ಕೊಪ್ಪಳ ಜಿಲ್ಲಾಸ್ಪತ್ರೆಗೆ ಸಂಬAಧಿಸಿದ ವರದಿ ಕುರಿತು ಸ್ಪಷ್ಟೀಕರಣ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 24- ಇತ್ತೀಚೆಗೆ ದಿನಪತ್ರಿಕೆಯೊಂದರಲ್ಲಿ ಕೊಪ್ಪಳ ಜಿಲ್ಲಾಸ್ಪತ್ರೆ ಈಗ ಸಾವಿನ ಮನೆ ಎಂಬ ಶೀರ್ಷಿಕೆ ಅಡಿ ಪ್ರಕಟವಾದ ವರದಿಗೆ ಸಂಬAಧಿಸಿದAತೆ ಕಿಮ್ಸ್ ವೈದ್ಯಕೀಯ ಅಧೀಕ್ಷಕರು ಹಾಗೂ ನಿರ್ದೇಶಕರು ಜಂಟಿಯಾಗಿ ಸ್ಪಷ್ಟೀಕರಣ ನೀಡಿದ್ದಾರೆ.
ಜಿಲ್ಲಾ ಬೋಧಕ ಆಸ್ಪತ್ರೆ ಕೊಪ್ಪಳದಲ್ಲಿ ಇಂಟೆನ್ಸಿವ್ ಕೇರ್ನಲ್ಲಿ 47 ಬೆಡ್ಗಳು ಹಾಗೂ ಎಂಸಿಎಚ್ ಆಸ್ಪತ್ರೆ ಕೊಪ್ಪಳದಲ್ಲಿ ಇಂಟೆನ್ಸಿವ್ ಕೇರ್ನಲ್ಲಿ 24 ಬೆಡ್ಗಳು ಲಭ್ಯವಿರುತ್ತವೆ. ಹಾಗೂ ಜಿಲ್ಲಾ ಆಸ್ಪತ್ರ್ರೆಯಲ್ಲಿ ವೈದ್ಯಕೀಯ ಉಪಕರಣಗಳು ಲಭ್ಯವಿದ್ದು ಹಾಗೂ ನುರಿತ ತಜ್ಞ ವೈದ್ಯರು ಇದ್ದು ರೋಗಿಗಳಿಗೆ ಕಾಲಕಾಲಕ್ಕೆ ವೈದ್ಯಕೀಯ ಸೇವೆಗಳನ್ನು ನೀಡುತ್ತಿದ್ದಾರೆ.
ಮೇ-2024 ತಿಂಗಳಿನಲ್ಲಿ ಒಟ್ಟು 65 ರೋಗಿಗಳು ಮರಣ ಹೊಂದಿದ್ದು, ಇದರಲ್ಲಿ ಶೇ.40 ರಷ್ಟು ರೋಗಿಗಳು 24 ಗಂಟೆಯಲ್ಲಿ ಹಾಗೂ ಶೇ.40 ರಷ್ಟು ರೋಗಿಗಳು ಸೇರಿದಂತೆ ಒಟ್ಟಾರೆ ಶೇ.80 ರಷ್ಟು ರೋಗಿಗಳಿಗೆ ಚಿಕಿತ್ಸೆ ನೀಡಿದರೂ ಸಹ ಚಿಕಿತ್ಸೆ ಫಲಿಸದೇ ಮರಣ ಹೊಂದಿರುತ್ತಾರೆ. ಹಾಗೂ ರೋಗಿಗಳನ್ನು ಕೊನೆಯ ಗಳಿಗೆಯಲ್ಲಿ ಪಕ್ಕದ ಜಿಲ್ಲೆ/ತಾಲೂಕುಗಳಿಂದ ಹಾಗೂ ಬೇರೆ ಆಸ್ಪತ್ರೆಗಳಿಂದ ಶಿಫಾರಸ್ಸು ಆಗಿ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡುತ್ತಿರುವುದರಿಂದ ರೋಗಿಗಳಿಗೆ ವೈದ್ಯಕೀಯ ಚಿಕಿತ್ಸೆ ನೀಡಿದರೂ ಸಹ ಚಿಕಿತ್ಸೆ ಫಲಿಸದೇ ಮರಣ ಹೊಂದಲು ಕಾರಣವಾಗಿರುತ್ತದೆ.
ಅಪಘಾತ ಪ್ರಕರಣಗಳಲ್ಲಿ ಸಹ ಕೆಲ ರೋಗಿಗಳು ಚಿಕಿತ್ಸೆಗೆ ಸ್ಪಂದಿಸದೇ ಇರುವುದರಿಂದ ಮರಣ ಹೊಂದಲು ಕಾರಣವಾಗಿರುತ್ತದೆ ಎಂದು ಕಿಮ್ಸ್ ವೈದ್ಯಕೀಯ ಅಧೀಕಕ್ಷರು ಹಾಗೂ ನಿರ್ದೇಶಕರು ಜಂಟಿ ಪ್ರಕಟಣೆಯಲ್ಲಿ ಸ್ಪಷ್ಟೀಕರಣ ನೀಡಿದ್ದಾರೆ.
