WhatsApp Image 2024-03-11 at 6.18.57 PM

ಇಟಗಿ ಆದರ್ಶ ಶಾಲೆಯ ಕಾಂಪೌಂಡ್‌ಗೆ ಅನಧಿಕೃತ ಗೆಟ್ ಅಳವಡಿಕೆಗೆ ತಾ.ಪಂ ಮಾಜಿ ಸದಸ್ಯೆ ಲಲಿತಾ ಕುರಿ ವಿರೋಧ

ಕರುನಾಡ ಬೆಳಗು ಸುದ್ದಿ

ಕಕನೂರು,11- ತಾಲೂಕಿನ ಇಟಗಿ ಗ್ರಾಮದ ಆದರ್ಶ ವಿದ್ಯಾಲಯ ಶಾಲೆಯ ಕಾಂಪೌಂಡ್‌ಗೆ ಅನಧಿಕೃತವಾಗಿ ಗೆಟ್ ಅಳವಡಿಕೆ ಕಾಮಗಾರಿಯನ್ನು ಮಾಡುತ್ತೀದ್ದು ಇದನ್ನು ಕೂಡಲೆ ಸ್ಥಗಿತಗೊಳಿಸಬೇಕೆಂದು ರೈತ ದಂಪತಿಗಳು ಕಾಮಗಾರಿ ನಡೆಯುವ ಸ್ಥಳದಲ್ಲಿ ಒತ್ತಾಯಿಸಿದರು.

ತಾ.ಪಂ ಮಾಜಿ ಸದಸ್ಯೆ ಲಲಿತಾ ಮಹಾದೇವಪ್ಪ ಕುರಿ ಮಾತನಾಡಿ, ನನ್ನ ಜಮೀನು ಪಕ್ಕದಲ್ಲಿ ಆದರ್ಶ ಶಾಲೆಗೆ ಕಾಂಪೌಂಡ್ ನಿರ್ಮಿಸುತ್ತಿರುವಾಗ ಶಾಲೆಯ ಒಳಗೆ ಸರಿಯಾಗಿ ರಸ್ತೆ ಇಲ್ಲದಿರುವಾಗ, ನನ್ನ ಜಮೀನಿನಲ್ಲಿ ಕಲ್ಲು, ಮರಳು, ಸಿಮೆಂಟ್, ನೀರು ನಮ್ಮ ಜಮೀನಿನ ಮುಖಾಂತರ ವಾಹನಗಳು ಸಂಚರಿಸಿವೆ ಶಾಲೆಯ ಅಭಿವೃದ್ಧಿಗೆ ಸಹಕಾರವನ್ನು ನೀಡಿದ್ದೇವೆ. ಕಾಂಪೌಂಡ ನಿರ್ಮಿಸುವ ಜಾಗದಲ್ಲಿ ಗುತ್ತಿಗೆದಾರರು ಅವೈಜ್ಞಾನಿಕವಾಗಿ ರಸ್ತೆ ಇಲ್ಲದೆ ಇರುವ ಜಾಗದಲ್ಲಿ ನಮ್ಮ ಜಮೀನಿಗೆ ಹೊಂದಿಕೊಂಡು ಗೆಟ್ ಅಳವಡಿಕೆ ಕಾಮಗಾರಿಯನ್ನು ಮಾಡುತ್ತೀದ್ದಾರೆ. ನನ್ನ ಜಮೀನು 2.17 ಎಕರೆ ಇದ್ದು, ಸರ್ವೆ ನಂ.468/1 ಕಮರ್ಷಿಯಲ್ ಎನ್‌ಎ ಆಗಿದೆ. ನಾವು ಶಾಲಾ ಕಾಂಪೌAಡ ನಿರ್ಮಾಣಕ್ಕೆ ಸಹಕಾರ ನೀಡಿದರು ನಮಗೆ ಅನ್ಯಾಯವನ್ನು ಗುತ್ತಿಗೆದಾರರು ಮಾಡುತ್ತೀದ್ದಾರೆ ಇದರ ಬಗ್ಗೆ ಪೋಲಿಸ್ ಇಲಾಖೆಯ ಗಮನಕ್ಕೆ ತಂದರು ಪ್ರಯೋಜನವಾಗಿಲ್ಲ. ಇದರ ಬಗ್ಗೆ ಜಿಲ್ಲಾಧಿಕಾರಿಗೆ, ಎಸ್ಪಿಗೆ, ತಾ.ಪಂ, ಜಿ.ಪಂ ಹಾಗೂ ತಹಶೀಲ್ದಾರ್, ಬಿಇಓ ಕಚೇರಿಗೆ ಮನವಿ ಸಲ್ಲಿಸುತ್ತೇನೆ. ರಸ್ತೆಯೇ ಇಲ್ಲದೆ ಜಾಗದಲ್ಲಿ ಸುಮಾರು 1.50 ಲಕ್ಷ ರೂ.ವೆಚ್ಚದಲ್ಲಿ ಗೆಟ್‌ನ್ನು ನಿರ್ಮಿಸಲಾಗುತ್ತಿದೆ.

ಸರಕಾರದ ದುಡ್ಡು ಒಂದುಕಡೆ ಪೋಲಾದರೆ, ಮತ್ತೊಂದು ಕಡೆ ನಮ್ಮ ಜಮೀನಿಗೆ ಹೊಂದಿಕೊಂಡು ಅಳವಡಿಕೆ ಮಾಡಲು ಆದೇಶವಿಲ್ಲ, ಇಂತಹ ಅವೈಜ್ಞಾನಿಕ ಕಾಮಗಾರಿಯನ್ನು ಅಧಿಕಾರಿಗಳು ತಡೆಯಬೇಕೆಂದು ಒತ್ತಾಯಿಸಿದರು. ಪತಿ ಮಹಾದೇವಪ್ಪ ಕುರಿ ಇದ್ದರು.

Leave a Reply

Your email address will not be published. Required fields are marked *

error: Content is protected !!