ಪ್ರತಿವೊಬ್ಬರು ನಿತ್ಯವು ಯೋಗಾಭ್ಯಾಸ ರೂಢಿಸಿಕೊಳ್ಳಿ : ವೈ.ವನಜಾ
ಕರುನಾಡ ಬೆಳಗು ಸುದ್ದಿ
ಬೇವಿನಹಾಳ್, 22- ಜನತಾಕ್ಯಾಂಪ್ ಅಮೃತ ಸರೋವರ ಅಂಗಳದಲ್ಲಿ ಅಂತರಾಷ್ಟ್ರೀಯ ಯೋಗ ದಿನ ಆಚರಣೆ ಪ್ರತಿದಿನ ಯೋಗಾಭ್ಯಾಸ ಮಾಡುವುದರಿಂದ ಮನಸ್ಸು ಮತ್ತು ದೇಹ ಉತ್ಸಾಹದಿಂದ ಕೂಡಿರುತ್ತದೆ, ಆಯಸ್ಸು ವೃದ್ಧಿಯಾಗಲಿದೆ ಎಂದು ತಾಲೂಕು ಪಂಚಾಯತ ಸಹಾಯಕ ನಿರ್ದೇಶಕರಾದ ವೈ.ವನಜಾ ಅವರು ಹೇಳಿದರು.
ತಾಲೂಕಿನ ಬೇವಿನಹಾಳ್ ಗ್ರಾಮ ಪಂಚಾಯತಿ ವ್ಯಾಪ್ತಿಯ ಜನತಾ ಕ್ಯಾಂಪ್ ನಲ್ಲಿನ ಅಮೃತ ಸರೋವರ ಅಂಗಳದಲ್ಲಿ ಶುಕ್ರವಾರದಂದು ಆಯೋಜಿಸಲಾದ ಅಂತಾರಾಷ್ಟ್ರೀಯ ಯೋಗ ದಿನದ ಆಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಭಾರತೀಯ ಪರಂಪರೆಯ ಯೋಗವನ್ನು ಇಂದು ವಿಶ್ವದ್ಯಾದಂತೆ ಆಚರಣೆ ಮಾಡುತ್ತಿರುವುದು ನಮ್ಮೆಲ್ಲರ ಹೆಮ್ಮೆ. ನಮ್ಮ ಹಿರಿಯರು ದೈನಂದಿನ ಜೀವನದಲ್ಲಿ ಯೋಗಾಭ್ಯಾಸವನ್ನು ಅಳವಡಿಸಿಕೊಂಡಿದ್ದರು. ಅದರಂತೆ ನಾವೆಲ್ಲರೂ ಪ್ರತಿನಿತ್ಯದ ಕೆಲಸದ ಜೊತೆಗೆ ಯೋಗಾಭ್ಯಾಸ ಮಾಡುವುದು ರೂಢಿಸಿಕೊಳ್ಳಬೇಕು. ಯೋಗದಿಂದ ಮನಸ್ಸಿಗೆ ನೆಮ್ಮದಿ, ಉತ್ತಮ ಆರೋಗ್ಯಕ್ಕೆ ಸಹಕಾರ ಪ್ರತಿದಿನ ದೈಹಿಕ ಚಟುವಟಿಕೆಗಳಲ್ಲಿ ನಮ್ಮನ್ನ ನಾವು ತೊಡಗಿಸಿಕೊಳ್ಳುವ ಮೂಲಕ ಆರೋಗ್ಯವಂತರಾಗಿಲು, ಮತ್ತು ಮಾನಸಿಕತೆ ಕಳೆದುಕೊಳ್ಳಲು ಯೋಗಾಭ್ಯಾಸ ಮಾಡಬೇಕು ಎಂದರು.
ಯೋಗ ತರಬೇತುದಾರರಾದ ವೆಂಕಟೇಶ ಕೆಂಚನಗುಡ್ಡ ಅವರು ಮಾತನಾಡಿ ಯೋಗಾಭ್ಯಾಸಕ್ಕೆ ತನ್ನದೇಯಾದ ಶಕ್ತಿ ಇದೆ, ನೆಮ್ಮದಿ ಜೀವನ ಸಾಗಿಸಲು ಯೋಗ ಅತ್ಯಾವಶ್ಯಕ. ಮಾಡುವುದರಿಂದ ಆಯಸ್ಸು ವೃದ್ಧಿಯಾಗುತ್ತದೆ. ಪ್ರತಿನಿತ್ಯ ಕನಿಷ್ಠ ಒಂದರಿಂದ ಅರ್ಧಗಂಟೆ ಯೋಗಾಭ್ಯಾಸದಲ್ಲಿ ತೊಡಗಿಸಿಕೊಳ್ಳುವ ಮನೋಭಾವ ಬೆಳೆಸಿಕೊಳ್ಳಿ ಎಂದರು. ನಂತರ ವಿವಿಧ ಬಗೆಯ ಯೋಗಸಾನಗಳನ್ನು ತಿಳಿಸಿಕೊಡುವ ಮೂಲಕ ಪ್ರದರ್ಶಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಸದಸ್ಯರಾದ ರವಿ ಕುಮಾರ, ಮಂಜುನಾಥ ಕೋಟೆ, ಯಮನೂರಪ್ಪ ಕಂಬಳಿಹಾಳ, ನಾಗರಾಜ್ ನಾಗನಕಲ್, ಹೂವಪ್ಪ ಪನ್ನಾಪೂರ, ದೊಡ್ಡಪ್ಪ ಬೇವಿನಹಾಳ, ಅಭಿವೃದ್ಧಿ ಅಧಿಕಾರಿ ಪ್ರಕಾಶ್ ಹೀರೆಮಠ, ಗ್ರಾಮ ಲೆಕ್ಕಾಧಿಕಾರಿ ಗಂಗಪ್ಪ, ಪ್ರಮುಖರಾದ ಭೀಮಣ್ಣ ಬೋವಿ, ರಾಮ್ ಬಾಬು, ಕಾರ್ಯದರ್ಶಿ ಜಮೀಲ್ ಅಹಮದ್, ತಾ.ಪಂ ಐಇಸಿ ಸಂಯೋಜಕ ಸೋಮನಾಥಗೌಡರ್, ಸೇರಿ ಗ್ರಾಮ ಸಿಬ್ಬಂದಿಗಳು, ಶಾಲಾ ಶಿಕ್ಷಕರು, ಆಶಾ ಕಾರ್ಯಕರ್ತೆಯರು, ಸಾರ್ವಜನಿಕರು, ಶಾಲಾ ಮಕ್ಕಳು ಇದ್ದರು.
