WhatsApp Image 2024-05-19 at 2.55.26 PM

ಕೃಷಿ ಉತ್ಪನ್ನ ಮಾರುಕಟ್ಟೆ ಸಮಸ್ಯೆ ರೈತರಿಂದ ಪ್ರತಿಭಟನೆ

ಕರುನಾಡ ಬೆಳಗು ಸುದ್ದಿ

ಸಿರುಗುಪ್ಪ, 19- ಕೃಷಿ ಉತ್ಪನ್ನ ಮಾರುಕಟ್ಟೆ ಸಮಸ್ಯೆ ಸಿರುಗುಪ್ಪ ಬಳ್ಳಾರಿ ರಾಷ್ಟ್ರೀಯ ಹೆದ್ದಾರಿ 150 ಎ ರಸ್ತೆ ಮೇಲೆ ಟ್ರ್ಯಾಕ್ಟರ್ಸ್ತೆ ನಿಲ್ಲಿಸಿ ರೈತರಿಂದ ಪ್ರತಿಭಟನೆ ರೈತರು ಎಪಿಎಂಸಿ ಮುಂದೆ ಇರುವ ಹೆದ್ದಾರಿ ರಸ್ತೆಯಲ್ಲಿ ತಮ್ಮ ಜೋಳ ತುಂಬಿದ ಟ್ಯಾಕ್ಟರ್ ಗಳನ್ನು ನಿಲ್ಲಿಸುವ ಮೂಲಕ ಪ್ರತಿಭಟನೆ ನಡೆಸಿದರು ಕರೂರು ಅರಳಿಗ ನೂರು ಹಾವಿನಾಳು ಸಿರಿಗೇರಿ ಬೈರಾಪುರ ಚಾಣಕನೂರು ಹೊಸಳ್ಳಿ ಗ್ರಾಮಗಳಿಂದ ಆಗಮಿಸಿದ ರೈತರು ಅಧಿಕಾರಿಗಳು ಮತ್ತು ವ್ಯವಸ್ಥೆಯ ವಿರುದ್ಧ ಅಕ್ರೋಶ ವ್ಯಕ್ತಪಡಿಸಿದರು ವಾಹನಗಳಲ್ಲಿ ಜೋಳ ತುಂಬಿಕೊಂಡು ತಂದಿದ್ದೇವೆ ಅನೇಕ ಗಿಡಗಳಿಂದ ಸರತಿ ಸಾಲು ಮಾಡಿಕೊಂಡು ಕಾಯುತ್ತಿದ್ದೇವೆ ವಾಹನಗಳ ಟೈಯರ್ ಗಳು ಹಾನಿಗೊಳಗಾಗುತ್ತವೆ ಎಂದು ಜಾಕ್ ಏರಿಸಿ ಕಲ್ಲು ಜೋಡಿಸಿ ನಿಲ್ಲಿಸಿ ಕೊಂಡಿದ್ದೇವೆ ಎಪಿಎಂಸಿ ಯಲ್ಲಿ ಸ್ಥಳಾವಕಾಶ ಸಮಸ್ಯೆಯಿಂದ ಈಗ ಹಚ್ಚೋಳ್ಳಿಗೆ ತೆಗೆದುಕೊಂಡು ಹೋಗುವಂತೆ ಅಧಿಕಾರಿಗಳು ಮತ್ತು ತಹಸೀಲ್ದಾರರು ಸಹ ಹೇಳುತ್ತಿದ್ದಾರೆ ನಾವು ಬಡ ರೈತರು ಅಲ್ಲಿಯವರೆಗೆ ವಾಹನಗಳನ್ನು ತೆಗೆದುಕೊಂಡು ಹೋಗಲು ಆಗುವುದಿಲ್ಲ ಅಧಿಕಾರಿಗಳು ಮತ್ತು ಆಡಳಿತ ಅಧಿಕಾರಿಗಳು ಅವರೇ ವ್ಯವಸ್ಥೆ ಮಾಡಿಕೊಂಡು ಜೋಳ ಖರೀದಿಸಿ ತೆಗೆದುಕೊಂಡು ಹೋಗಬೇಕು ಎಂದು ರೈತರು ಒತ್ತಾಯಿಸಿದರು.

Leave a Reply

Your email address will not be published. Required fields are marked *

error: Content is protected !!