2c136fae-be38-4577-97e1-318669006cc9

ಕೊಪ್ಪಳ ನಗರಸಭೆ : ಜುಲೈಯೊಳಗೆ ರಿಯಾಯಿತಿಯಲ್ಲಿ ಆಸ್ತಿ ಕರ ಪಾವತಿಸಿ

ಕರುನಾಡ ಬೆಳಗು ಸುದ್ದಿ

ಕೊಪ್ಪಳ, 11- ಕೊಪ್ಪಳ ನಗರಸಭೆ ವ್ಯಾಪ್ತಿಯಲ್ಲಿರುವ ಆಸ್ತಿ ಮಾಲಿಕರು ಜುಲೈಯೊಳಗೆ ಆಸ್ತಿ ಕರ ಪಾವತಿ ಮಾಡಿ ಶೇ.5ರಷ್ಟು ರಿಯಾಯಿತಿ ಪಡೆದುಕೊಳ್ಳುವಂತೆ ಪೌರಾಯುಕ್ತರು ತಿಳಿಸಿದ್ದಾರೆ.

ಸನ್ 2024-2025ನೇ ಸಾಲಿನ ಆಸ್ತಿ ತೆರಿಗೆಯನ್ನು ಜುಲೈ-2024 ವರೆಗೆ ಆಸ್ತಿ ಕರ ಪಾವತಿ ಮಾಡಿದಲ್ಲಿ ಶೇ.5ರಷ್ಟು ರಿಯಾಯಿತಿಯನ್ನು ಮುಂದುವರಿಸಲಾಗಿದೆ. ಆಗಸ್ಟ್-2024 ತಿಂಗಳಿನಿಂದ ಪ್ರತಿ ತಿಂಗಳಿಗೆ ಶೇ.2ರಷ್ಟು ದಂಡದೊಂದಿಗೆ ಆಸ್ತಿಕರ ಪಾವತಿಸಬೇಕಾಗಿರುತ್ತದೆ. ನಗರದ ಸಾರ್ವಜನಿಕರು ತಮ್ಮ ತಮ್ಮ ನಿವೇಶನಗಳು ಹಾಗೂ ಕಟ್ಟಡಗಳ ಆಸ್ತಿಕರವನ್ನು ಜುಲೈ ತಿಂಗಳೊಳಗಾಗಿ ಪಾವತಿ ಮಾಡಿ ಶೇ.5ರ ರಿಯಾಯಿತಿಯ ಸದುಪಯೋಗವನ್ನು ಪಡೆದುಕೊಳ್ಳಬೇಕು ಹಾಗೂ ನೀರಿನ ತೆರಿಗೆ ಕಡ್ಡಾಯವಾಗಿ ಪಾವತಿಸಬೇಕು.

ನಗರದಲ್ಲಿರುವ ವಿವಿಧ ಉದ್ದಿಮೆಗಳನ್ನು ನಡೆಸುತ್ತಿರುವ ಉದ್ದಿಮೆದಾರರು ಕಡ್ಡಾಯವಾಗಿ ಉದ್ದಿಮೆ ಪರವಾನಿಗೆಯನ್ನು ಪಡೆದುಕೊಳ್ಳಬೇಕು ಹಾಗೂ ನವೀಕರಣ ಮಾಡಿಕೊಳ್ಳಲು ಸಹ ಈ ಮೂಲಕ ತಿಳಿಸಲಾಗಿದೆ. ಖಾಲಿ ನಿವೇಶನಗಳ ಮಾಲಿಕರುಗಳು ತಮ್ಮ ನಿವೇಶನಗಳಲ್ಲಿ ತ್ಯಾಜ್ಯವಸ್ತು ಮತ್ತು ಕಸವು ಸಂಗ್ರಹವಾಗದಂತೆ ಸ್ವಚ್ಛವಾಗಿಟ್ಟುಕೊಳ್ಳುವಂತೆ ಕೊಪ್ಪಳ ನಗರಸಭೆಯ ಪ್ರಕಟಣೆ ತಿಳಿಸಿದೆ.

Leave a Reply

Your email address will not be published. Required fields are marked *

error: Content is protected !!