1

ನಿರ್ಯಾತ್ ಬಂಧು ಯೋಜನೆಯ ಮೂಲಕ ಕರಕುಶಲ ತರಬೇತಿ
ಕರಕುಶಲ ವಸ್ತುಗಳಿಗೆ ಜಾಗತಿಕ ಮಟ್ಟದಲ್ಲಿ ಉತ್ತಮ ಬೇಡಿಕೆ : P L ಶ್ರೀದೇವಿ

ಕರುನಾಡ ಬೆಳಗು ಸುದ್ದಿ

ಕೊಪ್ಪಳ,24- ಕೇಂದ್ರ ಸರ್ಕಾರದ ನಿರ್ಯಾತ್ ಬಂಧು ಯೋಜನೆಯ ಮೂಲಕ ಕರಕುಶಲ ವಸ್ತುಗಳ ಜಾಗತಿಕ ವ್ಯಾಪಾರ ಮತ್ತು ರಫ್ತು ಹೇಗೆ ಉತ್ತಮ ಪಡಿಸಬಹುದು ಇದರ ಸದುಪಯೋಗ ಪಡಿಸಿಕೊಂಡು ಉಧ್ಯಮ ಶೀಲರಾಗಿ ಎಂದು ಎಂದು EPCH ದಕ್ಷಿಣ ಪ್ರಾದೇಶಿಕ ಮುಖ್ಯಸ್ಥೆ ಶ್ರೀಮತಿ ಪಿ ಎಲ್ ಶ್ರೀದೇವಿ ಹೇಳಿದರು.
ಅವರು ಇತ್ತೀಚಿಗೆ Export Promotion Council For Handicrafts ನ ದಕ್ಷಿಣ ಪ್ರಾದೇಶಿಕ ಕಛೇರಿಯು, ಡೈರೆಕ್ಟರೇಟ್ ಜನರಲ್ ಆಫ್ ಫಾರಿನ್ ಟ್ರೇಡ್, ಬೆಂಗಳೂರು ಇದರ ಸಹಯೋಗದೊಂದಿಗೆ ಕರ್ನಾಟಕದ ಕೊಪ್ಪಳದ ಖಾಸಗಿ ಹೋಟೆಲ್ನಲ್ಲಿ ನಿರ್ಯಾತ್ ಬಂಧು ಯೋಜನೆಯಡಿಯಲ್ಲಿ, ಇ-ಕಾಮರ್ಸ್ ವೇದಿಕೆಯಲ್ಲಿ out reach ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಕಿನ್ನಾಳ ಕರಕುಶಲಕ್ಕೆ ದೇಶ ವಿಶೇಶಗಳಲ್ಲಿ ಉತ್ತಮ ಬೇಡಿಕೆ ಇದ್ದು ಈ ಯೋಜನೆ ಮೂಲಕ ವಿಶೇಷ ತರಬೇತಿದಾರರಿಂದ ತರಬೇತಿ ಪಡೆದ ಸಯಂ ಉಧ್ಯೋಗ ಪಡೆದು ಉಧ್ಯಮಿಗಳಾಗಿ ಬೆಳೆಯಿರಿ ಎಂದು ಭರವಸೆ ನೀಡಿದರು.
ಡಿಜಿಎಫ್ ಟಿ ಸಹಾಯಕ ವ್ಯವಸ್ಥಾಪಕ ಕೆ, ಆದರ್ಶ ಮಾತನಾಡಿ ರಫ್ತು ಸಮಯದಲ್ಲಿ ಅದರ ಪ್ರಾಮುಖ್ಯತೆಯ ಮಾಹಿತಿಯನ್ನು ಹಂಚಿಕೊಂಡರು ಮತ್ತು DGFT ಯ ಯೋಜನೆಗಳು ಮತ್ತು ಪ್ರಯೋಜನಗಳ ಬಗ್ಗೆ ವಿವರಿಸಿದರು. ಕೆ.ಎಲ್.ರಮೇಶ್ ಪರಿಷತ್ತಿನ ಚಟುವಟಿಕೆಗಳ ಕುರಿತು ಮಾಹಿತಿ ನೀಡಿದರು.
ಕಾಯಕ್ರಮದಲ್ಲಿ ಭಾಷಣಕಾರರಾದ ದಿನೇಶ್ ಜಾನಕಿರಾಮನ್ ಮಾತನಾಡಿ ರಫ್ತುದಾರರಿಗೆ ಪ್ರಸ್ತುತ ಮಾರುಕಟ್ಟೆಯಲ್ಲಿ ಅಮೆಜಾನ್ ಒದಗಿಸುತ್ತಿರುವ ಇ-ಕಾಮರ್ಸ್ ಪ್ಲಾಟ್ಫಾರ್ಮ್ ಕುರಿತು ಮಾಹಿತಿ ನೀಡಿದರು.
ಇ-ಕಾಮರ್ಸ್ ವಿಷಯದ ಪರಿಣಿತರಾದ ಅಜಯ್ ಶಿವನಾಳ್ ಮಾತನಾಡಿ ಇ-ಕಾಮರ್ಸ್ನಲ್ಲಿ ಪ್ರಸ್ತುತ ಮಾರುಕಟ್ಟೆ ಸನ್ನಿವೇಶದ ಬಗ್ಗೆ ಮಾಹಿತಿಯನ್ನು ಹಂಚಿಕೊಂಡರು ಮತ್ತು ಭಾಗವಹಿಸುವವರಿಗೆ ಬಹಳ ಮೌಲ್ಯಯುತವಾದ ಅದರ ಪ್ರಮುಖ ಅನುಕೂಲಗಳನ್ನು ತಿಳಿಸಿದರು.
ಈ ಸಭೆಯಲ್ಲಿ ಕೊಪ್ಪಳದ ಹಾಗೂ ಸುತ್ತ ಮುತ್ತಲಿನ ಕರಕುಶಲ ಕರ್ಮಿಗಳು ಭಾಗವಹಿಸಿದ್ದರು ಹಾಗೂ ಭಾಷಣಕಾರರ ಭಾಷಣದಿಂದ ಉತ್ತೇಜಿತರಾದರು.

ಈ ಕಾರ್ಯಕ್ರಮದಲ್ಲಿ. ಇಪಿಸಿಎಚ್ ದಕ್ಷಿಣ ಪ್ರಾಂತೀಯ ಸಂಚಾಲಕ ಕೆ.ಎಲ್.ರಮೇಶ್, ಸಹಾಯಕ DGFT ಡಿಜಿಎಫ್ಟಿ ಕೆ. ಆದರ್ಶ್ , ಅಮೆಜಾನ್ ಗ್ಲೋಬಲ್ ಸೆಲ್ಲಿಂಗ್ ವ್ಯಾಪಾರ ಅಭಿವೃದ್ಧಿ ವ್ಯವಸ್ಥಾಪಕ ದಿನೇಶ್ ಜಾನಕಿರಾಮನ್ – ಮತ್ತು ಡಿಹೆಚ್ಎಲ್ ಇಂಡಸ್ಟ್ರಿ ಎಕ್ಸ್ಪರ್ಟ್ ಇ-ಕಾಮರ್ಸ್ ಅಜಯ್ ಶಿವನಾಳ್ ಇತರರು ಇದ್ದರು.

Leave a Reply

Your email address will not be published. Required fields are marked *

error: Content is protected !!