ಸಿರುಗುಪ್ಪ: ನಗರಸಭಾ ಕಾರ್ಯಾಲಯದಲ್ಲಿ ಸರ್ವಜ್ಞರ ಜಯಂತಿ ಕಾರ್ಯಕ್ರಮ
ಕರುನಾಡ ಬೆಳಗು ಸುದ್ದಿ
ಸಿರುಗುಪ್ಪ,21- ಸರ್ವಜ್ಞನ ವಚನ ಕೇವಲ ಹೇಳಲು ಅಲ್ಲ ಬದುಕಿನಲ್ಲಿರಲಿ ಎಂದು ನಗರಸಭಾ ಪೌರಯುಕ್ತ ಹೆಚ್ ಎನ್ ಗುರುಪ್ರಸಾದ್ ಅವರು ಅಭಿಪ್ರಾಯಪಟ್ಟರು.
ನಗರದ ನಗರಸಭಾ ಕಾರ್ಯಾಲಯದ ಚೇಂಬರ್ ನಲ್ಲಿ ತ್ರಿಪದಿ ಕವಿ ಸರ್ವಜ್ಞ ಅವರ ಜಯಂತಿ ಕಾರ್ಯಕ್ರಮದಲ್ಲಿ ಸರ್ವಜ್ಞರ ಭಾವಚಿತ್ರಕ್ಕೆ ಗೌರವಿಸಿ ಪುಷ್ಪ ಮಾಲೆ ಹೂ ಅರ್ಪಿಸಿ ಸ್ಮರಿಸಿ ನಮನ ಸಲ್ಲಿಸಿ ಅವರು ಮಾತನಾಡುತ್ತಾ ಸಂತ ಕವಿ ಎನಿಸಿದ ಸರ್ವಜ್ಞರ ವಚನಗಳು ಜೀವನದ ಆದರ್ಶ ಮೌಲ್ಯಗಳನ್ನು ಒಳಗೊಂಡಿದೆ ನಾವೆಲ್ಲರೂ ಅವರ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ರಾಷ್ಟ್ರೀಯ ಸಾಕ್ಷರತಾ ಸಮಾಜ ಸುಧಾರಕ ಎ ಅಬ್ದುಲ್ ನಬಿ ನಗರ ಸಭೆಯ ಅಧಿಕಾರಿಗಳು ಸಿಬ್ಬಂದಿ ವರ್ಗದವರು ರಾಜಭಕ್ಷಿ ಅಮರೇಶ್ ಗಂಗಾಧರ ಗೌಡ ಇತರರು ಇದ್ದರು.
