WhatsApp Image 2024-04-07 at 6.48.30 PM

ಬ್ರೂಸ್ ಪೇಟೆ ಪೊಲೀಸರಿಂದ 5.6 ಕೋಟಿ ಹಣ ಮತ್ತು ಬಂಗಾರದ ಒಡೆವೆಗಳ ವಶ

ಕರುನಾಡ ಬೆಳಗು ಸುದ್ದಿ

ಬಳ್ಳಾರಿ, 7- ನಗರದ ಕಂಬಳಿ ಬಜಾರನಲ್ಲಿರುವ ಹೇಮಾ ಜುವೆಲರ್ಸ್ ಮಾಲಿಕರಾದ ನರೇಶ್ ಸೋನಿ ತಂದೆ ಪುಕ್ ರಾಜ್ ಸೋನಿ, 42 ವರ್ಷ, ಮಾರ್ವಾಡಿ ಸೋನಿ ಜನಾಂಗ, ಮನೆಯಲ್ಲಿ ಯಾವುದೇ ದಾಖಲೆಗಳಿಲ್ಲದೆ ಹಣ, ಬಂಗಾರ ಹಾಗೂ ಬೆಳ್ಳಿಯನ್ನು ಇಟ್ಟುಕೊಂಡಿರುವುದಾಗಿ ಖಚಿತ ಮಾಹಿತಿ ಬಂದ ಮೇರೆಗೆ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ರಂಜೀತ್ಕುಮಾರ್ ಬಂಡಾರು ಇವರ ಮಾರ್ಗದರ್ಶನದಲ್ಲಿ ನಗರ ಡಿ.ವೈ ಎಸ್.ಪಿ ಚಂದ್ರಕಾಂತ್ ನಂದ ರೆಡ್ಡಿ ಹಾಗೂ. ಬ್ರೂಸ್‌ಪೇಟೆ ಪೊಲೀಸ್‌ ಠಾಣೆ ಪೊಲೀಸ್ ಇನ್ಸ್ ಪೆಕ್ಟರ್ ಎಂ.ಎನ್. ಸಿಂಧೂರ್ ರವರು ತಮ್ಮ ಎಫ್.ಎಸ್.ಟಿ. ಟೀಮ್ ಮತ್ತು ಠಾಣೆಯ ಸಿಬ್ಬಂದಿಗಳೊಂದಿಗೆ ದಾಳಿಮಾಡಿ ಅಪಾರ ಪ್ರಮಾಣದ ನಗದು ಹಣ, ಬಂಗಾರ ಮತ್ತು ಬೆಳ್ಳಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಸೋನಿಯವರ ಮನೆಯಿಂದ 5 ಕೋಟಿ 60 ಲಕ್ಷ ರೂಪಾಯಿ ಹಣ, ರೂ 1 ಕೋಟಿ 4 ಲಕ್ಷ ಬೆಲೆ ಬಾಳುವ 3 ಕೆ.ಜಿ ಬಂಗಾರದ ಆಭರಣಗಳು, ರೂ 42 ಲಕ್ಷ ಬೆಲೆ ಬಾಳುವ ಬೆಳ್ಳಿಯ ಆಭರಣಗಳು ಸೇರಿದಂತೆ ಒಟ್ಟು 7.60 ಕೋಟಿ ಬೆಲೆಬಾಳುವ ನಗ ಮತ್ತು ನಗದನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಎಸ್.ಪಿ ತಿಳಿಸಿದ್ದಾರೆ. ಅವರು ಈ ಸಂದರ್ಭದಲ್ಲಿ ಮಾದ್ಯಮದವರೊಂದಿಗೆ ಮಾತನಾಡಿ, ನಮ್ಮ ಸಿಬ್ಬಂದಿ ಸೋನಿಯವರ ಮನೆಯಲ್ಲಿ ಯಾವುದೇ ಲೆಕ್ಕಪತ್ರ ಮತ್ತು ದಾಖಲೆಗಳಿಲ್ಲದ ಕಾರಣ ಹಣ ಮತ್ತು ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ, ಸೋನಿಗೆ ಯಾವುದೇ ರಾಜಕೀಯ ಹಿನ್ನೆಲೆಯಿಲ್ಲದ ಕಾರಣ ವ್ಯಾಪಾರಕ್ಕೆಂದು ಇಟ್ಟುಕೊಂಡಿರಬಹುದು ಅಥವಾ ಹವಾಲ ಹಣ ಇರಬಹುದು ಎಂಬುದು ಮುಂದಿನ ತನಿಖೆಯಿಂದ ಗೊತ್ತಾಗಲಿದೆ ಎಂದು ಮಾಹಿತಿ ನೀಡಿದ್ದಾರೆ.

ಈ ಸಂದರ್ಭದಲ್ಲಿ ಬ್ರೂಸ್ ಪೇಟೆ ಠಾಣೆಯ ಪಿ.ಎಸ್.ಐ ವೆಂಕಟೇಶ್ ಚೌಹಾಣ್, ಎ.ಎಸ್.ಐ. ಅಶೋಕ್ ಮೈನಳ್ಳಿ, ಹೊನ್ನೂರಪ್ಪ, ನಾಗರಾಜ್ ಮತ್ತು ಹೆಡ್ ಕಾನ್ ಸ್ಟೇಬಲ್ ಗಳಾದ ಆನಂದ್ ರೆಡ್ಡಿ, ಕುಮಾರ್ ರೆಡ್ಡಿ, ಶರ್ಮಾಸ್. ಆರ್, ಆಂಜಿನೇಯರೆಡ್ಡಿ ರಾಜಶೇಖರ್, ಶ್ರೀನಿವಾಸ್, ಮಹಿಳಾ ಸಿಬ್ಬಂದಿಯಾದ ಶಕುಂತಲಾ, ಕು! ಶ್ವೇತಾ, ಪಿ.ಸಿಗಳಾದ. ಸುನೀಲ್‌, ದಾಸಪ್ಪ, ರಾಮಾಂಜಿನಿ, ರವರು ಭಾಗವಹಿಸಿದ್ದರು.

ಈ ಕುರಿತು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳಾದ ರಂಜಿತ್ ಕುಮಾರ್ ಬಂಡಾರು ಹಾಗೂ ಹೆಚ್ಚುವರಿ ವರಿಷ್ಟಾಧಿಕಾರಿಗಳಾದ ಕೆ.ಪಿ. ರವಿಕುಮಾರ್, ಮತ್ತು ನವೀನ್ ಕುಮಾರ್.ಎನ್. ರವರು ಬ್ರೂಸ್ ಪೇಟೆ ಪೊಲೀಸರ ಕಾರ್ಯಕ್ಕೆ ಪ್ರಶಂಸೆ ವ್ಯಕ್ತ ಪಡಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!