1a7bb088-4f9b-42e1-a2ba-2cdf8474020a

 ಯುವಕರು ಸ್ವಯಂ ಪ್ರೇರಿತರಾಗಿ ಬಂದು ರಕ್ತ ದಾನ ಮಾಡಿ

ತಾಲೂಕಿನ ಮುಧೋಳ ಗ್ರಾಮದಲ್ಲಿ ರಕ್ತದಾನ ಶಿಬಿರ

ಕರುನಾಡ ಬೆಳಗು ಸುದ್ದಿ
ಯಲಬುರ್ಗಾ 2. ಪ್ರತಿಯೊಬ್ಬರು ರಕ್ತದಾನ ಮಾಡಿ ಇನ್ನೂಂದು ಜೀವ ಉಳಿಸುವದಕ್ಕೆ ಕಾರಣಿಕತ೯ರಾಗಿ ಯುವಕರು ಸ್ವಯಂ ಪ್ರೇರಿತರಾಗಿ ಬಂದು ರಕ್ತ ದಾನ ಮಾಡಿ ಮತ್ತು ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕೊಪ್ಪಳ ಇವರ ಸೇವೆ ಶ್ಲಾಘನೀಯ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಮಮತ್ತಾಜಬೀ ಹುಸನಸಾಬ ಹಿರೇಮನಿ ಹೇಳಿದರು.

ತಾಲೂಕಿನ ಮುಧೋಳ ಗ್ರಾಮ ಪಂಚಾಯತಿ ಹಾಗೂ ಪ್ರಾಥಮಿಕ . ಆರೋಗ್ಯ ಕೇಂದ್ರ ಮುಧೋಳ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕೊಪ್ಪಳ ತಾಲೂಕ ಘಟಕ ಯಲಬುರ್ಗಾ ಮತ್ತು ಮುಧೋಳ ಗ್ರಾಮದ ಬಸವಜ್ಯೋತಿ ಶಿಕ್ಷಣ ಗ್ರಾಮೀಣ ಅಭಿವೃದ್ಧಿ ಟ್ರಸ್ಟ್ ಸಂಯುಕ್ತ ಆಶ್ರಯದಲ್ಲಿ ಶ್ರೀ ತ್ರಿಲಿಂಗಬಸವೇಶ್ವರ ಜಾತ್ರಾ ಮಹೋತ್ಸವ ನಿಮಿತ್ಯ ಹಮ್ಮಿಕೊಂಡಿದ್ದ 12 ನೇ ಬಾರಿ ರಕ್ತದಾನ ಶಿಬಿರವನ್ನು ಏಪಿ೯ಡ ಸಲಾಗಿತ್ತು.

ಕಾರ್ಯಕ್ರಮದ ಆರಂಭಕ್ಕೂ ಮುನ್ನ ಅಗಲಿದ ನೀಲಮ್ಮ ಹಲಗೇರಿ, ಹಾಗೂ ಶೇಖಪ್ಪ ಇಟ್ಟಿಗಿ ಇವರಿಗೆ ಮೌನದೊಂದಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು, ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಉದ್ಘಾಟನೆ ಮಾಡಿ ಮಾತನಾಡಿದರು . ರೆಡ್ ಕ್ರಾಸ್ ಸಂಸ್ಥೆಯ ದೇವೇಂದ್ರಪ್ಪ ಪ್ರಾಸ್ತಾವಿಕವಾಗಿ ಕಾರ್ಯಕ್ರಮ ಕುರಿತು ಮಾತನಾಡಿದರು. ಬಸವ ಜ್ಯೋತಿ ಶಾಲೆಯ ಅಧ್ಯಕ್ಷ ಶಿವಶರಣಪ್ಪ ಬಳಿಗಾರ ಮಾತನಾಡುತ್ತ ಗ್ರಾಮಸ್ಥರ ಹಾಗೂ ರಕ್ತ ದಾನಿಗಳ ನೆರವಿನಿಂದ ಈ ಶಿಬಿರವನ್ನು ನಡೆಸುತ್ತಾ ಬಂದಿದ್ದೇವೆ.

ಒಬ್ಬ ರಕ್ತದಾನಿಯಿಂದಾಗಿ 4 ಜನರ ಪ್ರಾಣ – ರಕ್ಷಣೆಯಾಗುವದು. ರಾಜ್ಯಪಾಲರ ಪ್ರಶಸ್ತಿ ಪಡೆದ ರೆಡ್ ಕ್ರಾಸ್ ಸಂಸ್ಥೆ ಸೇವೆ ಶ್ಲಾಘನೀಯ ಮತ್ತು ತತ್ಪರತೆ ಹೊಂದಿದೆ ಎಂದು ತಿಳಿಸಿದರು. ನಂತರ ರಕ್ತದಾನ – ಮಾಡಿರುವ ಮುಧೋಳ ಗ್ರಾಮದಲ್ಲಿ ಸ್ವಯಂ ಪ್ರೇರಣೆಯಿಂದ ರಕ್ತದಾನ ಮಾಡಿದರು. ವಿಶೇಷವಾಗಿ ಮೊಟ್ಟ ಮೊದಲ ಬಾರಿಗೆ ವಿಕಲಚೇತನ ಬಸವರಾಜ ಗುರಿಕಾರ ಹಿರೇಮಗೇರಿ ಗ್ರಾಮದವರು ರಕ್ತದಾನ ಮಾಡಿದರು.
ಶ್ರೀ ವಿ ಆರ್ ಡಬ್ಲ್ಯೂ ವೀರಭದ್ರಪ್ಪ ನಿಡಗುಂದಿ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರು ಇವರು ಇದು ಹೆಮ್ಮೆಯ ವಿಷಯ ಅವರು ಸ್ವಯಂ ಪ್ರೇರಣೆಯಿಂದ ರಕ್ತದಾನ ಮಾಡಿದ್ದು ವಿಶೇಷವಾಗಿತ್ತು.

ಪ್ರಾಥಮಿಕ ಆರೋಗ್ಯ ಇಲಾಖೆಯ ವೈದ್ಯಾಧಿಕಾರಿಗಳಾದ ಪವನ್ ಕೆ, ಅವರು ಮಾತನಾಡಿ ಜಾತ್ರೆ ಹಬ್ಬಗಳಲ್ಲಿ ಮೋಜು ಮಸ್ತಿಯೊಂದಿಗೆ ಇಂತಹ ಸಾರ್ಥಕ ಕಾರ್ಯ ಜರುಗಿಸುತ್ತಿರುವದು ಸಾರ್ಥಕ ಸೇವೆ ಎಂದರು. ಶ್ರೀ ಮತಿ ಮಮತಾಜಬಿ ಹು ಹಿರೇಮನಿ ಯವರು ಕೊಡುಗೆ ನೀಡಿದ ಮೊಮೆಂಟ ಪ್ರಶಸ್ತಿ ಪತ್ರದೊಂದಿದೆ ವಿತರಿಸಲಾಯಿತು, ನಂತರ ಪ್ರತಿಯೊಬ್ಬರ ರಕ್ತ ದಾನಿಗೆ ಹಾಲು. ಬ್ರೇಡ್. ಸೇವೆ ಸಲ್ಲಿಸಿದರು. ಬಸವರಾಜ ಕಮತರ ಇಂದು 30 ನೇ ಬಾರಿಯ ರಕ್ತದಾನ ಮಾಡಿದರು, ಹಿರಿಯ ಗ್ರಾಂಪಂ ಸದಸ್ಯ ಬಸಪ್ಪ ಅಕ್ಕಿ, ಮಾಜಿ ಗ್ರಾಂಪಂ ಸದಸ್ಯ ಚನ್ನಸಂಗಪ್ಪ ಶಿಳ್ಳಿನ, ಯಲ್ಲಪ್ಪ ಹುನಗುಂದ, ಆರೋಗ್ಯ ಇಲಾಖೆ ಸಿಬ್ಬಂದಿ ಅಂಜುಮ ಬೇಗಮ್, ಗುರುಸಿದ್ದನಗೌಡ, ಶಾರದಾ ಬಿಳೇಕಲ್ಲ, ರವಿ, ಮತ್ತು ಗ್ರಾಮದ ಭೀಮಪ್ಪ ದಗಲಿ ವಿ ಆರ್ ಡಬ್ಲ್ಯೂ ವೀರಭದ್ರಪ್ಪ ನಿಡುಗುಂದಿ, ಆಶಾ ಕಾರ್ಯಕರ್ತೆಯರು . ಗ್ರಾಮಸ್ಥರು ಮತ್ತು ಇತರರು ಭಾಗವಹಿಸಿದ್ದರು

Leave a Reply

Your email address will not be published. Required fields are marked *

error: Content is protected !!