WhatsApp Image 2024-06-17 at 5.14.49 PM

ನಾವೆಲ್ಲರೂ ಪ್ರೀತಿ ವಿಶ್ವಾಸದಿಂದ ಬದುಕಬೇಕು : ಶಾಸಕ ಬಿ.ಎಂ.ನಾಗರಾಜ

ಕರುನಾಡ ಬೆಳಗು ಸುದ್ದಿ

ಸಿರುಗುಪ್ಪ, 17- ಶಾಸಕ ಬಿ.ಎಂ ನಾಗರಾಜ ಅವರು ಈದ್ಗಾ ಮೈದಾನಕ್ಕೆ ಭೇಟಿ ನೀಡಿ ಪರಸ್ಪರ ಮುಸ್ಲಿಂ ಬಾಂಧವರಿಂದ ಹಬ್ಬದ ಶುಭಾಶಯ ಕೋರಿ ಮುಸ್ಲಿಂ ಸಮುದಾಯದವರಿಂದ ಗೌರವ ಸನ್ಮಾನ ಸ್ವೀಕರಿಸಿ ಮಾತನಾಡಿ ಸರ್ಕಾರದಿಂದ ಎರಡು ಕೋಟಿ ಅನುದಾನದಲ್ಲಿ ನೂತನ ಮುಸ್ಲಿಂ ಶಾದಿ ಮಹಲ್ ನಿರ್ಮಿಸುವುದಾಗಿ ಹಾಗೂ ಈದ್ಗಾ ಮೈದಾನದಲ್ಲಿ ಹೊಸದಾಗಿ ಈದ್ಗಾ ಕಟ್ಟಡಕ್ಕೆ ಹಾಗೂ ನಗರದಲ್ಲಿರುವ ವಿವಿಧ ಮಸೀದಿ ದರ್ಗಾ ಖಬರಸ್ಥಾನಕ್ಕೆ ದುರಸ್ತಿ ಕೆಲಸಗಳಿಗಾಗಿ ಶಾಸಕರ ಅನುದಾನದಲ್ಲಿ 75 ಲಕ್ಷ ರೂಪಾಯಿ ವೆಚ್ಚದ ಕಾರ್ಯ ಮಾಡುವುದಾಗಿ ತಿಳಿಸಿದರು.

ಇಮಾಮೋ ಖತೀಬ್ ಮೌಲಾನ ಮೊಹಮ್ಮದ್ ಅಮೀಸ್ ಮಹಮ್ಮದ್ ಕಲಂದರ್ ಖಾಜಿ ಸೈಯದ್ ಜಿಲಾನ್ ಪಾಶಾ ಖಾದ್ರಿ ಸಾಹೇಬರಿಗೆ ಹಾಗೂ ಹಾಫಿಜೊ ಇಮಾಮೋ ಖತೀಬ್ ನೂರುಲ್ ಹಕ್ ಮೌಲಾನ ಎಸ್ ಅಬ್ದುಲ್ ಸಮದ್ ಅವರಿಗೆ ಗೌರವಿಸಿ ಸನ್ಮಾನಿಸಿದ ಶಾಸಕರು ಮಾತನಾಡುತ್ತಾ ನಾವೆಲ್ಲರೂ ವಿವಿಧ ಧರ್ಮ ಜಾತಿಗೆ ಸೇರಿದರೂ ಭೇದ ಭಾವವಿಲ್ಲದೆ ಎಲ್ಲರೂ ಪರಸ್ಪರ ಪ್ರೀತಿ ವಿಶ್ವಾಸದಿಂದ ಬದುಕಿ ಬಾಳಬೇಕು ಮಳೆಯು ಸಕಲ ಜೀವ ರಾಶಿಗಳಿಗೆ ಜೀವ ಜಲವಾಗಿದೆ ಸಕಾಲಕ್ಕೆ ಮಳೆ ಬೆಳೆಯಾಗಲಿ ಜಗತ್ತು ಕ್ಷೇಮ ಯಾಗಿರಲು ನಮ್ಮೆಲ್ಲರಿಗೂ ಮಾನವೀಯ ಮೌಲ್ಯಗಳನ್ನು ರೂಡಿಸಿಕೊಳ್ಳುವ ಸಮಾಜದಲ್ಲಿ ಸರ್ವಧರ್ಮಿಯರೊಂದಿಗೆ ಭೇದ ಭಾವವಿಲ್ಲದಂತೆ ಶಾಂತಿ ಸೌಹಾರ್ದದಿಂದ ಬಾಳುವಂತೆ ಅಲ್ಲಾಹನಲ್ಲಿ ದುವಾ ಯಾಚಿಸಬೇಕು ಎಂದು ಧಾರ್ಮಿಕ ಪಂಡಿತರಲ್ಲಿ ಅವರು ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಹಂಡಿ ಹಾಶಿಮ್ ಚಿಟ್ಕಿ ಹುಸೇನ್ ಬಾಷಾ ಗೊರವರ ಶ್ರೀನಿವಾಸ ಬಿ ವೆಂಕಟೇಶ್ ಪವನ್ ದೇಸಾಯಿ ಹಾಜಿ ಬಿ ಮೆಹಮೂದ್ ಖತೀಬ್ ಜಹಿರುದ್ಧೀನ್ ಬಾಬು ಹಾಜಿ ಎ ಅಬ್ದುಲ್ ನಬಿ ಹಾಜಿ ಹಂಡಿ ಹುಸೇನ್ ಭಾಷಾ ಮತ್ತಿತರ ಮುಖಂಡರು ಇದ್ದರು.

Leave a Reply

Your email address will not be published. Required fields are marked *

error: Content is protected !!