WhatsApp Image 2024-02-10 at 5.19.51 PM

ಪೆ.11ರಿಂದ ಉಳಿಮೇಶ್ವರ ಗ್ರಾಮದ ಶ್ರೀ ಸತ್ಯಮ್ಮದೇವಿಯ ನೂತನ ದೇವಸ್ಥಾನದ ಉದ್ಘಾಟನಾ ಸಮಾರಂಭ 

ಕರುನಾಡ ಬೆಳಗು ಸುದ್ದಿ

ಕೊಪ್ಪಳ,10- ರಾಯಚೂರು ಜಿಲ್ಲೆಯ ಲಿಂಗಸ್ಗೂರು ತಾಲೂಕಿನ ಉಳಿಮೇಶ್ವರ ಗ್ರಾಮದ ಶ್ರೀ ಸತ್ಯಮ್ಮದೇವಿಯ ನೂತನ ದೇವಸ್ಥಾನದ ಉದ್ಘಾಟನಾ ಸಮಾರಂಭ ಕಾರ್ಯಕ್ರಮವು ಫೆ.11ರಿಂದ ಮೂರು ದಿನಗಳು ಕಾರ್ಯಕ್ರಮ ನಡೆಯಲಾಗುತ್ತದೆ ಎಂದು ಕಲ್ಯಾಣ ಕರ್ನಾಟಕ ಮಾಧ್ಯಮ ಪ್ರತಿನಿಧಿ ರಾಮ ಪೂಜಾರ ಪತ್ರಿಕೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಕಾರ್ಯಕ್ರಮದಲ್ಲಿ 20ಕ್ಕೂ ಅಧಿಕ ಯಾಗ ಪಂಡಿತರು ಭಾಗವಹಿಸಲಿದ್ದಾರೆ.

ಕೊಪ್ಪಳ ಶ್ರೀ ಗವಿಸಿದ್ದೇಶ್ವರ ಮಠಕ್ಕೆ ಭೇಟಿ ನೀಡಿದ ಜೆಡಿಎಸ್ ಮುಖಂಡ ಹಾಗು ಭೋವಿ ಸಮಾಜದ ಗೌರವ ಅಧ್ಯಕ್ಷ ಸಿದ್ದು ವೈ ಬಂಡಿ ಶ್ರೀ ಗಳಿಗೆ ಆಮಂತ್ರಣ ಪತ್ರಿಕೆಯನ್ನು ನೀಡಿದರು.

ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಕೊಪ್ಪಳದ ಸಂಸ್ಥಾನ ಮಠ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳು ವಹಿಸಿಕೊಳ್ಳಲಿದ್ದಾರೆ, ಉದ್ಘಾಟಕರಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಆಗಮಿಸುತ್ತಾರೆ.

ಜ್ಯೋತಿ ಬೆಳಗಿಸಲು ಮಾಜಿ ಶಾಸಕರು ಲಿಂಗಸ್ಗೂರು ಡಿ.ಎಸ್. ಹೊಲಗೇರಿ, ಮುಖ್ಯ ಅತಿಥಿಗಳಾಗಿ ಶಾಸಕ ಮಾನಪ್ಪ ಡಿ ವಜ್ಜಲ, ಶರಣೆಗೌಡ ಪಾಟೀಲ್ ಬಯ್ಯಾಪುರ, ತಹಸಿಲ್ದಾರ್ ಬಾಲರಾಮ ಕಟ್ಟಿಮನಿ ಸೇರಿದಂತೆ ನಾಡಿನ ಸಂತರು ಸ್ವಾಮೀಜಿಗಳು. ಭಾಗವಹಿಸಲಿದ್ದಾರೆ

ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ, ಸಂಸದ ಸಂಗಣ್ಣ ಕರಡಿ, ಹೇಮಲತಾ ನಾಯಕ್,ಸಿ ವಿ ಚಂದ್ರಶೇಖರ್, ಭಾಗವಹಿಸಲಿದ್ದಾರೆ ಎಂದು ಮಾಹಿತಿಯನ್ನು ನೀಡಿದ್ದಾರೆ

Leave a Reply

Your email address will not be published. Required fields are marked *

error: Content is protected !!