3

ರಾಜ್ಯ ಸರಕಾರದಿಂದ ಅಭಿವೃದ್ದಿ ಶೂನ್ಯ : ಜೋಶಿ
ಅಮರನಾಥ ಪಾಟಿಲ ಗೆಲ್ಲಿಸಲೂ ಕರೆ

ಕರುನಾಡ ಬೆಳಗು ಸುದ್ದಿ

ಗಂಗಾವತಿ, ಮೇ೨೪_ಪ್ರಧಾನಮಂತ್ರಿ ನರೆಂದ್ರ ಮೋದಿ ನೇತೃತ್ವದ ಲ್ಲಿ ೧೦ ವರ್ಷದ ಅವಧಿ ಸಾಕಷ್ಟು ಅಭಿವೃದ್ಧಿ ಮಾಡಿದ್ದವೆ,ಆದರೆ ರಾಜ್ಯ ಸರಕಾರವೂ ಗ್ಯಾರಂಟಿಗಳ ಭರಾಟೆಯಲ್ಲಿ ರಾಜ್ಯದ ಅಭಿವೃದ್ಧಿ ಶೂನ್ಯವಾಗಿದೆ ಎಂದು ಕೆಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.

ಅವರು ನಗರದ ಸಿಬಿಎಸ್ ಕಲ್ಯಾಣ ಮಂಟಪದಲ್ಲಿ ಪದವಿಧರ ಮತದಾರರನ್ನು ಉದ್ದೇಶಿಸಿ ಮಾತನಾಡಿ ಕಾಂಗ್ರೆಸ್ ಸರಕಾರ ೬೦ ವರ್ಷಗಳ ಅವಧಿಯಲ್ಲಿ ಏನು ಮಾಡಿದೆ ಎಂಬುದೆ ಎಲ್ಲರಿಗೂ ತಿಳಿದಿದೆ.
ಕಾಂಗ್ರೆಸ್ ನ ರಾಹುಲಗಾಂಧಿ ಗೆಲ್ಲಿಸಲು ಎಲ್ಲರೂ ಪ್ರಯತ್ನದಲ್ಲಿ ಇದ್ದಾರೆ ಎಂತಹ ವಿರ್ಪಯಾಸವಾಗಿದೆ.ಮಾಜಿ ಪ್ರಧಾನಿ ದಿ/ಅಟಲಬಿಹಾರಿ ವಾಜಪೇಯಿ, ಪ್ರಧಾನ ಮಂತ್ರಿ ನರೆಂದ್ರ ಮೋದಿ ಯವರ ಆಡಳಿತಕ್ಕೆ ಜನರ ಮನ್ನಣೆ ನಿಡಿದ್ದಾರೆ.
ಅಮರ ಪಾಟೀಲ ರನ್ನು ಗೆಲ್ಲಿಸಿ ಚಿಂತಕರ ಚಾವಡಿಗೆ ಮಹತ್ವ ನೀಡಿ ಎಂದರು.
ಶಾಸಕ ಗಾಲಿ ಜನಾರ್ಧನರೆಡ್ಡಿ ಮಾತನಾಡಿ ಅಮರಪಾಟಿಲರ ಗೆಲುವು ಖಚಿತವಾಗಿದೆ.ಪಧವುಧರರು ಈಗಾಗಲೇ ಪಾಟಿಲರ ಗೆಲುವಿಗೆ ಸಿದ್ದರಾಗಿದ್ದಾರೆ ಎಂದರು.

ಬಿಜೆಪಿ ಜಿಲ್ಲಾ ಅದ್ಯಕ್ಷ ನವಿನ ಗುಳಗಣ್ಣವರ,ಮಾಜಿ ಸಚಿವ ಹಾಲಪ್ಪ ಆಚಾರ,ಮಾಜಿ ಶಾಸಕ ಪರಣ್ಣ ಮುನವಳ್ಳಿ,ಬಸವರಾಜ ಧಡೆಸೂಗೂರ,ಎಂಎಲ್.ಸಿ ಆಕಾಂಕ್ಷಿತ ಶ್ರೀ ಧರ ಕೆಸರಹಟ್ಟಿ ಮಾತನಾಡಿದರು.
ಈಸಂದರ್ಭದಲ್ಲಿ ವಿಧಾನ ಪರಿಷತ ಸದಸ್ಯ ,ಹಾಗೂ ಕೋಪ್ಪಳ ಜಿಲ್ಲಾ ಉಸ್ತುವಾರಿ ಎನ್ ರವಿಕುಮಾರ,ವಿಧಾನಪರಿಷತ ಸದಸ್ಯೆ ಹೇಮಲತಾ ನಾಯಕ,ಮಾಜಿ ಶಾಸಕ ಜಿ ವಿರಪ್ಪ, ವಿರುಪಾಕ್ಷಪ್ಪ ಸಿಂಘನಾಳ,ನೆಜ್ಕಂಟಿ ಸೂರಿಬಾಬು,ಬಿಜೆಪಿ ಗ್ರಾಮಿಣ ಅಧ್ಯಕ್ಷ ಚನ್ನಪ್ಪ ಮಳಗಿ,ನಗರ ಅಧ್ಯಕ್ಷ ಕಾಶಿನಾಥ ಚಿತ್ರ ಗಾರ ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!