ಪವಿತ್ರ ರಂಜಾನ್ ಹಬ್ಬದಲ್ಲಿ ಮಾಜಿ ಶಾಸಕ ಕೆ. ಬಸವರಾಜ ಹಿಟ್ನಾಳ ಭಾಗಿ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 11- ಪವಿತ್ರ ರಂಜಾನ್ ಹಬ್ಬದ ಪ್ರಯುಕ್ತ ಮುಸ್ಲಿ ಭಾಂದವರು ನಗರದ ಈದ್ಗಾ ಮೈದಾನದಲ್ಲಿ ಪ್ರಾರ್ಥನೆ ಸಲ್ಲಿಸಿದರು.
ಇದೇ ವೇಳೆ ಮಾಜಿ ಶಾಸಕರಾದ ಕೆ. ಬಸವರಾಜ ಹಿಟ್ನಾಳ ಭಾಗಿಯಾಗಿ ಶ್ರದ್ಧಾ ಭಕ್ತಿಯ ಪ್ರತೀಕವಾದ ರಂಜಾನ್ ಹಬ್ಬವು ನಾಡಿನಲ್ಲಿ ಸುಖ, ಶಾಂತಿ, ಸೌಹರ್ದತೆಯು ನೆಲೆಗೊಳ್ಳಲು ಪ್ರೇರಣೆಯಾಗಲಿ ಎಂದು ಹಾರೈಸುತ್ತೇನೆ. ಸಮಸ್ತ ಮುಸ್ಲಿಂ ಬಾಂಧವರಿಗೆ ರಂಜಾನ್ ಹಬ್ಬದ ಶುಭಕೋರಿದ್ದಾರೆ.
ರಂಜಾನ್ ಹಬ್ಬ. ಪ್ರತಿಯೊಬ್ಬ ಮುಸಲ್ಮಾನನಿಗೆ ರ್ಷದಲ್ಲಿ ಒಂದು ಬಾರಿ ಬರುವ ಅತ್ಯಂತ ದೊಡ್ಡ ಹಬ್ಬ. ಕೇವಲ ನಮ್ಮ ಭಾರತದಲ್ಲಿ ಮಾತ್ರವಲ್ಲದೆ ಇಡೀ ವಿಶ್ವದಾದ್ಯಂತ ಇರುವ ಎಲ್ಲಾ ಮುಸ್ಲಿಮರು ಒಂದು ತಿಂಗಳ ಕಾಲ ಕಟ್ಟುನಿಟ್ಟಾಗಿ ಉಪವಾಸವಿದ್ದು, ಅತ್ಯಂತ ಭಯ ಭಕ್ತಿಯಿಂದ ಆಚರಣೆ ಮಾಡುವ ವಿಶಿಷ್ಟ ಹಬ್ಬ ಈ ಸಮಯದಲ್ಲಿ ದೇವರ ಪ್ರರ್ಥನೆ, ಕುರಾನ್ ಓದುವುದು ಮತ್ತು ದಾನ ರ್ಮ ಮಾಡುವುದು ಪ್ರಮುಖ ಕರ್ಯಗಳಾಗಿರುತ್ತವೆ.
ಇಡೀ ದಿನ ಉಪವಾಸ ಇರುವುದರಿಂದ ಮುಸಲ್ಮಾನರ ಮಾನಸಿಕ ಸ್ಥರ್ಯ ಬಲಗೊಂಡು ಅವರ ನಂಬಿಕೆಯ ಮೇಲೆ ಕರ್ಯೋನ್ಮುಖವಾಗುವಂತಹ ಶಕ್ತಿಯನ್ನು ದೇವರು ದಯಪಾಲಿಸುತ್ತಾನೆ ಎಂಬ ನಂಬಿಕೆಯಿದೆ.
ಈ ಸಮಯದಲ್ಲಿ ಬಡವರ ಬಗ್ಗೆ ಕಾಳಜಿ ವಹಿಸಿ ಶ್ರೀಮಂತರು ಅವರಿಗೆ ಅಗತ್ಯವಿರುವ ವಸ್ತ್ರಗಳು, ಆಹಾರ ಸಾಮಗ್ರಿಗಳನ್ನು ದಾನ ಮಾಡುತ್ತಾರೆ. ಎಂದು ಹೇಳಿದರು.
ಈ ಸಂದರ್ಭದಲ್ಲಿ ಮುಸ್ಲಿಂ ಸಮುದಾಯದ ನಾಯಕರು ಅಭಿಮಾನಿಗಳು ಉಪಸ್ಥಿತರಿದ್ದರು.
