ಗೆದ್ದು ಸಂಭ್ರಮಿಸುವುದಕ್ಕಿಂತ ಕೆಲಸ ಮಾಡುವ ಉದ್ದೇಶ ಇಟ್ಟುಕೊಂಡಿದ್ದೇನೆ : ಹೆಚ್.ಆರ್.ಗವಿಯಪ್ಪ
ಕರುನಾಡ ಬೆಳಗು ಸುದ್ದಿ
ವಿಜಯನಗರ, 6-ನಾಗೇನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಹಮ್ಮಿಕೊಂಡಿದ್ದ ಶಾಸಕರ ಜನ ಸಂಪರ್ಕ ಸಭೆ ಉದ್ಘಾಟಿಸಿ ಮಾತನಾಡಿದ ಶಾಸಕ ಹೆಚ್. ಆರ್. ಗವಿಯಪ್ಪ ನವರು ನಾನು ಗೆದ್ದಮೇಲೆ ಬರಬೇಕಾಗಿತ್ತು, ಈ ಕಾರ್ಯಕ್ರಮವನ್ನು ಆರು ತಿಂಗಳ ಮುಂಚೆನೇ ಮಾಡಬೇಕಾಗಿತ್ತು. ಗೆದ್ದು ಸಂಭ್ರಮ ಮಾಡುವುದಕ್ಕಿಂತ ಕೆಲಸ ಮಾಡುವ ಉದ್ದೇಶ ಇಟ್ಟುಕೊಂಡಿದ್ದೇನೆ. ಹಾಗಾಗಿ ಎಲ್ಲಾ ಅಧಿಕಾರಿಗಳನ್ನು ಕರೆದುಕೊಂಡು ಗ್ರಾಮ, ಗ್ರಾಮ ಗಳಿಗೆ ಭೇಟಿ ನೀಡಿ ಪ್ರತಿ ಮನೆ-ಮನೆ ಬಾಗಿಲಿಗೂ ಭೇಟಿ ನೀಡಿ ನಿಮ್ಮ ಸಮಸ್ಯೆಗಳನ್ನು ಆಲಿಸಿ, ಸಭೆಯಲ್ಲಿ ಅರ್ಜಿ ತೆಗೆದುಕೊಳ್ಳೋಣ ಎಂದು ಅಂದುಕೊಂಡಿದ್ದೆ ಆದರೆ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಅಲ್ಲಾಭಕ್ಷಿ ಮತ್ತು ಊರಿನ ಮುಖಂಡರು ಸಮಸ್ಯೆಗಳಿಗೆ ವೇದಿಕೆ ಮೇಲೆ ಅಧಿಕಾರಿಗಳ ಮುಂದೆ ಎಲ್ಲವನ್ನು ಇತ್ಯರ್ಥಪಡಿಸಿ ಎಂದು ಕೇಳಿದ್ದರಿಂದ ಎಲ್ಲವನ್ನು ಸರಿಪಡಿಸುವ ಸಿದ್ಧತೆಯನ್ನು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಈ ವೇದಿಕೆ ಮೇಲೆ ಏರ್ಪಡು ಮಾಡಲಾಗಿದೆ ಏನೇ ಸಮಸ್ಯೆಗಳಿದ್ದರೂ ಅಧಿಕಾರಿಗಳಿಗೆ ಅರ್ಜಿ ಕೊಟ್ಟು ಸಮಸ್ಯೆಗಳನ್ನು ತಿಳಿಸಿ. ಊರಿನ ಅಭಿವೃದ್ಧಿಗಾಗಿ ಏನೇ ಸಮಸ್ಯೆಗಳಿದ್ದರೂ ಹೇಳಿ ಅಧಿಕಾರಿಗಳೊಂದಿಗೆ ಚರ್ಚಿಸಿ ಯೋಜನೆ ರೂಪಿಸಿ ಕಾರ್ಯರೂಪಕ್ಕೆ ತರಲಾಗುವುದು ಎಂದರು.
ಕಾರ್ಯಕ್ರಮ ಉದ್ಘಾಟನೆಗೂ ಮುಂಚೆ ಗ್ರಾಮದಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಹೊಸದಾಗಿ ಯೋಜನೆ ರೂಪಿಸಿರುವ ಎಲ್ ಕೆ ಜಿ ಮತ್ತು ಯುಕೆಜಿ ಶಾಲಾ ತರಗತಿಗಳನ್ನು ಮಕ್ಕಳೊಂದಿಗೆ ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟಿಸಲಾಯಿತು. ಈ ಸಂದರ್ಭದಲ್ಲಿ ಮಕ್ಕಳೊಂದಿಗೆ ಸಿಹಿಯನ್ನು ತಿಂದು ಸಂಭ್ರಮಿಸಿದರು.ನಂತರ ಶಾಸಕರ ಜನ ಸಂಪರ್ಕ ಸಭೆ ಉದ್ಘಾಟಿಸಿದರು ಜನಸಂಪರ್ಕ ಕಾರ್ಯಕ್ರಮದಲ್ಲಿ ಸುತ್ತಮುತ್ತಲಿನ ಗ್ರಾಮದವರು ಸೇರಿ ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ಶಾಲಾ ಅಡುಗೆ ಕೋಣೆ ಉದ್ಘಾಟನೆ : ಬೆನಕಾಪುರ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಅಂದಾಜು 15.70 ರೂ ಗಳ ಲಕ್ಷ ವೆಚ್ಚದಲ್ಲಿ ನಿರ್ಮಿಸಿದ ಅಡುಗೆ ಕೋಣೆ ಮತ್ತು ಡೈನಿಂಗ್ ಹಾಲ್ ಮತ್ತು 3 ಲಕ್ಷ ರೂ ವೆಚ್ಚದಲ್ಲಿ ನಿರ್ಮಿಸಿದ ಹೈಟೆಕ್ ಶೌಚಾಲಯವನ್ನು ಉದ್ಘಾಟಿಸಿ ಶಾಲೆಯ ಶಿಕ್ಷಕರು ಮತ್ತು ಮಕ್ಕಳೊಂದಿಗೆ ಸಂತೋಷದಿಂದ ಬೆರೆತು ಸವಿನೆನಪಿಗೆ ಭಾವಚಿತ್ರ ತೆಗೆಸಿಕೊಂಡರು.
82-ಡಣಾಪುರ ಗ್ರಾಮಕ್ಕೆ ಭೇಟಿ : 82-ಡಣಾಪುರ ನೀಡಿ 46.70 ರೂ. ಲಕ್ಷಗಳ ಜಲಜೀವನ್ ಮಿಷನ್ ಮನೆ ಮನೆಗೆ ಗಂಗೆ ಕಾಮಗಾರಿಯನ್ನು ಉದ್ಘಾಟಿಸಿದರು. ಅಲ್ಲಿಯ ಮುಖ್ಯ ಸಮಸ್ಯೆಯಾದ ವಸತಿ ನಿವೇಶನಗಳಿಗೆ ಹಂಚಿಕೆಗೆ ಸಂಬಂಧಿಸಿದಂತೆ ಬೇಗನೆ ಇತ್ಯರ್ಥಗೊಳಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಸ್ಥಳೀಯರು ದೇವಸ್ಥಾನಗಳನ್ನು ನಿರ್ಮಿಸಲು ಬೇಡಿಕೆ ಇಟ್ಟರು ಆಗ ಶಾಸಕರು ಗುಡಿಗಳನ್ನು ಚಿಕ್ಕದಾಗಿ ಮಾಡಿಕೊಳ್ಳಿ ದೊಡ್ಡ ಗುಡಿಗಳನ್ನು ಕಟ್ಟದೆ ಶಾಲೆಗಳನ್ನು ದೊಡ್ಡದಾಗಿ ಕಟ್ಟಿಸಿಕೊಳ್ಳಿ ಎಂದು ಗ್ರಾಮಸ್ಥರಿಗೆ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ನಾಗೇನಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಎಮ್ ದುರುಪ್ಪ, ಬಿ ಇ ಓ ಚನ್ನಬಸಪ್ಪ, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಯಾದ ಹರೀಶ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಿಂಧು ಅಂಗಡಿ, ಎಸ್ ಡಿ ಎಂ ಸಿ ಸಮಿತಿಯ ಪದಾಧಿಕಾರಿಗಳು ಸೇರಿದಂತೆ ಎರಡು ಊರಿನ ಮುಖಂಡರುಗಳು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.

