಾಂಕ್ ಗೆ ಬಿದ್ದು ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.

ಜಿಂದಾಲ್ ನಲ್ಲಿ ನಿರಂತರ ವಾಗಿ ನಡೆಯುತ್ತಿರುವ ಅಪಘಾತ ಸಾವುಗಳಿಗೆ ಜಿಂದಲ್ ಆಡಳಿತ ಮಂಡಳಿಯ ಕಾರ್ಮಿಕರ ಸುರಕ್ಷತೆಯ ನಿರ್ಲಕ್ಷತನವೆ ಕಾರಣವಾಗಿದೆ. ಸಂಬಂಧಿಸಿದ ಕಾರ್ಮಿಕ ಇಲಾಖೆ, ಪೊಲೀಸ್, ಕೈಗಾರಿಕಾ ಸುರಕ್ಷತೆ ಹಾಗೂ ಪರಿಸರ ಇಲಾಖೆಗಳು ಜಿಂದಾಲ್ ಕಂಪನಿಯ ಕೈ ಗೊಂಬೆಗಳಾಗಿವೆ. ಅಪಘಾತಗಳನ್ನು ಗಂಭೀರವಾಗಿ ಪರಿಗಣಿಸಿ ತಪ್ಪಿಸ್ತಸ್ಥರಿಗೆ ಶಿಕ್ಷಿಸುವ ಕಾನೂನು ಕ್ರಮಗಳನ್ನು ಕೈಗೊಂಡು ಉದಾಹರಣೆಗಳು ಕಂಡುಬರುವುದಿಲ್ಲ.

ಕೈಗಾರಿಕೆ ಅಪಘಾತಗಳನ್ನು ಸಾಮಾನ್ಯ ಅಪಘಾತಗಳಂತೆ ಪರಿಗಣಿಸಿ ಮುಚ್ಚಿ ಹಾಕಲಾಗುತ್ತಿದೆ. ಹಲವು ಅಪಘಾತ ಸಾವುಗಳು ಬೆಳಕಿಗೆ ಬರಲಾರದಂತೆ ನೋಡಿಕೊಳ್ಳಲಾಗುತ್ತಿದೆ. ಅಪಘಾತಗಳ ಮರಣೋತ್ತರ ಪರೀಕ್ಷೆಗಳನ್ನು ಸಹ ಕಂಪನಿಗಳ ನಿರ್ದೇಶನದ ನಡೆಯುತ್ತಿರುವುದು, ಮೃತ ಕಾರ್ಮಿಕರಿಗೆ ಪರಿಹಾರವನ್ನು ನೀಡುವಲ್ಲಿ ಅನ್ಯಾಯವನ್ನು ಮಾಡಲಾಗುತ್ತಿದೆ. ಇದುವರೆಗೆ ನಡೆದ ಅಪಘಾತಗಳ ಸಾವುಗಳನ್ನು ನ್ಯಾಯಾಂಗ ತನಿಖೆಯ ಮೂಲಕ ನಡೆಸಿ ಕಾರ್ಮಿಕರಿಗೆ ನ್ಯಾಯ ಓದಗಿಸಬೇಕು. ಮೃತ ಕುಟುಂಬಕ್ಕೆ ಪರಿಹಾರ ನೀಡಿ ಕುಟುಂಬದವರಿಗೆ ಉದ್ಯೋಗ ಒದಗಿಸಬೇಕು. ಕೈಗಾರಿಕೆಗಳ ಮುಖ್ಯಸ್ಥರನ್ನು ಮತ್ತು ಸಂಬಂಧಿಸಿದ ಅಧಿಕಾರಿಗಳನ್ನು ಶಿಕ್ಷಿಸಲು ಒತ್ತಾಯಿಸುತ್ತೇವೆ ಎಂದು ಪ್ರಕಟನೆಯ ಮುಖಾಂತರ ಒತ್ತಾಯ ಮಾಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!