WhatsApp Image 2024-02-21 at 4.32.35 PM (1)

ರೈತರಿಂದ ಮೇವು ಖರೀದಿಗೆ ದರ ನಿಗದಿ

ಕರುನಾಡ ಬೆಳಗು ಸುದ್ದಿ

ವಿಜಯನಗರ,21- ಹೊಸಪೇಟೆ ತಾಲ್ಲೂಕಿನ ಜಾನುವಾರುಗಳಿಗೆ ಮೇವಿನ ಅಗತ್ಯವಿದ್ದ ಪ್ರಯುಕ್ತ ಮೇವು ಖರೀದಿ ಮಾಡಲು ದರ ನಿಗದಿ ಮಾಡಲಾಗಿದೆ ಎಂದು ಪಶು ಆಸ್ಪತ್ರೆಯ ಮುಖ್ಯ ಪಶುವೈದ್ಯಾಧಿಕಾರಿಗಳು ತಿಳಿಸಿದ್ದಾರೆ.

ತಾಲ್ಲೂಕಿನ ರೈತರು ಮತ್ತು ಮೇವು ವಿತರಕರು, ಸರಬರಾಜುದಾರರು ತಮ್ಮ ಬಳಿ ಇರುವ ಮೇವನ್ನು ಒಂದು ಟನ್ ಭತ್ತ ಅಥವಾ ರಾಗಿ ಹುಲ್ಲಿಗೆ 6,000 ಮತ್ತು ಸಾಕಾಣಿಕೆ ವೆಚ್ಚ ರೂ.15/ಟನ್/ಕೀ.ಮೀ. ರಂತೆ ನಿಗದಿಯಾಗಿದೆ.

ಆಸಕ್ತ ರೈತರು ದರ ಪಟ್ಟಿಗಳನ್ನು ಫೆಬ್ರುವರಿ 27ರ ಸಂಜೆ 4 ಗಂಟೆಯೊಳಗಡೆ ಮುಖ್ಯ ಪಶುವೈದ್ಯಾಧಿಕಾರಿಗಳು (ಆಡಳಿತ), ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ, ಪಶು ಆಸ್ಪತ್ರೆ, ಈ ಕಚೇರಿಗೆ ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!