IMG-20240121-WA0021

ವಿಕಸಿತ ಭಾರತ ಸಂಕಲ್ಪ ಯಾತ್ರೆ
ಕೇಂದ್ರದ ಪ್ರಧಾನಿ ನರೇಂದ್ರ ಮೋದಿಜೀ ವಿಶ್ವದ ಗುರು. ಪ. ಪಂ. ಮಾಜಿ ಅಧ್ಯಕ್ಷ ಅಮರೇಶ ಹುಬ್ಬಳ್ಳಿ

ಕರುನಾಡ ಬೆಳಗು ಸುದ್ದಿ 

 

ಯಲಬುರ್ಗಾ,21- ನರೇಂದ್ರ ಮೋದಿಯವರು ನಮ್ಮ ದೇಶದ ಪ್ರಧಾನಿಯಾಗಿ ಹತ್ತು ವರ್ಷವಾಗಿತ್ತು ಇವರು ತಮ್ಮ ಅಧಿಕಾರಿ ಅವಧಿಯಲ್ಲಿ ದೇಶವನ್ನು ಸಮಗ್ರ ಅಭಿವೃದ್ಧಿ ಮಾಡಿ ವಿಶ್ವದ ಗುರು ಆಗಿದ್ದಾರೆ ಎಂದು ಪಟ್ಟಣ ಪಂಚಾಯಿತಿ ಅಧ್ಯಕ್ಷ ಅಮರೇಶ ಹುಬ್ಬಳ್ಳಿ ಹೇಳಿದರು

ಪಟ್ಟಣ ಪಂಚಾಯಿತಿಯ ಆವರಣದಲ್ಲಿ ಪಟ್ಟಣ ಪಂಚಾಯಿತಿ ಮತ್ತು ವಿವಿಧ ಇಲಾಖೆಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಭಾರತ ವಿಕಸಿತ ಸಂಕಲ್ಪ ಯಾತ್ರೆ ಯಡಿ ಪ್ರಧಾನ ಮಂತ್ರಿ ಬೀದಿ ಬೀದಿ ವ್ಯಾಪಾರಿಗಳ ಆತ್ಮನಿಭ೯ರ ( ಪಿಎಂ ಸ್ವನಿಧಿ) ಸಮ್ರುದ್ದಿ ಕಾರ್ಯಕ್ರಮದಲ್ಲಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಕೇಂದ್ರ ಸರಕಾರದ ಹಲವಾರು ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ಅದನ್ನು ಸಾರ್ವಜನಿಕರು ಸದುಪಯೋಗ ಪಡೆದುಕೊಳ್ಳಬೇಕು ಎಂದು ದೇಶದಲ್ಲಿ ಈಗಾಗಲೇ 54 ಕೋಟಿ ಬಡಜನರಿಗೆ ಜನ್ ಧನ್ ಬ್ಯಾಂಕಿನಲ್ಲಿ ಉಚಿತವಾಗಿ ಖಾತೆ ತೆರೆಯಲಾಗಿದೆ ದೇಶದ ಸಣ್ಣ ಹಿಡುವಳಿ ರೈತರಿಗೆ ಕೃಷಿ ಸಮಾನ್ ಯೋಜನೆ ಮೂಲಕ ವಷ೯ಕ್ಕೆ 6 ಸಾವಿರ ರೂಪಾಯಿ ಅವರ ಖಾತೆಗೆ ವರ್ಗಾವಣೆ ಇನ್ನೂ ಮುಂದೆ ಇನ್ನೂ 2 ಸಾವಿರ ಒಟ್ಟು 8 ಸಾವಿರ ರೈತರ ಖಾತೆಗೆ ಹಾಕಲಾಗವದು ಈ ಹಿಂದೆ ಕರೋನಾ ಮಹಾಮಾರಿ ನಮ್ಮ ದೇಶದಲ್ಲಿ ಬಂದ ಸಂದರ್ಭದಲ್ಲಿ ಅವರ ದಿಟ್ಟ ನಿರ್ಧಾರ ತೆಗೆದುಕೊಂಡು ಲಸಿಕೆ ಕಂಡು ಹಿಡಿದು ದೇಶದ ಜನರಿಗೆ ಕರೋನಾ ಲಸಿಕೆ ಉಚಿತವಾಗಿ ನೀಡಿ ಜೀವ ರಕ್ಷಣೆ ಮಾಡಿ ಇಡೀ ವಿಶ್ವವೇ ನಮ್ಮ ದೇಶದ ಕಡೇ ತಿರುಗಿ ನೋಡುವಂತೆ ಮಾಡಿದರು ಮತ್ತು ದೇಶದ 14 ಮಹಿಳೆಯರಿಗೆ ಉಚಿತವಾಗಿ ಉಜ್ವಾಲ ಗ್ಯಾಸ್ ವಿತರಿಸಲಾಗಿದೆ ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ಸಾಲಸೌಲಭ್ಯ ಮತ್ತು ಹಲವಾರು ಯೋಜನೆಗಳು ಸಾರ್ವಜನಿಕರಿಗೆ ತುಂಬಾ ಅನುಕೂಲವಾಗಿದೆ ಹಾಗೂ ಹಿರಿಯ ನಾಗರಿಕರಿಗೆ ಮತ್ತು ಮಕ್ಕಳಿಗೆ ವಿಮೆ ಕಲ್ಪಿಸಲಾಗಿದೆ ಎಂದು ಹೇಳಿದರು
ನಂತರ ಮಾತನಾಡಿದ ಅಂಚೆ ಕಚೇರಿ ಇಲಾಖೆಯ ಅಧಿಕಾರಿ ದೇವಪ್ಪ ದ್ರಾಕ್ಷಿ. ಮತ್ತು ಎಸ್. ಬಿ. ಐ. ಬ್ಯಾಂಕ್ ಮ್ಯಾನೇಜರ್.ಮಂಜುನಾಥ ನಾಯ್ಕರ್ .ಮುಖಂಡ ವೀರಣ್ಣ ಹುಬ್ಬಳ್ಳಿ ಆಪ್ತ್ ಸಮಾಲೋಚಕ ಪಂಪನಗೌಡ ಪಾಟೀಲ ಅವರು ಪ್ರತಿಜ್ಞೆಾ ಭೋದನೆ ಮಾಡಿ ಮಾತನಾಡಿದ ಅವರು ಬೀದಿ ಬದಿ ವ್ಯಾಪಾರಿಗಳಿಗೆ ಸಾಲಸೌಲಭ್ಯ ಆಯ್ಯುಷ ಮಾನ್ ಭಾರತ ಆರೋಗ್ಯ ಯೋಜನೆ. ಜನ ಔಷಧ ಕೇಂದ್ರ ಸ್ಥಾಪನೆ ಸುಕನ್ಯ ಸಮ್ರುದ್ದಿ ಆಹಾರ ಭದ್ರತೆ ಯೋಜನೆ ಇನ್ನೂ ಹಲವಾರು ಯೋಜನೆ ಜಾರಿಗೊಳಿಸಿ ಬಡವರ ಹಿತ ಕಾಪಾಡಿದ್ದಾರೆ, ನಂತರ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ನಾಗೇಶ್ ಕಾರ್ಯಕ್ರಮ ಕುರಿತು ಮಾತನಾಡಿದರು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಸದಸ್ಯರಾದ ಬಸಲಿಂಗಪ್ಪ ಕೂತ್ತಲ ಕಳಕಪ್ಪ ತಳವಾರ. ವಸಂತ ಕುಮಾರ್ ಭಾವಿಮನಿ ಅಂದಯ್ಯ ಕಳ್ಳಿಮಠ. ರೇವಣಪ್ಪ ಹಿರೇಕುರಬರ.ಈರಪ್ಪ ಬಣಕಾರ ಶಿವಕುಮಾರ ಸರಗಣಾಚಾರ. ಉಮೇಶ್ ಬೇಲಿ ಯಂಕಣ್ಣ.ಮತ್ತು ಇತರರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!