ಮಿಸ್ಲಿಂಮರಿಗೆ ಖಜಾನೆ ದುಡ್ಡು
ಗ್ಯಾರಂಟಿಯಿಂದ ದಲಿತರಿಗೆ ಬಜೆಟ್ ನಲ್ಲಿ ಅನ್ಯಾಯ
ಕಾಂಗ್ರೆಸ್ ವಿರುದ್ಧ ಬಿಜೆಪಿ ಛಲವಾದಿ ನಾರಾಯಣಸ್ವಾಮಿ ಕಿಡಿ
ಕರುನಾಡ ಬೆಳಗು ಸುದ್ದಿ
ಕೊಪ್ಪಳ , 01- ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗಾಗಿ, ಅನುಷ್ಠಾನಗೊಳಿಸುತ್ತಿರುವ ಯೋಜನೆಗಳಿಗಾಗಿ ಮೀಸಲಿಟ್ಟಿರುವ ಹಣವನ್ನು ರಾಜ್ಯದಲ್ಲಿ ಆಡಳಿತಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ ಬೇರೆ ಯೋಜನೆಗೆ ಬಳಸಿ ಸಂವಿಧಾನದ ವಿರೋಧಿ ಅನುಸರಿಸಿದೆ ಎಂದು ಬಿಜೆಪಿ ಮುಖಂಡ ಹಾಗೂ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಆರೋಪಿಸಿದರು.
ಅವರು ಕೊಪ್ಪಳದ ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ಜರುಗಿದ ಸುದ್ಧಿ ಗೋಷ್ಠಿ ಉದ್ದೇಶಿಸಿ ಮಾತನಾಡಿದರು. ಭೂರಹಿತ ದಲಿತರಿಗೆ ಭೂಮಿ, ಗಂಗಾ ಕಲ್ಯಾಣ ಸೇರಿದಂತೆ ಯಾವುದೆ ಯೋಜನೆಗೆ ಹಣ ನೀಡದೆ ದುರ್ಬಳಕೆ ಮಾಡಿಕೊಳ್ಳುತ್ತಿದೆ.
ಬಜೆಟ್ ಹಣ ದಲಿತರಿಗೆ ಹಕ್ಕು ಸಿಕ್ಕಿಲ್ಲ ಕಾಂಗ್ರೆಸ್ ಸರ್ಕಾರ ಮೊದಲನೆ ವರ್ಷ 11144 ಕೋಟಿ ಹಾಗೂ ಎರಡನೆ ವರ್ಷ 14282 , ಒಟ್ಟು ಎರಡು ವರ್ಷ 25462 ಹಣ ಗ್ಯಾರಂಟಿ ಯೋಜನೆಗೆ ಬಳಕೆ ಮಾಡಿದೆ , 52900 ಕೋಟಿ ಬಜೆಟ್ನಲ್ಲಿ ಮಿಸಲಿರಿಸಿದ್ದ ದುಡ್ಡು ಎಲ್ಲಿ ಯೋಯ್ತು ಎಂದು ಪ್ರಶ್ನಿಸಿದರು.
ವಿಧಾನಸಭಾ ಚುನಾವಣೆಯಲ್ಲಿ, ಅಧಿಕಾರದ ಆಸೆಯಿಂದ ಆಮಿಷಗಳನ್ನು ಒಡ್ಡಿ, ಗ್ಯಾರೆಂಟಿ ಯೋಜನೆಗಳನ್ನು ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ ಎಂದರು. ಯೋಜನೆಗಳು ಅನಿಸ್ತಾನುಗೊಳಿಸಲು ಬೇಕಾದ ಹಣ ಕಾಂಗ್ರೆಸ್ ಸರ್ಕಾರದ ಕಜನೆಯಲ್ಲಿ ಖಾಲಿಯಾಗಿರುವುದರಿಂದ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳ ಮೀಸಲಾಗಿ ಇಟ್ಟಿರುವ ಹಣವನ್ನು ಬಳಸಿಕೊಳ್ಳುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ನಾವು 14 ತಂಡಗಳಾಗಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಬೃಹತ್ತಾದ ಹೋರಾಟ , ಈ ಬಜೆಟ್ ನಲ್ಲಿ ದಲಿರರಿಗೆ ಗ್ಯಾರಂಟಿಗೆ ಹಣ ಮಿಸಲಿರಿಸಬೇಕು ಇಲ್ಲಾವಾದಲ್ಲಿ ಸದನದ ಒಳ ಹೊರಗೆ ಹಾಗೂ ಕಾಂಗ್ರೆಸ್ ಸರ್ಕಾರ ವಿರುದ್ಧ ನ್ಯಾಯಾಲಯದಲ್ಲಿ ಹೋರಾಟ ಮಾಡುವುದಾಗಿ ಎಚ್ಚರಿಸಿದರು.
ಕಾನೂನು ಎಲ್ಲರಿಗೂ ಒಂದೇ ಸಿ ಎಂ ಸಿದ್ಧರಾಯ್ಯ ನವರು ಕೇಂದ್ರದಲ್ಲಿ ಹಣ ತರುವ ತಾಕತ್ತು ಇಲ್ಲದಿದ್ದರೆ ಸ್ಥಾನಕ್ಕೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿ , ಕೇಂದ್ರ ಸರ್ಕಾರಕ್ಕೆ ಅನುದಾನ ತರಲುಪೋಷ್ಟ್ ಮೇನ್ ಕಳಿಸುವುದನ್ನು ಬಿಡಲಿ ಎಂದರು.
ದಲಿತ ಸಂಘಟನೆಗಳು ಸಹ ದಲಿತರ ಪರವಾಗಿ ಹೋರಾಟ ಮಾಡಲಿ ಅವರು ಮುಂದೆ ಬಂದು ದಲಿತ ಸಮುದಾಯಕ್ಕೆ ವಂಚನೆಯಾದಾಗ ಹೋರಾಟ ಮಾಡಲಿ ಎಂದು ಕರೆ ನೀಡಿದರು.
ಈ ಸಂಧರ್ಭದಲ್ಲಿ ಶಾಸಕ ದುರ್ಯೋಧನ ಹೈಹೋಳೆ , mlc ಹೇಮಲತಾ ನಾಯಕ್, ಶಾಸಕ ದೊಡ್ಡನಗೌಡ ಪಾಟೀಲ್ , ಮುಖಂಡರಾದ ಬಸವರಾಜ ಕ್ಯಾವಟರ್ , ಶಿವನಗೌಡ ನಾಯಕ, ವೈ ಸಂಪಂಗಿ, ಮಾಜಿ ಸಚಿವ ಹಾಲಪ್ಪಆಚಾರ , ಮಹಾಂತೇಶ ಮೈನಳ್ಳಿ, ಚಂದ್ರಶೇಖರ್ ಹಲಗೇರಿ, ಸೋಮಶೇಖರ್ ಗೌಡ , ಕೆ ಎಸ್ ದಿವಾಕರ್ , ಗಿರೇಗೌಡ , ತಿಪ್ಪೇಸ್ವಾಮಿ ಇತರರು ಇದ್ದರು.
