ಸಿರುಗುಪ್ಪ: ಶಿವಶರಣ ಶಿವಯೋಗಿ ಸಿದ್ದರಾಮೇಶ್ವರ ಜಯಂತಿ ಪೂರ್ವಭಾವಿ ಸಭೆ
ಅರ್ಥಪೂರ್ಣ ವ್ಯವಸ್ಥಿತ ಆಚರಣೆಗೆ ನಿರ್ಧಾರ ತಹಸಿಲ್ದಾರ್ ಹೆಚ್ ವಿಶ್ವನಾಥ
ಕರುನಾಡ ಬೆಳಗು ಸುದ್ದಿ
ಸಿರುಗುಪ್ಪ, 6- ಕರ್ನಾಟಕ ಸರ್ಕಾರ ತಾಲೂಕು ಆಡಳಿತ ಸರ್ವರ ಸಹಯೋಗದಲ್ಲಿ 15 ಜನವರಿ 2024 ಸೋಮವಾರದಂದು ಶಿವಶರಣ ಶಿವಯೋಗಿ ಸಿದ್ದರಾಮೇಶ್ವರ ಜಯಂತಿ ಆಚರಿಸುವ ಹಿನ್ನೆಲೆಯಲ್ಲಿ ತಾಲೂಕ ಕಚೇರಿ ಕಾರ್ಯಾಲಯದ ಸಭಾಭವನದಲ್ಲಿ ಪೂರ್ವಭಾವಿ ಸಭೆಯನ್ನು ರಾಷ್ಟ್ರೀಯ ಹಬ್ಬಗಳ ಆಚರಣೆ ತಾಲೂಕ ಸಮಿತಿಯ ಅಧ್ಯಕ್ಷರು ತಾಸಿಲ್ದಾರ್ ಎಚ್ ವಿಶ್ವನಾಥ ಅವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು .
ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಬಿ ರಾಜೇಶ್ವರಿ ಅವರು ಸರ್ವ ಬಾಂಧವರನ್ನು ಸ್ವಾಗತಿಸಿದರು ಸಭೆಯಲ್ಲಿ ಸಿದ್ದರಾಮ ಜಯಂತಿ ಯನ್ನು ಜನವರಿ 15ರಂದು ಬೆಳಿಗ್ಗೆ ಸಿರುಗುಪ್ಪ ತಾಲೂಕಿನ ಎಲ್ಲಾ ಶಾಲಾ ಕಾಲೇಜು ಸರ್ಕಾರದ ಎಲ್ಲಾ ಕಚೇರಿಗಳಲ್ಲಿ ಸಿದ್ದರಾಮ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಪುಷ್ಪ ಅರ್ಪಿಸಿ ಪೂಜೆ ಸಲ್ಲಿಸುವುದು ಸಿರುಗುಪ್ಪ ನಗರದಲ್ಲಿ ಬೆಳಿಗ್ಗೆ ಶಿವಯೋಗಿ ಸಿದ್ದರಾಮ ಭಾವಚಿತ್ರದ ಭವ್ಯ ಮೆರವಣಿಗೆ ಮುಖ್ಯ ರಸ್ತೆಯಿಂದ ನಗರದ ನೇತಾಜಿ ವ್ಯಾಯಾಮ ಶಾಲಾ ಮೈದಾನಕ್ಕೆ ತೆರಳಿ ವೇದಿಕೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲು ತೀರ್ಮಾನಿಸಲಾಯಿತು
ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ಸ್ವಚ್ಛತೆ ಕುಡಿಯುವ ನೀರಿನ ವ್ಯವಸ್ಥೆ ಕುಳಿತುಕೊಳ್ಳಲು ಹಾಸನದ ವ್ಯವಸ್ಥೆ ಮಾಡಲು ನಗರ ಸಭೆ ಪಾರಾಯುಕ್ತ ಗಂಗಾಧರ ಗೌಡ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಯಿತು ಸರ್ವರಿಗೂ ಆಹ್ವಾನಿಸಲು ಆಹ್ವಾನ ಪತ್ರಿಕೆ ಶಿವಯೋಗಿ ಸಿದ್ದರಾಮ ಅವರ ವಿಚಾರಧಾರೆಗಳನ್ನು ಭಾಷಣ ಕಾರರಿಗೆ ಉಪನ್ಯಾಸ ನೀಡುವವರಿಗೆ ಆಹ್ವಾನಿಸುವುದು ತಾಲೂಕ ಪಂಚಾಯತ್ ಅಧಿಕಾರಿ ಸುಜಾತ ಕೋರಿ ಕ್ಷೇತ್ರ ಶಿಕ್ಷಣ ಇಲಾಖೆಯ ಸಂಯೋಜಕ ಬಸವರಾಜ ಸ್ವಾಮಿ ರಾಷ್ಟ್ರೀಯ ಸಾಕ್ಷರತಾ ಸಮಾಜ ಸುಧಾರಕ ಅಬ್ದುಲ್ ನಬಿ ಅಲ್ಪಸಂಖ್ಯಾತರ ಕ್ಷೇಮಾಭಿವೃದ್ಧಿ ಸಮಾಜದ ತಾಲೂಕ ಅಧ್ಯಕ್ಷ ಬಿಕೆ ಅಲ್ಲಾಬಕ್ಷಿ ಶಿವಯೋಗಿ ಸಿದ್ದರಾಮೇಶ್ವರ ಸಂಘದ ಅಧ್ಯಕ್ಷರು ಗಾಳೆಪ್ಪ ಉಪಾಧ್ಯಕ್ಷ ತಿಮ್ಮಯ್ಯ ಪ್ರಧಾನ ಕಾರ್ಯದರ್ಶಿ ನಟರಾಜ್ ನಗರಸಭಾ ಸದಸ್ಯರಾದ ರಾಮಕೃಷ್ಣ ದೊಡ್ಡ ಹುಲಗಪ್ಪ ಎಲ್ಲಪ್ಪ ಮತ್ತಿತರ ಗಣ್ಯರು ಉಪಸ್ಥಿತರಿದ್ದು ಸಲಹೆ ಸೂಚನೆ ನೀಡಿದರು ತಹಶೀಲ್ದಾರ್ ಎಚ್ ವಿಶ್ವನಾಥ ಅವರು ಸರ್ವರಿಗೂ ಹೊಸ ವರ್ಷ ಸಂಕ್ರಾಂತಿ ಹಬ್ಬದ ಪ್ರೀತಿಯ ಶುಭಾಶಯ ಕೋರಿ ವಂದಿಸಿದರು ತಾಲೂಕ ಕಚೇರಿಯ ಸಿಬ್ಬಂದಿ ವರ್ಗದವರು ವಿವಿಧ ಇಲಾಖೆಗಳ ಸಿಬ್ಬಂದಿ ವರ್ಗದವರು ಅಧಿಕಾರಿಗಳು ಇದ್ದರು.
