ಆನಂದ್ ಸಿಂಗ್ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ : ಶಾಸಕ ಗವಿಯಪ್ಪ
ಕರುನಾಡ ಬೆಳಗು ಸುದ್ದಿ
ವಿಜಯನಗರ, 26- ಟ್ಯಾಂಕರ್ ನೀರಿನ ವಿಷಯವಾಗಿ ಹಾಲಿ ಶಾಸಕ ಗವಿಯಪ್ಪ ಹಾಗೂ ಮಾಜಿ ಸಚಿವ ಆನಂದ್ ಸಿಂಗ್ ನಡುವೆ ಫೋನಿನಲ್ಲಿ ವಾಕ್ಸಮರ ಬಹಿರಂಗವಾಗಿ ವೈಯಕ್ತಿಕ ವಾಗ್ದಾಳಿಗೆ ತಿರುಗಿ ಆಣೆ ಪ್ರಮಾಣದವರೆಗೂ ತಲುಪಿತು.
ಭಾನುವಾರ ಚಿತ್ತವಾಡ್ಡಿಯ ಕುಡಿಯುವ ನೀರಿನ ಘಟಕದಲ್ಲಿ ಮಾಜಿ ಸಚಿವ ಆನಂದ್ ಸಿಂಗ್ ಗೆ ಸೇರಿದ ಟ್ಯಾಂಕರ್ ಗಳಿಗೆ ನೀರು ತುಂಬಿಸಲು ನಗರಸಭೆ ಪೌರಾಯುಕ್ತರಾದ ಚಂದ್ರಪ್ಪನವರು ನಿರಾಕರಿಸಿದರು, ಇದರಿಂದಾಗಿ ಸ್ಥಳದಲ್ಲೇ ಹಾಜರಿದ್ದ ನಗರಸಭಾ ಸದಸ್ಯರು ಕುಪಿತಗೊಂಡು ಪೌರಾಯುಕ್ತರ ಮೇಲೆ ವಾಗ್ದಾಳಿ ನಡೆಸಿದರು.
ಈ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿದ ಆನಂದ್ ಸಿಂಗ್ ಸಾರ್ವಜನಿಕರಿಗೆ ತೊಂದರೆಯಾಗಿದೆ ನೀರು ಬಿಡಿ ಎಂದು ಕೋರಿದರು, ಇದಕ್ಕೆ ಶಾಸಕ ಗವಿಯಪ್ಪನವರ ಅನುಮತಿ ಇಲ್ಲದೇ ನೀರು ಬಿಡಲು ಸಾಧ್ಯವಿಲ್ಲವೆಂದು ಪೌರಾಯುಕ್ತರು ನಿರಾಕರಿಸಿದರು. ಅ ವೇಳೆ ಆನಂದ್ ಸಿಂಗ್ ಹಾಗೂ ಗವಿಯಪ್ಪನವರ ನಡುವೆ ನಡೆದ ಪೋನಿನ ಭಾಷಣೆಯಲ್ಲಿ ಒಬ್ಬರ ಮೇಲೊಬ್ಬರು ವಾಗ್ದಾಳಿ ನಡೆಸಿದರು.
ನನ್ನ ಮನೆ ಮುಂದೆ, ಹೋಗುವಾಗೆಲ್ಲಾ ನನ್ನ ಮನೆಯನ್ನು ಜಿಂದಾಲ್ ಅವರು ಕಟ್ಟಿಸಿದ್ದಾರೆಂದು ಹಲವಾರು ಸಚಿವರ ಬಳಿ ಹೇಳಿದ್ದೀರಾ ಎಂದು ನನಗೆ ಗೊತ್ತು, ಹೀಗಿದ್ದರೂ ನಾನು ನಿಮ್ಮ ಬಗ್ಗೆ ಒಂದು ಮಾತನಾಡಿಲ್ಲ, ನೀವು ಆ ರೀತಿ ಹೇಳಿಲ್ಲವೆಂದರೇ ಬನ್ನಿ ಸಾಯಿಬಾಬಾನ ಮೇಲೆ ಆಣೆ ಮಾಡಿ ಎಂದು ತಾಕೀತು ಮಾಡಿದ ಅವರು ಈ ಬಗ್ಗೆ ನಿಮ್ಮ ಪಕ್ಷದ ಸಚಿವರೇ ನನಗೆ ಹೇಳಿದ್ದಾರೆ ಎಂದದು ಹೇಳಿದರು.
ನಾನು ಫೋನಿನ ಸ್ಪೀಕರ್ ಹಾಕಿ ಮಾತನಾಡುತ್ತಿಲ್ಲ, ನೀರಿನ ಸಮಸ್ಯೆ ಇದೆ ಬಂದು ಪರಿಹರಿಸಿ, ನೀವು ಹದಿನೈದು ವರ್ಷ ಸುಮ್ಮನಿದ್ದೀರಾ ಎಂದರೆ ನಾನು ಸುಮ್ಮನಿರಲು ಸಾಧ್ಯವಿಲ್ಲ. ನಾನೇನು ಬೇಡ ಎಂದು ಹೇಳಿರಲಿಲ್ಲ, ನಾನು ಸಾಮಾನ್ಯ ಪ್ರಜೆ ಕೇಳುವ ಸ್ವಾತಂತ್ರ ಪ್ರತಿಯೊಬ್ಬ ಜನಸಾಮಾನ್ಯರಿಗೂ ಇದೆ, ನಾನು ಕೇಳುತ್ತೇನೆ ನನ್ನ ಮೇಲೆ ಕೇಸ್ ಹಾಕಿ ಒಳಗೆ ಹಾಕಿಸುತ್ತೀರಾ ಹಾಕಿ ನಾನು ಸಿದ್ದನಿದ್ದೇನೆ, ನೀರು ಬಿಡದೆ ನಾನು ಹೋಗಲ್ಲ ಎಂದು ಹಠ ಹಿಡಿದು ರಿಂಗ್ ರಸ್ತೆಯಲ್ಲಿಯೇ ಧರಣಿ ಕುಳಿತರು. ಶಾಸಕ ಗವಿಯಪ್ಪ ಗದರಿದರು ಎಂದು ತಿಳಿದು ಬಂದಿದೆ. ಆನಂದ್ ಸಿಂಗ್ ಅವರಿಗೆ ಹತ್ತಕ್ಕೂ ಹೆಚ್ಚು ನಗರಸಭಾ ಸದಸ್ಯರು ಸಾಥ್ ನೀಡಿ ಈ ಸಂಧರ್ಭದಲ್ಲಿ ನೀರು ಕೊಡುವವರೆಗೂ ಜಾಗ ಕದಲೋದಿಲ್ಲ ಎಂದು ಧರಣಿ ಕುಳಿತರು.
ಖಾಸಗಿ ವಾಹನಗಳಿಗೆ ನೀರು ಬಿಡುವ ಸಲುವಾಗಿ ನಾಳೆ ಕೌನ್ಸಿಲ್ ಬಾಡಿ ಸಭೆ ಕರೆಯಲಾಗಿದೆ ಅಲ್ಲಿ ಏನು ತೀರ್ಮಾನ ಆಗುತ್ತದೆ ಅದರಂತೆ ಕ್ರಮ ಕೈಗೊಳ್ಳಲಾಗುವುದು.
– ಚಂದ್ರಪ್ಪ ಪೌರಾಯುಕ್ತರು
ನಗರಸಭೆ ಹೊಸಪೇಟೆ
ನೀರಿನ ವ್ಯವಸ್ಥೆಯನ್ನು ನೋಡಿಕೊಳ್ಳಲು ಪೌರಾಯುಕ್ತರು, ನಗರಸಭೆ ಸದಸ್ಯರು ಜಿಲ್ಲಾಧಿಕಾರಿಗಳು ಇದ್ದಾರೆ, ವಿಪರೀತ ಬೇಸಿಗೆ ಇರುವುದರಿಂದ ಕುಡಿಯುವ ನೀರಿಗಾಗಿ ಸರ್ಕಾರದಿಂದ ಹಣ ಕೂಡ ಬಂದಿದೆ ಅದನ್ನು ಜಿಲ್ಲಾಧಿಕಾರಿಗಳು ನಿಭಾಯಿಸುತ್ತಿದ್ದಾರೆ ವಿನಾಕಾರಣ ಆನಂದ್ ಸಿಂಗ್ ರವರು ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ.
– ಹೆಚ್. ಆರ್.ಗವಿಯಪ್ಪ
ಶಾಸಕರು
