ಅಳವಂಡಿ- ವದಗನಾಳ ಗ್ರಾಮದಲ್ಲಿ ಗ್ರಾಮ ಚಲೋ ಅಭಿಯಾನಕ್ಕೆ ಚಾಲನೆ
ಬಿಜೆಪಿಗೆ 400 ಸ್ಥಾನ ಖಚಿತ : ಮಂಜುಳಾ ಕರಡಿ
ಕರುನಾಡ ಬೆಳಗು ಸುದ್ದಿ
ಕೊಪ್ಪಳ: ಬಿಜೆಪಿ ಆಡಳಿತ ಜನರಿಗೆ ವಿಶ್ವಾಸ ಮೂಡಿಸಿದ್ದು, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 400 ಕ್ಕೂ ಅಧಿಕ ಸ್ಥಾನ ಪಡೆಯಲಿದೆ ಎಂದು ಬಿಜೆಪಿ ಮುಖಂಡರಾದ ಮಂಜುಳಾ ಅಮರೇಶ ಕರಡಿ ಅಭಿಪ್ರಾಯಪಟ್ಟರು.
ಅಳವಂಡಿ,ವದಗನಾಳ ಗ್ರಾಮದಲ್ಲಿ “ಗ್ರಾಮ ಚಲೋ ಅಭಿಯಾನ ಹಾಗೂ ಫಲಾನುಭವಿಗಳ ಅಭಿಯಾನ” ದ ಅಂಗವಾಗಿ ಮನೆ-ಮನೆ ಭೇಟಿ ನೀಡಿ ಮಾತನಾಡಿದ ಅವರು, ಪ್ರತಿ ಮನೆ ಮನೆಗೆ ಬಿಜೆಪಿ ಸಾಧನೆ ಪ್ರಚಾರ ಪಡಿಸಿ ಮತ್ತೊಮ್ಮೆ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬರಲು ಗ್ರಾಮ ಚಲೋ ಅಭಿಯಾನ ಆರಂಭಿಸಲಾಗಿದೆ. ಮೋದಿ ನೇತೃತ್ವದ ಸರ್ಕಾರ 400 ಕ್ಕೂ ಅಧಿಕ ಸ್ಥಾನ ಗಳಿಗೆ ಮತ್ತೊಮ್ಮೆ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದರು.
ಕಳೆದ 10 ವರ್ಷದ ಬಿಜೆಪಿ ಆಡಳಿತ ವನ್ನು ಜನರು ಮೆಚ್ಚಿದ್ದಾರೆ. ದೇಶದ ಆರ್ಥಿಕತೆ, ಸಾಮಾಜಿಕ, ಸಾಂಸ್ಕೃತಿಕ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದೆ. ಪ್ರವಾಸೋದ್ಯಮ, ಹೆದ್ದಾರಿ, ರೈಲ್ವೆ ಕ್ಷೇತ್ರದಲ್ಲಿ ವಿಶ್ವದಲ್ಲೇ ಮೊದಲ ಸಾಲಿನಲ್ಲಿದೆ. ಕಾಂಗ್ರೆಸ್ ಹಾಗೂ ಮಿತ್ರಪಕ್ಷಗಳು ಆರು ದಶಕದಿಂದ ಮಾಡದ ಅಭಿವೃದ್ಧಿ ಕೆಲಸಗಳನ್ನು ಮೋದಿ ಸರ್ಕಾರ 10 ವರ್ಷದಲ್ಲೇ ಮಾಡಿದೆ ಎಂದು ತಿಳಿಸಿದರು.
ಗ್ರಾಮೀಣ ಮಂಡಲ ಅಧ್ಯಕ್ಷ ಮಂಜುನಾಥ ಪಾಟೀಲ್, ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಹ್ಯಾಟ್ರಿಕ್ ಗೆಲುವಿನೊಂದಿಗೆ ಕೇಂದ್ರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ. ಮನೆ ಮನೆಗೆ ಪಕ್ಷದ ಕಾರ್ಯಕರ್ತರು ತೆರಳಿ ಕೇಂದ್ರದ ಸಾಧನೆ ತಿಳಿಸಬೇಕು ಎಂದರು.
ಈ ಸಂದರ್ಭದಲ್ಲಿ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ಕಲಾದಗಿ,ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಕೀರ್ತಿ ಪಾಟೀಲ್,ಗೀತಾ ಪಾಟೀಲ್,ಪಕ್ಷದ ಹಿರಿಯ ಮುಖಂಡರಾದ ನಾಗಪ್ಪ ಸರ್ ಸವಡಿ,ಹನುಮಂತಪ್ಪ ಉಂಕಿ ,ಬಸವರಾಜ ಇಂದರಗಿ,ಬಸವರೆಡ್ಡಿ ಭೈರಾಪುರ,ಶಿವರಾಜ ಬನ್ನಿಕೊಪ್ಪ,ರವಿ ಉಪಾರ, ಸೇರಿದಂತೆ ಅನೇಕ ಮುಖಂಡರು,ಬೂತ್ ಅಧ್ಯಕ್ಷರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

