WhatsApp Image 2024-03-07 at 12.52.44 PM

ಲೇಖಕಿ ಅಂಜಲಿ ಬೆಳಗಲ್ ಅಂತರಾಷ್ಟ್ರೀಯ ಸಾಹಿತ್ಯ ಸಮ್ಮೇಳನಕ್ಕೆ ಆಯ್ಕೆ

ಕರುನಾಡ ಬೆಳಗು ಸುದ್ದಿ

ವಿಜಯನಗರ,7- ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯಂದು ಅಂತರಾಷ್ಟ್ರೀಯ ಸಾಹಿತ್ಯ ಸಮ್ಮೇಳನಕ್ಕೆ ಭಾರತ ಸರ್ಕಾರ ಕೇಂದ್ರ ಸಾಹಿತ್ಯ ಅಕಾಡೆಮಿ ನವದೆಹಲಿ ವಿಶ್ವ ಸಾಹಿತ್ಯೊತ್ಸವಕ್ಕೆ ಜಿಲ್ಲೆಯ ಹೆಮ್ಮೆಯ ಲೇಖಕಿ ಅಂಜಲಿ ಬೆಳಗಲ್ ಆಯ್ಕೆಯಾಗಿದ್ದಾರೆ.

11ರಿಂದ 16 ರವರೆಗೆ ನವದೆಹಲಿಯಲ್ಲಿ ವಿಶ್ವದ ಅತ್ಯಂತ ದೊಡ್ಡ ಸಾಹಿತ್ಯೊತ್ಸವ ನಡೆಯುತ್ತಿದ್ದು, ಭಾರತ ಸರ್ಕಾರ, ನವದೆಹಲಿಯಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಹಾಗು ಮಿನಿಸ್ಟರಿ ಆಪ್ ಕಲ್ಚರಲ್ ಡಿಪಾರ್ಟ್ಮೆಂಟ್ ನಡೆಸುವ ಅಂತರಾಷ್ಟ್ರೀಯ ಸಾಹಿತ್ಯ ಸಮ್ಮೇಳನ World s Largest literature Festival ನಲ್ಲಿ ದೇಶ ವಿದೇಶದಿಂದ ಒಂದು ಸಾವಿರ ಕವಿಗಳು ಖ್ಯಾತ ಸಾಹಿತಿಗಳು ಭಾಗವಹಿಸಲಿದ್ದಾರೆ ಹಾಗೂ 175 ಭಾಷೆಗಳಲ್ಲಿ ಗೋಷ್ಠೀ ನಡೆಯುತ್ತಿದ್ದು 175 ಇವೆಂಟ್ಸ್ ಗಳು ನಡೆಯುತ್ತಿದ್ದೆ. ಇಂತಹ ವಿಶ್ವದ ಅತ್ಯಂತ ದೊಡ್ಡ ಸಾಹಿತ್ಯ ಸಮ್ಮೇಳ ಸಾಹಿತ್ಯೊತ್ಸವಕ್ಕೆ ನಮ್ಮ ವಿಜಯ ನಗರ ಜಿಲ್ಲೆಯ ಖ್ಯಾತ ಲೇಖಕಿ ಅಂಜಲಿ ಬೆಳಗಲ್ ಆಯ್ಕೆ ಆಗಿದ್ದಾರೆ ಅವರ ಕನ್ನಡ ಸಾಹಿತ್ಯದ ಕೃಷಿ, ಹಾಗು ಪ್ರಗತಿಪರ ಬರವಣಿಗೆ, ಸಮಾಜ ಸೇವೆ ಹೊರಾಟವನ್ನು ಗುರುತಿಸಿ, ಭಾರತೀಯ ಆದಿವಾಸಿ ಸಮುದಾಯಗಳ ಕುರಿತು ಅಂಜಲಿ ಬೆಳಗಲ್ ಅವರು ದಿನಾಂಕ 13-3-2024 ರಂದು ನವದೆಹಲಿ ಕೇಂದ್ರ ಸಾಹಿತ್ಯ ಅಕಾಡೆಮಿ ವೇದಿಕೆಯಲ್ಲಿ ಉಪನ್ಯಾಸ ಹಾಗೂ ಕವನ ವಾಚನ ಮಾಡಲಿದ್ದಾರೆ.

ವಿಶ್ವದ ಅತ್ಯಂತ ದೊಡ್ಡ ಸಾಹಿತ್ಯೊತ್ಸವವನ್ನು ಖ್ಯಾತ ಲೇಖಕರು ಹಾಗು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು ಆದ ಗುಲ್ಜಾರ್ ಸಾರ್ ಉದ್ಗಾಟಿಸಲಿದ್ದಾರೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ನವದೆಹಲಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!