WhatsApp Image 2024-02-10 at 5.02.26 PM

ನಿರಂತರ ಶ್ರಮಿಸುವದರಿಂದ ಯಶಸ್ಸಿನ ಹಾದಿಯನ್ನು ಕಾಣಬಹುದು : ಜಿಲ್ಲಾಧಿಕಾರಿ. ಎಂ ಎಸ್ ದಿವಾಕರ್

ಕರುನಾಡ ಬೆಳಗು ಸುದ್ದಿ

ವಿಜಯನಗರ,10- ವಿದ್ಯಾರ್ಥಿಗಳು ನಿರಂತರ ಶ್ರಮಿಸಿ ಶ್ರದ್ಧೆಯಿಂದ ಓದುವುದರಿಂದ ಯಶಸ್ಸಿನ ಹಾದಿಯನ್ನು ಕಾಣಬಹುದು ಎಂದು ಜಿಲ್ಲಾಧಿಕಾರಿಗಳು, ಎಂಎಸ್, ದಿವಾಕರ ಅವರು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.

ನಗರದ ವಿಜಯನಗರ ಮಹಾವಿದ್ಯಾಲಯ ಸಭಾಂಗಣದಲ್ಲಿ ನಡೆದ ಯಶಸ್ಸಿನ ಹಾದಿಯೆಂಬ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದರು. ಜೀವಿತದಲ್ಲಿ ಅತ್ಯುತ್ತಮ ಸ್ಥಾನಗಳನ್ನು ಪಡೆಯಬೇಕೆಂದರೆ ವಿದ್ಯಾರ್ಥಿ ದೆಸೆಯಿಂದಲೇ ಶ್ರಮಿಸುವುದು ಅಭ್ಯಾಸ ಮಾಡಿಕೊಳ್ಳಬೇಕೆಂದರು. ಕಷ್ಟಪಟ್ಟು ಓದುವುದರಿಂದ ಮಾತ್ರ ಯಶಸ್ಸಿನ ಹಾದಿಯನ್ನು ಕಂಡುಕೊಳ್ಳಬಹುದು ಎಂದು, ಪ್ರತಿ ವಿದ್ಯಾರ್ಥಿಯಲ್ಲಿಯೂ ಭಗವಂತ ಪ್ರತಿಭೆಯನ್ನು ತುಂಬಿರುತ್ತಾನೆ, ಕಷ್ಟಪಟ್ಟು ಓದುವ ವಿದ್ಯಾರ್ಥಿ ರ್ಯಾಂಕುಗಳನ್ನು ಪಡೆಯುತ್ತಾನೆ ಎಂದು ಹೇಳಿದರು.

ವಿಜಯನಗರ ಮಹಾವಿದ್ಯಾಲಯ ಅಧ್ಯಕ್ಷರಾಗಿ ಕಳೆದ ಎರಡು ವರ್ಷಗಳಿಂದ ಕೆಲಸ ಮಾಡುತ್ತಿರುವ ಅಸುಂಡಿ ನಾಗರಾಜ್ ಗೌಡ ಅವರು ವಿದ್ಯಾಲಯ, ಮತ್ತು ವಿದ್ಯಾರ್ಥಿಗಳ ಅಭಿವೃದ್ಧಿಗಾಗಿ ಎಷ್ಟೋ ಶ್ರಮಿಸಿದ್ದಾರೆ ಎಂದು ತಿಳಿಸಿದರು.

ನಂತರ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಶ್ರೀ, ಜಗದ್ಗುರು ಕೊಟ್ಟೂರು ಬಸವಲಿಂಗ ಮಹಾಸ್ವಾಮಿಗಳು ಮಾತನಾಡುತ್ತ, ಮಹಾದಾನೆಗಳಿಂದ ವಿವಿ ಸಂಘ ಸ್ಥಾಪನೆಯಾಗಿರುವುದು, ಅದರ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಿದ್ಯಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಓದಿಕೊಂಡು ತಮ್ಮ ಜೀವನವನ್ನು ಉತ್ತಮ ರೀತಿಯಲ್ಲಿ ಬದಲಾಯಿಸಿಕೊಂಡಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಮಹಾವಿದ್ಯಾಲಯದ ಯಶಸ್ವಿಗಾಗಿ ಶ್ರಮಿಸಿದ ನಾಗರಾಜ್ ಗೌಡ ಅವರನ್ನು ಜಿಲ್ಲಾಧಿಕಾರಿ, ದಿವಾಕರ್ ಮತ್ತು ಕಾರ್ಯಕ್ರಮದಲ್ಲಿ ಪಾಲ್ಗೊಂಡ ಎಲ್ಲಾ ಸ್ವಾಮೀಜಿಗಳು ಸನ್ಮಾನ ಮಾಡಿ ಆಶೀರ್ವದಿಸಿದರು.

ಈ ಕಾರ್ಯಕ್ರಮದಲ್ಲಿ ಶ್ರೀ ವಾಮದೇವ ಶಿವಾಚಾರ್ಯ ಮಹಾಸ್ವಾಮಿ ಎಮ್ಮಿಗನ್ನೂರು, ಶ್ರೀ ಸೋಮ ಶಂಕರ ಮಹಾಸ್ವಾಮಿಗಳು ಉತ್ತಂಗಿ, ಶ್ರೀ ಡಾ. ಸಿದ್ದಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಕೊಟ್ಟೂರು, ಸಂಡೂರು, ಶ್ರೀ ಕಲ್ಯಾಣ ಮಹಾಸ್ವಾಮಿಗಳು ಬಳ್ಳಾರಿ, ಶ್ರೀ ಡಾ.ಇರಿ ಶಾಂತವೀರ ಮಹಾಸ್ವಾಮಿಗಳು ಹೂವಿನಹಡಗಲಿ, ಶ್ರೀ ವರಸ ದೋಖ್ಯಾತ ಶಿವಾಚಾರ್ಯ ಮಹಾಸ್ವಾಮಿಗಳು ಹರಪನಹಳ್ಳಿ, ಮಹೇಶ್ವರ ಸ್ವಾಮಿಗಳು ನಂದಿಪುರ ಮತ್ತು ನಗರದ ಗಣ್ಯ ವ್ಯಕ್ತಿಗಳಾದ ಗೊಗ್ಗ ಚನ್ನಬಸವರಾಜ, ಸಾಲಿ ಬಸವರಾಜ ಜಾಲಿ ಪ್ರಕಾಶ ಕೆ ರವಿಶಂಕರ ಎಸ್ ಬಸವರಾಜ್ ( ಮಾವಿನಹಳ್ಳಿ) ಕೆ ತಿಪ್ಪೇಸ್ವಾಮಿ, ಮಹಾವಿದ್ಯಾಲಯದ ಪ್ರಾಚಾರ್ಯರು ಪ್ರಫೆಸರ್ ಸುಭಾಷ್ ಜೊತೆಗೆ ಉಪನ್ಯಾಸಕರು ಮತ್ತು ಬೋಧಕ್ಕೆ ತರ ಸಿಬ್ಬಂದಿ, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *

error: Content is protected !!