25gvt2

ಜಾತ್ಯಾತೀತ ನಿಲುವಿಗಾಗಿ ಕಾಂಗ್ರೆಸ್ ಬೆಂಬಲ

ಕರುನಾಡ ಬೆಳಗು ಸುದ್ದಿ

ಗಂಗಾವತಿ, 26- ಜಾತ್ಯಾತೀತ ನಿಲುವಿಗಾಗಿ-ಕಾಂಗ್ರೇಸ ಪಕ್ಷದ ಅಭ್ಯರ್ಥಿಗಳಿಗೆ ಲೋಕ ಸಭಾ ಚುನಾವಣೆಯಲ್ಲಿ ಬೆಂಬಲಿಸುತ್ತಿದ್ದವೆ ಎಂದು ಸಿಪಿಐ(ಎಂ) ಪಕ್ಷದ ರಾಜ್ಯ ಸದಸ್ಯೆ ಎಸ್.ವರಲಕ್ಷ್ಮೀ ಹೇಳಿದರು.

ನಗರದ ಎಪಿಎಂಸಿ ಸಮುದಾಯ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ದೇಶದಲ್ಲಿ ಈಗಾಗಲೇ ಬಿಜೆಪಿ ಧರ್ಮದ ನೆಲೆಗಟ್ಟಿನ ಮೇಲೆ ದೇಶ ಒಡೆಯುವ ಕೆಲಸ ನಡೆಸುತ್ತಿದೆ. ಅಭಿವೃದ್ದಿಗಳು ಶೂನ್ಯವಾಗಿ ಸುಳ್ಳು ಹೇಳುವ ಕೆಲಸ ನಿರಂತರ ನಡದಿದೆ. ದೇಶವನ್ನು ಕೆಲವೇ ಶ್ರೀಮಂತರ ಕೈಗೊಂಬೆಯಾಗಿ ನಡೆಯುತ್ತಿವೆ.

ಕೇರಳದಲ್ಲಿ ನಮ್ಮಗೆ ಕಾಂಗ್ರೇಸ ಪಕ್ಷವೇ ವಿರೋಧಿಯಾಗಿದ್ದರೂ ಆಯಾ ರಾಜ್ಗದ ಪರಿಸ್ಥಿತಿ ಅನ್ವಯ ಒಪ್ಪಂದ ಮಾಡಿಕೊಂಡಿದ್ದವೆ.

ಕರ್ನಾಟಕದಲ್ಲಿ ಜೆಡಿಎಸ್ ಪಕ್ಷ ಜಾತ್ಯಾತೀತ ನಿಲುವು ಮಾರಿ ಬಿಜೆಪಿಯೊಂದಿಗೆ ಕೈಜೋಡಿಸಿದೆ. ದೇಶದ ಹಿತ ದೃಷ್ಠಿಯಿಂದ ಕಾಂಗ್ರೇಸ ಪಕ್ಷವನ್ನು ಗೆಲ್ಲಿಸಿ ಎಂದರು.

ಈಸಂದರ್ಭದಲ್ಲಿ ಸಿಪಿಐ(ಎಂ) ಕಾರ್ಯದರ್ಶಿ ನಿರುಪಾದಿ ಬೆಣಕಲ್,ಗ್ಯಾನೇಶ ಕಡಗದ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!