ನೀರಿನ ಸಂರಕ್ಷಣೆ ನಮ್ಮೆಲ್ಲರ ಹೊಣೆ : ಇಓ ಎಸ್.ಪವನ್ ಕುಮಾರ್
ಕರುನಾಡ ಬೆಳಗು ಸುದ್ದಿ
ಸಿರುಗುಪ್ಪ, 8- ನೀರಿನ ಸಂರಕ್ಷಣೆ ನಮ್ಮೆಲ್ಲರ ಹೊಣೆ ಎಂದು ತಾಲೂಕ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ತಾಲೂಕ ಪಂಚಾಯತ್ ಸಭಾಭವನದಲ್ಲಿ ತಾಲೂಕು ಕಾನೂನು ಸೇವೆಗಳ ಪ್ರಾಧಿಕಾರ ವಕೀಲರ ಸಂಘ ತಾಲೂಕು ಪಂಚಾಯತ್ ಸಹಯೋಗದೊಂದಿಗೆ ಕಾನೂನು ಅರಿವು ಮತ್ತು ನೆರವು ಹಾಗೂ ವಿಶ್ವ ಜಲ ದಿನಾಚರಣೆ ಕಾರ್ಯಕ್ರಮ ಕ್ಕೆ ಹಸಿರು ಸಸಿಗೆ ನೀರು ಹಾಕುವ ಮೂಲಕ ಚಾಲನೆ ನೀಡಿದರು.
ನೀರಿನ ಸಂರಕ್ಷಣೆ ಶುದ್ಧ ನೀರಿನ ಸಾರ್ವತ್ರಿಕ ಲಭ್ಯತೆಯ ಮಹತ್ವವನ್ನು ತಿಳಿಸುವುದು ನೈರ್ಮಲ್ಯದ ಕುರಿತು ಅರಿವಿನ ಹಿನ್ನೆಲೆಯಲ್ಲಿ ಹುಟ್ಟಿಕೊಂಡದ್ದು ಅಂತರರಾಷ್ಟ್ರೀಯ ಜಲ ದಿನ ಆಚರಣೆ ಎಂದು ಅವರು ಮಾತನಾಡುತ್ತಿದ್ದರು.
ನೀರು ಜೀವ ಸಂಕುಲ ಬೆಳವಣಿಗೆಯಲ್ಲಿ ಅತಿ ಅಗತ್ಯ ಮನುಷ್ಯನ ಬಾಯಾರಿಕೆ ಮತ್ತು ಆರೋಗ್ಯವನ್ನು ರಕ್ಷಿಸುವುದಲ್ಲದೆ ಅದಕ್ಕೆ ಹೆಚ್ಚಿನ ಮಹತ್ವ ನೀರಿಗಿದೆ ಸಕಲ ಜೀವ ರಾಶಿಗಳ ಮೂಲ ನೀರು ನೀರಿಲ್ಲದ ಬದುಕು ಊಹೆಗೆ ನಿಲುಕದ್ದು ಹೀಗಾಗಿ ನೀರಿನ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ ಎಂದು ವಿವರಿಸಿದರು.
ಅರಣ್ಯ ನಾಶದಿಂದಾಗಿ ತಾಪಮಾನ ಹೆಚ್ಚಾಗುವುದು ಮಾತ್ರವಲ್ಲದೆ ನಾವು ಪಡೆಯುವ ಮಳೆಯ ಪ್ರಮಾಣವು ಕಡಿಮೆಯಾಗಿದೆ ಆದ್ದರಿಂದ ಮಳೆ ನೀರನ್ನು ಸಂಗ್ರಹಿಸಿ ತ್ಯಾಜ್ಯ ನೀರನ್ನು ಮರುಬಳಕೆ ಮಾಡಿ ನೀರು ವ್ಯರ್ಥವಾಗುವುದನ್ನು ನಿಲ್ಲಿಸಿ ಎಂದು ಸಲಹೆ ನೀಡಿದರು.
ಹಿರಿಯ ವಕೀಲರಾದ ಎನ್ ಅಬ್ದುಲ್ ಸಾಬ್ ರಾರಾವಿ, ಮಲ್ಲಿಗೌಡ, ವೆಂಕಟೇಶ ನಾಯಕ, ರಾಷ್ಟ್ರೀಯ ಸಾಕ್ಷರತಾ ಅಬ್ದುಲ್ ನಬಿ, ತಾಲೂಕ ಪಂಚಾಯತ್ ವ್ಯವಸ್ಥಾಪಕಿ ಸುಜಾತ ಕೋರಿ ಮತ್ತಿತರ ಗಣ್ಯರು ಉದ್ಘಾಟನಾ ಸಮಾರಂಭದಲ್ಲಿ ಇದ್ದರು.
