IMG_20231106_121853

ರೈತರಿಗಾಗಿ ಸಂಸದ ಸಂಗಣ್ಣ ಕರಡಿ ಉಪವಾಸ ಸತ್ಯಾಗ್ರಹ

ಕರುನಾಡ ಬೆಳಗು ಸುದ್ದಿ

ಕೊಪ್ಪಳ, 06- ರಾಜ್ಯ ಸರಕಾರದ ಕಾರ್ಯವೈಖರಿ ವಿರೋಧಿಸಿ ಉಪವಾಸ ಸತ್ಯಾಗ್ರಹ ಆರಂಭಿಸಿದ ಕೊಪ್ಪಳ ಸಂಸದ ಸಂಗಣ್ಣ ಕರಡಿ

ಕೊಪ್ಪಳ ಜಿಲ್ಲಾಡಳಿತ ಭವನದ ಮುಂದೆ ಉಪವಾಸ ಸತ್ಯಾಗ್ರಹ ಆರಂಭಸಿದ್ದಾರೆ.

ಎಂಎಲ್ಸಿ ಹೇಮಲತಾ ಸೇರಿದಂತೆ ಬಿಜೆಪಿ ಮುಖಂಡರು , ಕಾರ್ಯಕರ್ತರ ಸಾಥ್ ನೀಡಿದ್ದಾರೆ.  ರೈತರ ಕೃಷಿ ಪಂಪ್ ಸೆಟ್ ಗಳಿಗೆ ಪರಿವರ್ತಕ ಸಹಿತ ಉಚಿತ ಮೂಲಭೂತ ಸೌಕರ್ಯ ಒದಗಿಸುವ ಯೋಜನೆ ರದ್ದುಪಡಿಸುವ ಆದೇಶ ಹಿಂಪಡೆಯಬೇಕು.

ರೈತರ ಪಂಪ್ ಸೆಟ್ ಗಳಿಗೆ ಸಮರ್ಪಕ ವಿದ್ಯುತ್ ಪೂರೈಕೆ ಸೇರಿದಂತೆ ವಿವಿಧ ಬೇಡಿಕೆ ಮುಂದಿಟ್ಟುಕೊಂಡು ಉಪವಾಸ ಸತ್ಯಾಗ್ರಹ

ರಾಜ್ಯ ಸರಕಾರದ ವಿರುದ್ಧ ಧಿಕ್ಕಾರ ಹಾಕುತ್ತಿರುವ ಪ್ರತಿಭಟನಾಕಾರರು. ರಾಜ್ಯ ಸರ್ಕಾರ ನೂತನ ಆದೇಶ ನೀಡುವ ವರೆಗು ಸತ್ಯಾಗ್ರಹ ನಿರಂತರ ಎಂದು‌ ಸಂಸದರು ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!