WhatsApp Image 2024-02-04 at 5.50.57 PM

ಫೆ. 8ರಂದು ಸ್ವಾಭಿಮಾನಿ ಗ್ರಾಮ ಪಂಚಾಯಿತಿ ಸದಸ್ಯರಿಂದ ಬೆಂಗಳೂರು ಚಲೋ : ಜಿಲ್ಲಾಧಿಕಾರಿಗಳಿಗೆ ಮನವಿ

ಕರುನಾಡ ಬೆಳಗು ಸುದ್ದಿ

ವಿಜಯನಗರ,4- ಗ್ರಾಮ ಪಂಚಾಯಿತಿಗಳ ಸಮಸ್ಯೆಗಳ ಬಗ್ಗೆ ರಾಜ್ಯ ಸರ್ಕಾರದ ಗಮನ ಸ ಳಿಯಲು, ಇದೇ ತಿಂಗಳು 8 ತಾರೀಕು ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ಒಕ್ಕೂಟದ ವತಿಯಿಂದ ಚಲೋ ಬೆಂಗಳೂರು ಕಾರ್ಯಕ್ರಮವನ್ನು ಹಮ್ಮಿಕೊಂಡಿರುವದಾಗಿ, ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ಒಕ್ಕೂಟದ ವಿಜಯನಗರ ಜಿಲ್ಲಾ ಅಧ್ಯಕ್ಷರು, ಸಣ್ಣಕ್ಕಿ ಲಕ್ಷ್ಮಣ ತಿಳಿಸಿದ್ದಾರೆ.

ಈ ವಿಷಯಕ್ಕೆ ಸಂಬಂಧಪಟ್ಟ ಈಗಾಗಲೇ, ಜಿಲ್ಲಾಧಿಕಾರಿಗಳಿಗೆ ಮನವಿ ಕೂಡ ಸಲ್ಲಿಸುವ ಸೇರುವದಾಗಿ ತಿಳಿಸಿದರು. ಗಾಂಧೀಜಿಯವರ ಗ್ರಾಮ ಸ್ವರಾಜ್ಯದ ಕನಸನ್ನು ನನಸು ಮಾಡುವ ನಿಟ್ಟಿನಲ್ಲಿ ಭಾರತದ ಸಂವಿಧಾನದ ಪ್ರಕರಣ 243 ಜಿ ಮತ್ತು ಕರ್ನಾಟಕ ಗ್ರಾಮ ಸ್ವರಾಜ್ಯ ಮತ್ತು ಪಂಚಾಯತ್ ಅಭಿನಯದ 1993 ರ ಪ್ರಕರಣ 58 (4) ಅನ್ವಯ ಗ್ರಾಮ ಪಂಚಾಯಿತಿಗಳು ಸ್ಥಳೀಯ ಸ್ವಯಂ ಸರ್ಕಾರಗಳಾಗಿವೆ.

ಆದರೆ ಮೇಲಿನ ಹಂತದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ನೇರವಾಗಿ ಗ್ರಾಮ ಪಂಚಾಯಿತಿಗಳ ಆಡಳಿತದಲ್ಲಿ ನಿರ್ಣಯಗಳಲ್ಲಿ ಹಸ್ತಕ್ಷೇಪ ಮಾಡುವ ಮೂಲಕ ಗ್ರಾಮ ಪಂಚಾಯಿತಿ ಗಳನ್ನು ತಮ್ಮ ಕೈ ಕೆಳಗೆ ಕಾರ್ಯನಿರ್ವಹಿಸುವ ಶಾಖ ಕಚೇರಿಗಳನ್ನಾಗಿ ಮಾಡಿಕೊಂಡಿದ್ದಾರೆ. ಇದರಿಂದಾಗಿ ಸಂವಿಧಾನದ ಬದ್ಧ ಸಂಸ್ಥೆಗಳಾದ ಗ್ರಾಮ ಪಂಚಾಯಿತಿಗಳಿಗೆ ಪ್ರಜಾ ಸತ್ತಾತ್ಯಕವಾಗಿ ಆಯ್ಕೆಯಾದ ಗ್ರಾಮ ಪಂಚಾಯತಿಯ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯರು ಕೇವಲ ಮೂಕ ಪ್ರೇಕ್ಷಕರಾಗಿದ್ದಾರೆ.

ಪಂಚಾಯತ್ ರಾಜ್ ವ್ಯವಸ್ಥೆಯ ಮೂಲಕ ಭಾರತದ ಕಟ್ಟೆ ಕಡೆಯ ವ್ಯಕ್ತಿಯನ್ನು ಪ್ರಭು ವನ್ನಾಗಿಸಬೇಕೆಂಬ ಮಣ್ಣು ಪಾಲಾಗಿದೆ ಎಂದರು.

ತಮ್ಮ ಒಕ್ಕೂಟ ನೇತೃತ್ವದಲ್ಲಿ ಫೆಬ್ರವರಿ ಎಂಟು ಗುರುವಾರ ಬೆಳಗ್ಗೆ 10:30 ಗಂಟೆಗೆ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ಸದಸ್ಯರ ಮಹಾಾಕೂಟದ ರಾಜ್ಯದ್ಯಕ್ಷ ರಾಧಾ ಕಾಡಶೆಟ್ಟಿ ಹಳ್ಳಿ ಸತೀಶ್ ರವರ ನೇತೃತ್ವದಲ್ಲಿ ಹಮ್ಮಿಕೊಂಡಿದ್ದಾರೆ ಎಂದು ತಿಳಿಸಿದರು. ಗ್ರಾಮ ಪಂಚಾಯಿತಿಗಳಿಗೆ ತಮ್ಮ ಜವಾಬ್ದಾರಿಗಳು ಸಮರ್ಥವಾಗಿ ನಿರ್ವಹಿಸಲು ಬೇಕಾಗುವ ಜವಾಬ್ದಾರಿ ನಕ್ಷರಚನೆ ಮಾಡಬೇಕೆಂದು ಪ್ರಜಾ ಪ್ರಭುತ್ವದ ಮೂಲ ಘಟಕಗಳಾದ ಪ್ರಜೆಗಳಿಗೆ ಅಧಿಕಾರ ನೀಡಲು ಗ್ರಾಮ ಸಭೆಗಳಿಗೆ ನಿಯಮಗಳ ರಚನೆ ಮಾಡಬೇಕೆಂದು. ಹೀಗೆ ಹತ್ತಾರು ತಮ್ಮ ಬೇಡಿಕೆಗಳ ಪರಿಷ್ಕಾರಕ್ಕಾಗಿ ಸರ್ಕಾರ ಗಮನಕ್ಕೆ ತರುತ್ತೇವೆ ಎಂದು ಈ ಸಂದರ್ಭವಾಗಿ ಅವರು ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!