ಆಮ್ ಆದ್ಮಿ ಪಕ್ಷದ ತತ್ವ ಸಿದ್ಧಾಂತಗಳನ್ನು ಒಪ್ಪಿ ಪಕ್ಷಕ್ಕೆ ಸೇರ್ಪಡೆ
ಕರುನಾಡ ಬೆಳಗು ಸುದ್ದಿ
ಬಳ್ಳಾರಿ,26- ಆಮ್ ಆದ್ಮಿ ಪಕ್ಷದ ರಾಜ್ಯ ಯುವ ಘಟಕದ ಅಧ್ಯಕ್ಷರಾದ ಲೋಹಿತ್ ಹನುಮಪುರ್ ಹಾಗೂ ರಾಜ್ಯ ಮಾಧ್ಯಮ ಸಂಚಾಲಕರಾದ ಜಗದೀಶ್ ಸದಂ, ಹಾಗೂ ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದ ಶಾಸಕ ಸ್ಥಾನದ ಪರಾಜಿತ ಅಭ್ಯರ್ಥಿಯಾದ ಕೊರಲಗುಂದಿ ವಿ.ದೊಡ್ಡಕೇಶವ ರೆಡ್ಡಿ, ಮತ್ತು ಆಮ್ ಆದ್ಮಿ ಪಕ್ಷದ ಬಳ್ಳಾರಿ ಜಿಲ್ಲಾ ಅಧ್ಯಕ್ಷರಾದ ಶ್ರೀ ಜೆ ವಿ. ಮಂಜುನಾಥ ಇವರ ಸಮ್ಮುಖದಲ್ಲಿ ದರೋಜಿ ಮತ್ತು ತೋರಣಗಲ್ಲು ಗ್ರಾಮದ ಯುವಕರು ಆಮ್ ಆದ್ಮಿ ಪಕ್ಷದ ತತ್ವ ಸಿದ್ಧಾಂತಗಳನ್ನು ಒಪ್ಪಿ ಪಕ್ಷಕ್ಕೆ ಸೇರ್ಪಡೆಯಾದರು.
ಈ ಸಂದರ್ಭದಲ್ಲಿ ಪಕ್ಷದ ಮುಖಂಡರುಗಳಾದ ಅಮರ್, ವೆಂಕಟೇಶ್, ಲೋಕೇಶ್ ,ರುದ್ರಪ್ಪ, ಮಾರುತಿ, ಲೇಪಾಕ್ಷಿ ನರಸಿಂಹ ರಾಜು ನಾಗರಾಜು ವಿಜಯ್ ಪ್ರದೀಪ್ ಮುಂತಾದ ಅನೇಕ ಯುವಕರು ಸೇರ್ಪಡೆಯಾದರು.
