ಮಾರ್ಚ್ 19ಕ್ಕೆ ಶ್ರೀ ಮಹಾಮಹಿಮ ಮಂಗಳೇಶ್ವರ ಮಹಾರಥೋತ್ಸವ
ಕರುನಾಡ ಬೆಳಗು ಸುದ್ದಿ
ಕುಕನೂರ, 21- ತಾಲೂಕಿನ ಮಂಗಳೂರು ಗ್ರಾಮದ ಆರಾಧ್ಯ ದೈವ ಬೇಡಿದವರು ಕಲ್ಪಿಸುವ ಕಾಮಧೇನು ತನ್ನದೇ ಆದ ಪವಾಡದ ಮೂಲಕ ಭಕ್ತರ ಮನದಲ್ಲಿ ನೆಲೆಸಿರುವ ಶ್ರೀ ಮಂಗಳೇಶ್ವರ ಸ್ವಾಮಿಯ ಮಹಾ ರಥೋತ್ಸವ 2024 ನೇ ಸಾಲಿನ 19.03.2024 ಮಂಗಳವಾರ ದಿವಸ ಜರುಗುವದು.
ಮಂಗಳೂರು ಗ್ರಾಮ ಕುಕನೂರು ತಾಲೂಕಿನಲ್ಲಿ ಅತಿ ದೊಡ್ಡ ಗ್ರಾಮವಾಗಿದ್ದು ಹದಿನೈದು ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇದೆ ಎಲ್ಲಾ ಜನಾಂಗದ ಜನರುಗಳು ಸೇರಿಕೊಂಡು ಭಾವೈಕ್ಯತೆಯಿಂದ ಹಬ್ಬದ ವಾತಾವರಣದಂತೆ ಈ ಒಂದು ಜಾತ್ರೆಯನ್ನು ಆಚರಿಸುತ್ತಾರೆ ಒಂದು ತಿಂಗಳ ಮುಂಚಿತವಾಗಿ ಜಾತ್ರೆಯ ಸಕಲ ಸಿದ್ಧತೆಗಳು ನಡೆಯುತ್ತವೆ… ಮಂಗಳೇಶ್ವರ ದೇವಸ್ಥಾನ ಅತ್ಯಂತ ಹಳೆಯ -ಗುಡಿಯಾಗಿದ್ದು ಅಪಾರ ಭಕ್ತರ ಶ್ರದ್ಧಾ ಕೇಂದ್ರವಾಗಿದೆ. ಜಾತ್ರೆ ಅಂಗವಾಗಿ ಇಲ್ಲಿ ವಿವಿಧ ಧಾರ್ಮಿಕ ಚಟುವಟಿಕೆ ಆರಂಭವಾಗಿದ್ದು ಇರುತ್ತದೆ.
ನಿನ್ನೆ ಸಾಯಂಕಾಲ ರವಿವಾರ ದಿವಸ ತೇರಿನ ಮೂರ್ತವನ್ನು ನೂರಾರು ಭಕ್ತರು ಮತ್ತು ಗುರು ಹಿರಿಯರ ಸಮ್ಮುಖದಲ್ಲಿ ತೇರಿನ ಮೂರ್ತವನ್ನು ನೆರವೇರಿಸಲಾಯಿತು ಆರಾಧ್ಯ ದೈವ ಶ್ರೀ ಮಂಗಳೇಶ್ವರ ಸ್ವಾಮಿಯ ಭಕ್ತಾದಿಗಳು ಮಾರ್ಚ್ 19ಕ್ಕೆ ಜಾತ್ರಾ ಮಹೋತ್ಸವಕ್ಕೆ ಆಗಮಿಸಿ ಮಂಗಳೇಶ್ವರ ಸ್ವಾಮಿಯ ಕೃಪೆಗೆ ಪಾತ್ರರಾಗಬೇಕೆಂದು ಕಮಿಟಿಯ ಮುಖಂಡರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ..
